ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

වෙරළ ಶ್ರೀಮದ್ರಾಮಾಯಣವು - [ಸರ್ಗ ೧೮ ತಲೆಬಗ್ಗಿ (ರಾಮಾ ! ತಾಳ್ಮೆಯುಳ್ಳವರಲ್ಲಿ ನೀನು ಮೇಲೆಂಬುದೇನೋ ನಿ ಜವು. ಆದರೇನು' ಈ ವಿಭೀಷಣನಲ್ಲಿ ಮಾತ್ರ ಆ ತಾಳ್ಮೆಯನ್ನು ತೋರಿಸಬಾ ರದು ಆತನನ್ನು ನಿಗ್ರಹಿಸುವುದೇ ನನಗೆ ಉಚಿತವೆಂದು ತೋರುವುದು * ಈ ರಾಕ್ಷಸನು ರಾವಣಸಿಂದ ರಹಸ್ಯವಾಗಿ ಕಳುಹಿಸಲ್ಪಟ್ಟವನೆಂದು ನೀನು ಚೆ ನ್ನಾಗಿ ತಿಳಿ " ಎಲೆ ಮಹಾಬಾಹೋ ! ಈ ರಾಕ್ಷಸನು ಕುಟಿಲಬುದ್ಧಿಯುಳ್ಳ ರಾವಣನ ಮಾತಿನಮಲೆಯೇ ಇಲ್ಲಿಗೆ ಬಂದಿರುವನು ಅವನು ಈಗ ತನ್ನ ನಿಜ ವಾದ ಉದ್ದೇಶವನ್ನು ಮರಸಿಟ್ಟುಕೊಂಡು, ನಮಗೆ ನಂಬಿಕೆಯನ್ನು ಹುಟ್ಟಿ ಸಿ, ಆ ನಂಬಿಕೆಯಿಂದ ನಾವು ಎಚ್ಚರತಪ್ಪಿದಾಗ,+ ಸನ್ನ ಸ್ಕೋ, ನನ್ನ ನ್ತೋ,

  • ಇಲ್ಲಿ ರಾವಣೇನ ಪಣಿಹಿತಂ ತಮನೇಹಿ ನಿಶಾಚರಂ” ಎಂದು ಮೂಲವು ಸು ಗ್ರೀವನು ಇದೇ ವಿಷಯವನ್ನು ಮೊದಲೇ ತಿಳಿಸಿರುವಾಗ, ಈಗಲೂ ತಿರುಗಿ ಆ ವಾಕ್ಯ ವನ್ನೇ ಹೇಳಿದ ಪ್ರಯೋಜನವೇನೆಂದರೆ, ಮೊದಲು ರಾಮನ ವಿಭೀಷಣನು ಹೇ ಆದ 'ಶರಣು” ಎಂಬ ಮಾತಿನಿಂದ ಅಪಹೃತಚಿತ್ತನಾಗಿ, ಆಗೆ ತನ್ನ ಮಾತನ್ನು ಗಮನಿಸ ದಿರಬಹುದೆಂದೆಣಿಸಿ, ಈಗ ತಾನೂ ಆವಿಭೀಷಣನಂತೆಯೇ ಶರಣಾಗತಿಶಬ ವನ್ನೇ ಹೇಳಿ ಪಾರ್ಥಿಸುವುದರಿಂದ, ರಾಮನ ಮನಸು ಇತಲಾಗಿ ತಿರುಗಿ, ತನ್ನ ಮಾತನೂ ಲಾ ಲಿಸಿ ಕೇಳಬಹುದೆಂಬ ನಂಬಿಕಯಿಂದ, ತಿರುಗಿ ಅದನ್ನೇ ತಳುವುದಾಗಿ ತಿಳಿಯಬೇಕು ಇದಕ್ಕಾಗಿಯೇ ಇಲ್ಲಿ ನಿಶಾಚರನೆಂಬ ವಿಶೇಷಣವು ಕಳ್ಳನು ಅರ್ಧರಾತ್ರಿಯಲ್ಲಿ ಮನೆಗೆ ನುಗ್ಗಿ ಪರರ ಸ್ವತನ್ನು ಅಪಹರಿಸುವಂತೆ, ಈ ರಾಕ್ಷಸನೂ ಮೋಸದಿಂದ ನಿನ್ನ ಮನ

•ನ್ನು ತನ್ನ ಕಡೆಗೆ ಆಕರ್ಷಿಸಿಕೊಂಡಿರಬಹುದೆಂದು ಇದರ ಭಾವವ + ಇಲ್ಲಿ 'ಪ್ರಹರ್ತುಂ ತ್ವಯಿ ವಿಶ್ವಕ್ಕೇ ಪ್ರಚ್ಛನ್ನೋ ಮಯಿಚಾನp | ಲಕ್ಷಣೇ ವಾ' ಎಂದು ಮೂಲವು ಇಲ್ಲಿ ಸುಗ್ರೀವನು ತನಗೂ, ಲಕ್ಷ್ಮಣನಿಗೂ ಅನರ್ಥವುಂಟಾಗ ಬಹುದೆಂದು ಹೇಳಿ, ತನ್ನ ಪ್ರಾಣಭಯವನ್ನು ತೋರಿಸಿದುದರಿಂದ ಅವನ ಸ್ವಾರ ಪರತೆ ಯು ಹೊರಬೀಳುವುದಿಲ್ಲ ವ?” ಎಂದರೆ, ರಾಮನಿಗೆ ತನ್ನ ವ್ಯಸನಕ್ಕಿಂತಲೂ ತನ್ನಲ್ಲಿ ಶರ ಣಾಗತರಾದವರ ವ್ಯಸನವೇ ಮತ್ತಷ್ಟು ಮರ್ಮಬೇಧಕವಾಗಬಹುದೆಂದು ತಿಳಿದು, ಅದ ಸ್ನೇ ರಾಮನಿಗೆ ತಿಳಿಸಿ, ಆ ಮೂಲವಾಗಿಯಾದರೂ ವಿಭೀಷಣನನ್ನು ನಿಗ್ರಹಿಸುವುದಕ್ಕಾ ಗಿ ಪ್ರಯತ್ನಿಸುವನು ಇದರಿಂದ ಸುಗ್ರೀವನು ರಾಮನನ್ನು ಕುರಿತು “ರಾಮಾ ! ಹಿಂ ದ ನೀನು ವ್ಯಯಿ ಕಿಂಚಿತ್ಯಮಾಪನ್ನೇ ಕಿಂ ಕಾರಂ ಸೀತಯಾ ಮಮ” ಎಂದು ಹೇಳಿ ಸೀತಿಗಿಂತಲೂ ನನ್ನಲ್ಲಿ ಹೆಚ್ಚಾಗಿ ಪ್ರೇಮವನ್ನು ತೋರಿಸಿದವನಲ್ಲವೆ? ಮತ್ತು ಈಗಲೂ ನೀನು (ಸುಹೃದೊವಾ ಭವದಿ ಧಾ ) ನಿನ್ನಂತೆ ಸ್ನೇಹಿತರೇ ಲೋಕದಲ್ಲಿಲ್ಲವೆಂದೂ