ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬೩ ಸರ್ಗ, ೧೭.] ಯುದ್ದ ಕಾಂಡವು ಯೇ ಅವರಲ್ಲಿ ಮಿತ್ರತ್ವವನ್ನಾಗಲಿ, ಶತ್ರುತ್ವವನ್ನಾಗಲಿ, ನಿರ್ಣಯಿಸಬೇ ಕಾದುದರಿಂದ, ಇವನೂ ದೇಶಕಾಲಗಳನ್ನಂತೇ ಬಂದಿರುವನು) ಅದೂ ಹಾ ಗಿರಲಿ' ಈ ವಿಭೀಷಣನಿಗೆ ಯಾರಲ್ಲಿ ಪರಿಚಯವಿಲ್ಲವೋ ಅಂತಹ ಕೆಲವು ಪ ರುಷರನ್ನು ಕಳುಹಿಸಿ, ಅವರಿಂದ ಆತನನ್ನು ಪ್ರಶ್ನೆ ಮಾಡಿಸಿ, ಅವರ ಮೂಲಕ ವಾಗಿ ರಾವಣನ ವಿಷಯವನ್ನು ತಿಳಿಯಬೇಕೆಂದು ಬೇರೆ ಕೆಲವರು ಹೇಳಿದ ರಲ್ಲವೆ ಆ ವಿಷಯವನ್ನೂ ನಾನು ಚೆನ್ನಾಗಿ ವಿಮರ್ಶಿಸಿ ನೋಡಿದುದರಲ್ಲಿ, ಆಮತವೂ ನೀತಿವಿರುದ್ಧ ವೆಂದೇ ನನ್ನ ಬುದ್ಧಿಗೆ ತೋರಿರುವುದು ಏಕೆಂದರೆ, * ಈ ವಿಭೀಷಣನನ್ನು ನಾವು ಸ್ವೀಕರಿಸುವುದಕ್ಕೆ ಮೊದಲೇ, ಅವನ ಬಳಿಗೆ ಹೊಸಮನುಷ್ಯನೊಬ್ಬನು ಹೋಗಿ, ರಾವಣನ ಸಂಗತಿಗಳೇನೆಂದು ಕೇಳಿ ದಪಕ್ಷದಲ್ಲಿ, ಬುದ್ಧಿವಂತನಾದ ವಿಭೀಷಣನು ಆಗಲೇ ಸಂದೇಹಪಡುವನು. ಅವನಿನ್ನು ನಾವು ನಮ್ಮೊಳಗೆ ಸೇರಿಸಿಕೊಂಡಮೇಲೆ ಕಾರಾಲೋಚನೆಯ ಕಾಲದಲ್ಲಿ ನಂಬಿಕೆಯಿಂದ ಕೇಳಬೇಕಾದ ಪ್ರಶ್ನೆಗಳನ್ನು ಮೊದಲೇ ಕೇಳಿ ಬಿಟ್ಟರೆ, ನಮಗೆ ಇನ್ನೂ ಆತನಲ್ಲಿ ಶತ್ರುತ್ವ ಶಂಕೆಯೇ ಇರಬಹುದೆಂದು ಅವಸಿಗೆ ಅನುಮಾನವು ಹುಟ್ಟುವುಒ ಹೀಗೆ ಅನುಮಾನವು ಹುಟ್ಟು ವುದರಿಂದ ನನ್ನಲ್ಲಿ ಅವನಿಗೆ ನಂಬಿಕೆಯೂ ತಪುವುದು ಅದರಿಂದ ಅನಾ ಯಾಸವಾಗಿ ನಮಗೆ ಸಿಕ್ಕಿದ ಪಿತ್ರನನೂ ನಾವು ಕಳೆದುಕೊಂಡಂ ತಗುದು ಇಷ್ಟೆಲ್ಲದೆ, ಇಲ್ಲಿಂದ ಹೋಗುವ ಮನುಷ್ಯನು ಎಷ್ಟೆ ಬುಶಾಲಿಯಾಗಿದ್ದರೂ, ಶತವು ಕಪಟಸ್ವಭಾವನಾಗಿಯೂ, ಸ್ವ ಕಾರಸಾಧನೆಯಲ್ಲಿ ಬಹಳ ನಿಪುಣನಾಗಿಯೂ ಇದ್ದ ಪಕ್ಷದಲ್ಲಿ, ಯಾವ ವಿಧದಿಂದಲೂ ತನ್ನ ಅಭಿಪ್ರಾಯಗಳನ್ನು ಹೊರಪಡಿಸದೆ, ಮನಸ್ಸಿನಲ್ಲಿ ಯ ಇಟ್ಟು ಮಾತನಾಡುವುದರಿಂದ, ಅವನ ಅಭಿಪ್ರಾಯವನ್ನು ೮ ಟ್ಯನೆ ತಿಳಿದುಕೊಳ್ಳುವುದೂ ಸಾಧ್ಯವಲ್ಲ ಬಹುಕಾಲದವರೆಗೆ ಪರಿಚಯವನ್ನು ಮಾಡಿದಹೊರತು ಅವನ ಅಭಿಪ್ರಾಯವೊಂದೂ ತಿಳಿಯದು ಆದುದರಿಂದ ಈ ಉಪಾಯದಿಂದ ಮೊದಲೇ ಮಿತ್ರನನ್ನು ಕಳೆದುಕೊಳ್ಳಬೇಕಾಗುವುದಲ್ಲ - * ಇಲ್ಲಿ 'ಮಿತ್ರಂ ಪ್ರದುಷ್ಕೃತ ಮಿಥ್ಯಾಪ್ರಷ್ಟ ಸುಖಾಗತಂ” ಎಂದು ಮಲವು. 'ಮಿಥ್ಯಾಪ್ಪ೦ ಸುಖಾಗತಂ” ಎಂಬ ಪಾರಾಂತರವೂ ಉಂಟು. ಇವೆರಡೂ ಮೇಲಿನ ತಾತ್ಪರಾರ್ಧದಲ್ಲಿಯೇ ಪಠ್ಯವಸಿತಗಳಾಗುವುವು.