೨೧೮೪ ಶ್ರೀಮದ್ರಾಮಾಯಣವು (ಸರ್ಗ ೧೮ ವುದೋ ಒಂದು ರಾಜನಿ೦ತಿಯು ಇದ್ದೇ ಇರಬೇಕು * ಆದರೆ ನನಗೆ ಈ ವಿಷಯದಲ್ಲಿ ಅದಕ್ಕಿಂತಲೂ ಸೂಕ್ಷವಾದ ರಾಜನೀತಿಯೊಂದ) ತೋ ರಿರುವುದು ಇದು ಪ್ರತ್ಯಕ್ಷವಾಗಿಯೇ ಕಾಣುವುದಲ್ಲದೆ, ಲೋಕವ್ಯವ ಹಾರಸಿದ್ದವಾಗಿಯೂ ಇರುವುದು ಈ ನೀತಿಯನ್ನು ಸಮಸ್ತರಾಜರ ಕ್ಲಿಯೂ ಕಾಣಬಹುದು ಜ್ಞಾನಿಗಳಾಗಲಿ, ಪಠ್ಯಂತರಾಜರಾಗಲಿ, ವ್ಯಸನ ಕಾಲದಲ್ಲಿ ಮೇಲೆಬಿದ್ದು ಪ್ರಹರಿಸುವರಾದುದರಿಂದ ಅವರನ್ನು ಶತ್ರುಗ ಳೆಂದೇ ತಿಳಿಯಬೇಕು ಈ ವಿಭೀಷಣನೂ ಈಗ ತನ್ನಣ್ಣನಾದ ರಾವಣನು ಕಷ್ಟಕ್ಕೆ ಸಿಕ್ಕಿರುವುದನ್ನು ನೋಡಿ, ಆತನನ್ನು ನಿಗ್ರಹಿಸಬೇಕೆಂಬುದಕ್ಕಾ ಗಿಯೇ ನಮ್ಮಲ್ಲಿಗೆ ಬಂದಿರಬೇಕು, ಇಲ್ಲವೇ ಆ ರಾವಣನೇ ತನಗುಂಟಾದ ಈ ವ್ಯಸನದಲ್ಲಿ ತನ್ನ ಜ್ಞಾತಿಯಾದ ವಿಭೀಷಣನು ತನ್ನ ನ್ನು ಪ್ರಹರಿಸುವ ನೆಂಬ ಭಯದಿಂದ ಇವನನ್ನು ರಾಜ್ಯದಿಂದೋಡಿಸಿರಬೇಕು ' ಹೇಗಿದ್ದರೂ ನಾವು ಇವನನ್ನು ಪರಿಗ್ರಹಿಸುವುದರಲ್ಲಿ ದೋಷವಿಲ್ಲ, ಜ್ಞಾತಿಗಳಾಗಿದ್ದ ರೂ, ಪಾಪಬುಡ್ಡಿಲ್ಲದ ಕೆಲವರುಮಾತ್ರ, ತಮಗೆ ಇಷ್ಟರಾದ ಜ್ಞಾತಿಗಳ ನ್ನು ತಪ್ಪದೆ ಗೌರವಿಸುವುದೂ ಉಂಟು ಆದರೇರು? ಲೋಕದ ನಡತೆಯೇ ಹಿಂಗೆ ಪಾಪಭೂಯಿಷ್ಟವಾಗಿರುವುದರಿಂದ, ಅಂತಹ ಪುಣ್ಯಾತ್ಮರಾದ ರಾಜ
- ಇಲ್ಲಿ 'ಅಸ್ತಿ ಸೂಕ್ಷ್ಮತರಂ ಕಿಂಚಿತ್ ಯದ ಪ್ರತಿಭಾತಿಮೇ | ಪ್ರತ್ಯಕ್ಷಂ ಲೌಕಿ ಕಂವಾ ತಿ ವಿದ್ಯತೇ ಸರೈರಾಜಸು” ಎಂದು ಮೂಲವು ವಿಶೇಷಾರ್ಥವು (=ಸ್ತಿ ಸೂಕ್ಷ ತರಂ)ಸುಗ್ರೀವನ ವಾಕ್ಯವೇ ಸೂಕ್ಷ್ಮವಾದುದು ಈಗ ನಾನು ಹೇಳುವಮಾತು ಅದ ಕ್ಕಿಂತಲೂ ಸೂಕ್ಷ ತರವು ಇದಕ್ಕೆ ಮೇಲೆ ವೂಲ್ವಪಕ್ಷವೇ ಇಲ್ಲವೆಂದು ಭಾವವು (ಕಿಂಚಿ ತ) ತನ್ನ ವಾಕ್ಯವು ಸುಗ್ರೀವನ ವಾಕ್ಯಕ್ಕಿಂತಲೂ ಮೇಲಾಗಿದ್ದರೂ, ಆತ್ಮ ಸ್ತುತಿಯ ನ್ನು ತಗ್ಗಿಸುವುದಕ್ಕಾಗಿ (ಕಿ೦ಚಿತ್) ಎಂದು, ಲಫತ್ವ ಸೂಚಕವಾದ ಶಬ್ದವ. (ಪ್ರತ್ಯ ಕ್ಷಂ ಲಇಕಿಕಂ ವಾಪಿ ವಿದ್ಯತೇ ಸರೈರಾಜಸು) ಈ ರಾಜದರ್ಮಸೂಕ್ಷವು ಪ್ರತ್ಯಕ್ಷವಾಗಿ ಯ, ಲೋಕವ್ಯವಹಾರಸಿದ್ದವಾಗಿಯೂ ಇರುವುದಲ್ಲದೆ, ಸ ರಸ್ತರಾಜರಲ್ಲಿಯೂ ಇದು ನಡೆಯುತ್ತಲೇ ಇರುವುದೆಂದರ್ಥವ, ಇದರಿಂದ ಈ ಸುಗ್ರೀವನು ಈಗ ನಮ್ಮ ಲ್ಲಿರುವ ಪ್ರೇಮಾತಿಶಯದಿಂದ ಈ ಮಾತನ್ನಾಡುತ್ತಿದ್ದರೂ, ಈ ಜ್ಞಾತಿವಧವೆಂಬ ರಾಜ ನೀತಿಯನ್ನು ಹಿಂದೆ ನಾವು ಇವನಲ್ಲಿಯೇ ಪ್ರತ್ಯಕ್ಷವಾಗಿ ನೋಡಿರುವೆವಲ್ಲವೆ?” ಎಂದು ರಾಮನು ಸುಗ್ರೀವನಿಗೆ ಮಮೊFದ್ಘಾಟನವಾಗುವಂತೆ ಹೇಳಿದುದಾಗಿ ಭಾವವು