ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೯೨ ಶ್ರೀಮದ್ರಾಮಾಯಣವು - [ಸರ್ಗ ೧೮. ಕೇವಲ ತಿರಕ್ಕೆನಿಸಿದ ಒಂದುಪಾರಿವಾಳವೂ ಕೂಡ,ತನಗೆ ಸಹಜವೈರಿಯಾದ ಬೇಡನೊಬ್ಬನು ಚಳಿಯಿಂದ ನಡುಗುತ್ತ,ತಾನಿದ್ಯ ಗಿಡದಮರೆಗೆ ಬಂದು ನಿಂ ತುದನ್ನು ನೋಡಿ, ಅವನಿಗೆ ಬೇಕಾದ ಉಪಚಾರಗಳನ್ನು ನಡೆಸಿ, ತನ್ನ ದೇಹದ ಮಾಂಸವನ್ನೂ ಅವನ ಆಹಾರಕ್ಕಾಗಿ ಒಪ್ಪಿಸಿತೆಂಬ ವೃತ್ತಾಂತವನ್ನು ನಾವೆ ಲ್ಲರೂ ಕೇಳಿಯೇ ಇರುವೆವಲ್ಲವೆ? # ಕೇವಲತಿರಶ್ಚಂತುವಾದ ಪಾರಿವಾಳವೂ ಈ ಮಾತನ್ನು ಕೇಳಿದ ಮಾತ್ರದಲ್ಲಿಯೇ ಆ ಹಕ್ಕಿಯು ಸಹಿಸಲಾರದೆ, ಅವನನ್ನು ರಕ್ಷಿ ಸಿತು ಇಲ್ಲಿ ನಾವಾದರೋ (ತ್ಯ ಹ್ಯಾಪುತ್ರಾಂಶ್ಚ ದಾರಾಂಶ್ಚ ರಾಘವಂ ಶರಸಂಗತ 3) ಎಂದು ತನ್ನ ಬಂಧುವರ್ಗವನ್ನೂ ಬಿಟ್ಟು ನಮ್ಮ ಹೆಸರನ್ನು ಹಿಡಿದು ಮರೆಹೊಕ್ಕ ಈ ವಿಭೀಷಣವನ್ನು ಕುರಿತು ವಿಚಾರಮಾಡುತ್ತಿರುವೆವು ಅದೂ ಹಾಗಿರಲಿ' (ಅರ್ಚಿ ತಶ್ಚ ಅ ಬೇಡನು ತನಗೆ ಸಹಜಶತವಾಗಿದ್ದರೂ, ತನ್ನ ಭಾರೆಯನ್ನು ಕೊಂದುದ ರಿಂದ ಮಹಾಪರಾಧಿಯಾಗಿದ್ದರೂ, ಅತಿಥಿಯಾಗಿ ಬಂದ ಆತನನ್ನು ದೇವತೆಯಂತೆಯೇ ತಿಳಿದು, ಅವನ ಚಳಿಯನ್ನು ನೀಗಿಸುವುದಕ್ಕಾಗಿ ಬೆಂಕಿಯನ್ನು ರಿಸಿ ಆರಾಧಿಸಿತು ಇಲ್ಲಿ ನಾವಾದರೆ (ವಧ್ಯತಾಮೇಷ ತೀವ್ರಣ ದಂಡನೆ ಸಚಿವೈಸ್ಸಹ) ಎಂದು ಅವನನ್ನೂ ಅವನ ಮಂತ್ರಿಗಳನ್ನೂ ಕೊಲ್ಲುವುದಕ್ಕೆ ಪ್ರಯತ್ನಿ ಸುತ್ತಿರುವೆವು (ಯಥಾನ್ಯಾಯಂ। ಹಾಗೆ ಆಹಕ್ಕಿಯು ಬೇಡನನ್ನು ರಕ್ಷಿಸಿ ಸತ್ಕರಿಸಿದುದೂಕೂಡ ನ್ಯಾಯ ಪ್ರಾಪ್ತ ವೆಂ ಬುದಕ್ಕಾಗಿಯೇ ಹೊರತು ಪ್ರತಿಷ್ಠಾಕಾಂಕ್ಷೆಯಿಂದಲ್ಲ (ಸೈ ಮಾಂಸೈರ್ನಿಮಂ ತ್ರಿತ ) ಇಲ್ಲಿ ಸ್ವ ಶಬ್ದವು, ಆತ್ಮ ಸ್ವರೂಪದಲ್ಲಿಯೂ, ಸ್ವಕೀಯವಾದುದರಲ್ಲಿಯೂ ವರ್ತಿಸುವುದು, ಪಕ್ಷಿಗಳಿಗೆ ದೇಹ ಭೇದವು ತಿಳಿಯದುದರಿಂದ ದೇಹವೇ ಆತ್ಮ ವಂದು ಭಮಿಸಿ, ತನ್ನ ದೇಹವನ್ನೊಪ್ಪಿಸಿತು ದೇಹಾತ್ಮ ಬೇಧವಿವೇಕವುಳ್ಳ ನಾವೇ ಹೀಗೆ ಸಂದೇಹಿಸುವುದುಂಟೆ ? ಎಂದು ಭಾವವು ಇಲ್ಲಿ 'ಸಹಿ ತಂ ಪ್ರತಿಜಗ್ರಾಹ ಭಾಗ್ಯಾ ಹರ್ತಾರಮಾಗತಂ | ಕವೋತೋ ವಾನರ ಶ್ರೇಷ್ಠ ಕಿಂವುನರ ದ್ವಿಧ ಜನ” ಎಂದು ಮೂಲವು ವಿಶೇಷಾರ್ಥವು – (ಸ) ನ ಮ್ಮಂತೆ ಧರಾನುಷ್ಠಾನವನ್ನರಿತ ಮನುಷ್ಯ ಜಾತಿಯಲ್ಲಿಯೂ ಹುಟ್ಟಿದುದಲ್ಲ ! ಶರಣ್ಯ ವಾದ ರಘುವಂಶಾದಿಗಳಲ್ಲಿಯೂ ಹುಟ್ಟಿದುದಲ್ಲ! ಹೀಗಿದರೂ ಆ ವಾರಿವಾಳವು(ತಂ) ಹಾಗೆ ತನಗೆ ಸಹಜಶತ್ರುವಾಗಿದ್ದರೂ (ಭಾಲ್ಯಾಹರ್ತಾರಂ) ತನ್ನ ಕಷ್ಟಸುಖಗಳಿಗೆ ಸಮಭಾಗಿನಿಯಾದ ತನ್ನ ಪತ್ನಿಯನ್ನೇ ಕೊಂದವನಾಗಿದ್ದರೂ, ಇಲ್ಲಿ ಭಾಲ್ಯಾಹರಣವ ನ್ನು ಸೂಚಿಸುವುದರಿಂದ, ತಿರಕ್ಷಂತುವಾದ ಆಪಾರಿವಾಳವೂಕೂಡ ತನ್ನ ಪತ್ನಿಯನ್ನು ಕೊಂದ ಬೇಡನನ್ನು ಎಷ್ಟೊಪ್ರೀತಿಯಿಂದ ಪರಿಗ್ರಹಿಸಿತಲ್ಲವೆ ? ಈ ಶಿಷ್ಟಾಚಾರವನ್ನ