ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೧೬.] ಯುದ್ಧಕಾಂಡವು. ೨೧೬೯ ಎಂದು ನೀವು ಕೇಳಬಹುದು ಎಲೈ ಮಹಾರಾಜನೇ ! ಇಂತಹ ಸಂದರ್ಭಗ ಇಲ್ಲಿ, ಗುಣದೋಷಗಳಲ್ಲಿ ಯಾವುದು ಹೆಚ್ಚೆಂಬುದನ್ನು ಮಾತ್ರವೇ ನಾವು ನೋಡಬೇಕು ಹಾಗೆಯೇ ಈ ವಿಭೀಷಣನಲ್ಲಿ ಯೂ ದೊಷವೇ ಹೆಜ್ಜೆ ಂದು ತೋರಿದರೆ, ಅವನನ್ನು ನಿಸ್ಸಂದೇಹವಾಗಿ ತ್ಯಜಿಸಬೇಕು ಹಾಗಿಲ್ಲದೆ ಗುಣ ಗಳೇ ಹೆಚ್ಚಾಗಿರುವುವೆಂದು ತೋರಿದರೆ ಅಂಗೀಕರಿಸಬಹುದು ಆದುದರಿಂ ದ ಈತನನ್ನು ಕರೆಸಿಕೊಂಡು, ಮೊದಲು ಪರೀಕ್ಷಿಸಿ, ಆಮೇಲೆ ವಿಶ್ವಾಸವನ್ನು ತೋರಿಸಬಹುದು” ಎಂದನು ಆಮೆಲೆ ಶರಭನೆಂಬ ಕಪಿಯು, ತನ್ನಲ್ಲಿತಾನು (“ಒಬ್ಬ ಮನುಷ್ಯನೊಡನೆ ಬಳಕೆ ಮಾಡುವುದಕ್ಕೆ ಮೊದಲೇ ಅವನ ಗುಣದೋ ಷಗಳು ತಿಳಿಯಲಾರವು ಅಂತವನನ್ನು ಪರೀಕ್ಷಿಸದೆಯೇ ಪರಿಗ್ರಹಿಸಿದ ಪಕ್ಷದಲ್ಲಿ ಮಂತ್ರಹಾನಿಯುಂಟಾಗುವುದು ಹಾಗಿಲ್ಲದೆ ಪರಿತ್ಯಜಿಸಿದರೂ ಕೈಗೆ ಬಂದ ಬಲವು ತಪ್ಪಿ ಹೋಗುವುದು ಆದುದರಿಂದ ಈ ಅಂಗದನ ಮಾತಿನಂತೆ ನಡೆ ಯುವುದಕ್ಕೆ ಸಾಧ್ಯವೇ ಇಲ್ಲ ” ಎಂದು ಚಿಂತಿಸಿ, ಮುಂದೆ ತನಗೆ ಸಾ ಧ್ಯವೆಂದು ತೋರಿದ ರೀತಿಯನ್ನ ನಿಶ್ಚಯಿಸಿಕೊಂಡು, ರಾಮನನ್ನು ಕುರಿ ತು 'ಎಲೆ ರಾಜಸಿಹ್ಮನೆ' ನಿಜಸ್ಥಿತಿಯನ್ನು ತಿಳಿಯದೆ ಇದಕ್ಕಿದ್ದಹಾಗೆ ಈತ ನನ್ನ ಪರಿಗ್ರಹಿಸುವುದಕ್ಕಿಲ್ಲ ಹಾಗೆ ಪರಿಗ್ರಹಿಸುವುದಕ್ಕೆ ಮೊದಲೇ ಈತ ನು ದಷ್ಯನೇ ಅಲ್ಲವೇ ಎಂಬುದನ್ನು ತಿಳಿಯುವುದೂ ಸಾಧ್ಯವಲ್ಲ ಆದುದ ರಿಂದ ಆ ಕಾರಕಾಗಿ ನಾವು ಈಗಲೇ ಆ ವಿಭೀಷಣನಬಗೆ ಗೂಢಚಾರ ನೊಬ್ಬನನ್ನು ಕಳುಹಿಸಬೇಕು. ಆ ಚಾ ರನ ಮೂಲಕವಾಗಿ ನೀತಿಶಾಸೋ ಕರೀತಿಯಿಂದ ಅವನ ಗುಣದೋಷಗಳನ್ನು ಪರೀಕ್ಷಿಸಿ, ಆಮೇಲೆ ನ್ಯಾಯ ರೀತಿಯಿಂದ ಪುಗ್ರಹಿಸಬಹುದು ” ಎಂದನು ಆ ಮೇಲೆ ರಾಜನೀತಿಯಲ್ಲಿ ನಿಪುಣನಾದ ಜಾಂಬವಂತನು, ನೀತಿಶಾಸ್ತ್ರ ಕ್ರಮದಿಂದ ತನ್ನಲ್ಲಿ ತಾನು ಪ ರಾಲೋಚಿಸಿ, ಆ ಅಂಗದನ, ಮತ್ತು ಶರಭನ ಮತಗಳೆರಡನ್ನೂ ಒಪ್ಪದೆ, ರಾಮನನ್ನು ಕುರಿತು, ಗುಣಯುಕ್ತವಾಗಿಯೂ, ದೋಷರಹಿತವಾಗಿಯೂ

  • ಇಲ್ಲಿ ಶರಭನು "ಗುಣವಿದ್ದರೆ ಪರಿಗ್ರಹಿಸಬಹುದೆಂದುಮಾತ್ರವೇ ಹೇಳಿದನೇ ಹೋರತು, ದೋಷವಿದ್ದರೆ ತ್ಯಜಿಸಬೇಕೆಂದು ಹೇಳದೆ ಬಿಟ್ಟು ದೇಕೆ?” ಎಂದರೆ, ರಾಮ ನಿಗೆ ಶರಣಾಗತರಲ್ಲಿರುವ ವಾತ್ಸಲ್ಯಾತಿಶಯವನ್ನು ನೋಡಿ, ಅವನ ಮುಂದೆ ಆ ಮಾತನ್ನು ಹೇಳುವುದಕ್ಕೆ ಹೆದರಿ, ಅಷ್ಟರಲ್ಲಿಯೇ ಬಿಟ್ಟನೆಂದು ತಿಳಿಯಬೇಕು.

137