ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೮.| ಯುದ್ಧಕಾಂಡವು ೨೧೮೯ ಅಥವಾ ಈ ಲಕ್ಷಣವನ್ನೂ ಕೊಲ್ಲುವುದಕ್ಕೆ ಕಾದಿರುವನು ನಾವು ನಮ್ಮ ಮಂತ್ರಿವರ್ಗಗಳೊಡನೆ ಇವನ ಕೊಲೆಗೆ ಪಾತ್ರರಾಗಬೇಕಾಗುವುದು ಈತ ನು ಫತುಕನಾದ ಆ ರಾವಣನಿಗೆ ತಮ್ಮನೆಂಬುದೊಂದೇ ಸಾಕಲ್ಲವೆ ? ಇ ವನನ್ನು ಹೇಗೆ ನಂಬಬಹುದು?” ಎಂದನು ಮಾತುಬಲ್ಲವನಾಗಿಯೂ, ವಾ ನರಸೇನಾಪತಿಯಾಗಿಯೂ ಇರುವ ಸುಗ್ರೀವನು, ಮಾತಿನಲ್ಲಿ ಚತುರನಾದ ರಾಮನನ್ನು ಕುರಿತು, ಇಷ್ಟು ಮಾತ್ರವನ್ನು ಹೇಳಿ ಸುಮ್ಮನಿದ್ದನು ಸುಗ್ರಿ ವನು ಹೇಳಿದ ಈ ಮಾತನ್ನು ಕೇಳಿ ರಾಮನು ಅದಕ್ಕೆ ಸಮಾಧಾನವೇ ನೆಂದು ತನ್ನಲ್ಲಿ ತಾನು ಚಿಂತಿಸಿ, ತಿರುಗಿ ಆ ಸುಗ್ರಿವನನ್ನು ಕುರಿತು * ಎಲೆ ಹೇಳಿದವನಲ್ಲವೆ ? ಇಷ್ಟು ಪ್ರಮಾದನಾದ ನನಗಾಗಲಿ, 'ಮೂಹೂರ್ತಮಪಿ ಜೀವಾ ಮ ” ಎಂದು ಯಾವನನ್ನು ಬಿಟ್ಟು ನೀನು ಮಹೂರ್ತಮಾತ್ರವಾದರೂ ಜೀವಿಸಲಾ ರೆನೆಂದು ಹೇಳಿರುವೆಯೋ, ಅಂತಹ ಲಕ್ಷ ಹನಿಗಾಗಲಿ, ಇವನು ಏನಾದರೂ ಅಪಾಯ ವನ್ನು ತಂದಿಡಬಹುದು ಒಂದುವೇಳೆ ಶರಣಾಗತ ಗಾತ್ಸಲ್ಯದಿಂದ ನಿನ್ನ ಕ್ಷೇಮದಲ್ಲಿ ನೀ ನು ದೃಷ್ಟಿಯಿಡದೆ ಮೋದರ, ಆಶ್ರಿತರಾದ ನಮ್ಮ ನ್ನು ಅಪಾಯವಿಲ್ಲದಂತೆ ರಕ್ಷಿಸು ವುದಕ್ಕಾದರೂ ನೀನು ಅವನನ್ನು ನಿಗ್ರಹಿಸಲೇಬೇಕೆಂದು ಭಾವವು

  • ಇಲ್ಲಿ ಸುಗ್ರೀವನು 'ವಿಭೀಷಣನು ಕೂರಜಾತಿಯ ರಾಕ್ಷಸನಾದುದರಿಂದ ಅವನು ತನ್ನ ಚಾತಿಕಾರದಿಂದ ರಾಮನಿಗೆ ಯಾವ ಅನರವನ್ನುಂಟು ಮಾಡುವನೋ? ಎಂದು ಭಯಪಡುವದನ್ನು ನೋಡಿ, ಕೊನೆಗೆ ರಾಮನು ತನ್ನ ಸತ್ವಶಕ್ಕತ್ವವನ್ನೇ ಅ ವನಿಗೆ ತಿಳಿಸಿ, ಅವನ ಭಯವನ್ನು ನೀಗಿಸುವನು, 'ಸುದುಷ್ಕ ವಾ ಪೈದುಷ್ಯ ನಾ ಕಿಮೇಷ ರಜರ್ನಿಚರ< | ಸಕ್ಷಮಸ್ಯಹಿತಂ ಕರ್ತುಂ ಮಮಾಶಕ, ಕಥಂಚನ'ಎಂದು ಮಲವು (ಸುದುಷ್ಕವಾದ್ಯದುಷವಾ) ನಿಮ್ಮ ಪಕ್ಷದಂತೆ ಅವನು ದೋಷಿಯಾ ದರೂ ಆಗಲಿ ! ಅಥವಾ ನನ್ನ ಪಕ್ಷದಂತೆ ನಿರ್ದೋಷಿಯಾದರೂ ಆಗಲಿ ! ಈ ವಿಚಾರ ದಿಂದ ಈಗ ಪ್ರಯೋಜನವಿಲ್ಲ ಶರಣಾಗತನ ವಿಷಯವಾಗಿ ನೀವು ಎಷ್ಟೇದೋಷ ವನ್ನು ಹೇಳಿದರೂ ಅದೂಂದೂ ನನ್ನ ಮನಸ್ಸಿಗೆ ಹಿಡಿಯದು ಅದರಂತೆಯೇ ನಿಮ ಗ ನಾನು ಎಷ್ಟವಿಧದಿಂದ ಅವನು ನಿರ್ದೋಷಿಯೆಂಬುದನ್ನು ತೋರಿಸಿದರೂ, ನನ್ನಲ್ಲಿ ನಿಮಗಿರುವ ಪ್ರೇಮಾಂಧತೆಯಿಂದ ನಿಮಗಿರುವ ಭಯವ ನೀಗದು (ಕಿಮೇಷ ರಜನೀಚರ ) ನೀವು ಹೇಳಿದಂತೆ ಈತನು ರಾಕ್ಷಸನಾದುದರಿಂದ ನಮಗೆ ಬಾಧಕನಾಗಿ ಯೇ ಇರಲಿ ! ಇದ್ದರೂ ಭಯವೇನು? (ಸಕ್ಷಮಸ್ಯಹಿತಂ ಕರ್ತುಂ ಮಮಾಶಕ ) ಈತನಿಗೆ ನನ್ನ ವಿಷಯದಲ್ಲಿ ಮಾತ್ರ ಅತಿಸೂಕ್ಷವಾದ ಅಪಕಾರವನ್ನಾದರೂ ಮಾಡು