ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೭೨ ಶ್ರೀಮದ್ರಾಮಾಯಣವು (ಸರ್ಗ, ೧೭. ತಮಗೆ ತೋರಿದ ಮಾತುಗಳನ್ನು ಹೇಳಿದರಷ್ಟೆ ? ಅವುಗಳಲ್ಲಿ ನನಗೆ ದೋಷ ವೇ ಕಾಣುವುದು ಮೊದಲು ಈ ಆಂಗದನು ಹೇಳಿದಂತೆ, ವಿಭೀಷಣನನ್ನು ಕರೆಸಿ ಪರೀಕ್ಷಿಸಬೇಕೆಂಬ ಕಾರವು ಎಂದಿಗೂ ಸಾಧ್ಯವಲ್ಲ ಒಬ್ಬನನ್ನು ರಾಜಕಾತ್ಯದಲ್ಲಿ ನಿಯೋಗಿಸಿದ ಹೊರತು, ಅವನ ಗುಣದೋಷಗಳನ್ನು ತಿಳಿ ಯುವುದು ಸಾಧ್ಯವಲ್ಲ ಹಾಗೆ ಗುಣದೋಷಗಳನ್ನು ತಿಳಿಯದೆ, ಹೊಸದಾಗಿ ಬಂದ ಅಪರಿಚಿತನಾದ ಪುರುಷನೊಬ್ಬನನ್ನು ತಂದು ನಿಯೋಗಿಸುವುದೂ ದೋಷಾಸ್ಪದವೆಂದೇ ನನಗೆ ತೋರಿರುವುದು ಹೀಗೆ ಗುಣದೋಷಗಳನ್ನು ಪರೀಕ್ಷಿಸಿದಮೇಲೆಯೇ ಮನಷ್ಯನನ್ನು ನಿಯೋಗಿಸಬೇಕೆಂದೂ, ನಿಯೋಗಿ ಸಿದಮೇಲೆಯೇ ಅವನ ಗುಣದೋಷಗಳನ್ನು ಪರೀಕ್ಷಿಸಬೇಕೆಂದೂ, ಅನ್ನೋ ನ್ಯಾಶ್ರಯವಿರುವುದರಿಂದ, ಈ ಮತವೇ ನನಗೆ ಸರಿಯಾಗಿ ತೋರಲಿಲ್ಲ ಇ ದರಮೇಲೆ ಮೊದಲು ಚಾರನನ್ನು ಕಳುಹಿಸಿ ರಹಸ್ಯವಾಗಿ ಆತನ ಸಂಗತಿಯ ನ್ನು ತಿಳಿದುಕೊಳ್ಳುವುದು ಯುಕ್ತವೆಂದು ನಿನ್ನ ಮಂತ್ರಿಗಳಲ್ಲಿ ಬೇರೆಕಲ ವರು ಹೇಳಿದರಷ್ಟೆ? ಆದೂ ಯುಕ್ತವಲ್ಲ ದೂರದಲ್ಲಿರುವವನ ಬಳಿಗಲ್ಲವೇ ರಹಸ್ಯವಾಗಿ ಚಾರನು ಹೋಗಿ, ಮರೆಯಾಗಿದ್ದು, ಆತನ ಸಂಗತಿಯನ್ನು ತಿಳಿ ದುಕೊಳ್ಳಬೇಕು ನಮಗೆ ಬಹಳ ಸಮೀಪದಲ್ಲಿ ಪ್ರತ್ಯಕ್ಷವಾಗಿ ಆಕಾಶಮ ಧ್ಯದಲ್ಲಿರುವವನ ಬಳಿಗೆ ಚಾರನನ್ನು ಕಳುಹಿಸುವುದು ಹೇಗೆ ? ಈ ಉಪಾಯ ವೂ ಕೆಲಸಕ್ಕೆ ಬಾರದು ಮತ್ತೆ ಕೆಲವರು, ಈ ವಿಭೀಷಣನು ನಮ್ಮಲ್ಲಿಗೆ ಬಂ ನಿರತಕ್ಕ ದೇಶಕಾಲಗಳೆರಡೂ ಸರಿಯಲ್ಲವೆಂದು ಹೇಳಿದರಲ್ಲವೆ ? ಆ ಮಾ ತೂ ಯುಕ್ತವಲ್ಲ ಆ ವಿಷಯದಲ್ಲಿ ನನಗೆ ಇದೇ ತಕ್ಕ ದೇಶಕಾಲಗಳೆಂದೂ ತೋರಿರುವುದು, ಈ ವಿಚಾರವಾಗಿ ನನಗೆ ತೋರಿದಮಟ್ಟಿಗೆ ಒಂದೆರಡು ಮಾ ತನ್ನು ಹೇಳಬೇಕೆಂಬ ಕೋರಿಕೆಯುಂಟು ಅದನ್ನೂ ತಿಳಿಸುವೆನು ಕೇಳು ? ಈ ವಿಭೀಷಣನು ದುರಾತ್ಮನಾದ ಆ ರಾವಣನಲ್ಲಿರುವ ದೋಷಗಳನ್ನ , ನಿನ್ನಲ್ಲಿರುವ ಗುಣಗಳನ್ನೂ ವಿಚಾರಿಸಿ, ಅವನು ನೀಚನೆಂಬುದನ್ನೂ, ನೀನು ಉತ್ತಮನೆಂಬುದನ್ನೂ ತನ್ನ ಮನಸ್ಸಿನಲ್ಲಿ ನಿರ್ಧರಿಸಿಕೊಂಡು, ತನ್ನ ಹಿತೋ ಪದೇಶಕ್ಕೆ ಒಳಗಾಗದ ಆತನ ಮೂರ್ಖಸ್ವಭಾವವನ್ನೂ , ನಿನ್ನ ಪರಾಕ್ರಮ ವನ್ನೂ ನೋಡಿ,ಆಕ್ಷಣವೇ ನಿನ್ನ ಬಳಿಗೆ ಬಂದಿರುವನು- ಇದು ಅವನ ಬುದ್ದಿಗೆ ಯುಕ್ತವಾಗಿಯೇ ಇರುವುದು (ಇತರರ ಗುಣದೋಷಗಳನ್ನು ಕಂಡಮೇಲೆ