ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೧೯ ] ಯುದ್ಧಕಾಂಡವು ೨೨೧೧ ಗೆ ಸಮಾನವಾಗಿ ನಿನ್ನೊಡನೆ ಒಂದಾಗಿ ಕಲೆತಿರಲಿ ! ನಮ್ಮಲ್ಲಿಯೂ ಸ್ನೇಹ ವನ್ನು ಬಳೆಸಲಿ” ಎಂದನು ಸುಗ್ರೀವನು ಹೇಳಿದ ಈ ಮಾತುಗಳನ್ನು ಕೇಳಿ ರಾಮನು ಆ ಸುಗ್ರೀವನನ್ನೇ ಕಳುಹಿಸಿ, ವಿಭೀಷಣನನ್ನು ಬರಮಾಡಿಕೊಂಡು ದೇವೇಂದ್ರನು ಗರುಡನೊಡನೆ ಸೇರಿದಂತೆ *ತಾನೇ ಮುಂದೆಹೋಗಿ ತಟ್ಟನೆ ಆ ವಿಭೀಷಣನೊಡನೆ ಸ್ನೇಹದಿಂದ ಒಂದಾಗಿ ಸೇರಿಕೊಂಡು ಇಲ್ಲಿಗೆ ಹದಿನೆಂಟನೆಯ ಸರ್ಗವು | ಶ್ರೀರಾಮನು ಸಮಸ್ತ ವಾನರರ ಮಧ ದಲ್ಲಿ ವಿಭೀ ). ಮಣನಿಗೆ ಲಂಕಾರಾಜ್ಯದಲ್ಲಿ ಪಟ್ಟವನ್ನು ಕಟ್ಟಿದರು (+ ಸಮುದ್ರಲಂಘನ ಸನ್ನಾಹವೂ | ರಫಕುಲೋತ್ತಮನಾದ ರಾಮನು ಹೀಗೆ ಅಭಯವನ್ನು ಕೊಯ್ಯ ಡನೆ, ಮಶಾ ಪ್ರಾಜ್ಞನಾದ ವಿಭೀಷಣನು, ತನ್ನ ಕೋರಿಕೆಯು ಕೈಗೂಡಿತಂಬ ಸಂತೋಷದಿಂದುಬ್ಬಿದವನಾಗಿ + ತನ್ನ ಭಕ್ತರಾದ ನಾಲ್ಕು ಮಂತ್ರಿಗಳೊಡನೆ ತಟ್ಟನೆ ಆಕಾ ಶಹಿಂದಿಳಿದನು ಅವನು ಅಂತರಿಕ್ಷ ಮಂದಿಳಿಯುವಾಗ ಪ್ರಭುವಾದ ರಾಮನಬಳಿಗೆ ತನ್ನ ಕಾಲುಗಳನ್ನು ಮುಂದೆಚಾಚಿ ಇಳಿದು ಹೋಗುವುದುಆನು ಚಿತವೆಂದೆಣಿಸಿ, ಬಹಳವಿನಯದಿಂದ ತನ್ನ ಪೂರೈಕಾಯ

  • ಇಲ್ಲಿ ರಾಮನು ತಾನೇ ಹೋಗಿ ವಿಭೀಷಣನೊಡನೆ ತಟ್ಟನೆ ಸೇರಿಕೊಂಡನೆಂಬು ದರಿ, ದ, ಸುಗ್ರಿವನ ಮನಸ್ಸಿನಲ್ಲಿರುವ ಆನುಕೂಲ್ಯವು ಚಲಿಸಿಹೋದಪಕ್ಷದಲ್ಲಿ, ಕಾರವು ಕಡುವದೆಂದೆಣಿಸಿ, ಆ ಸುಗ್ರೀವನು ಸಮ್ಮತಿಸಿದಕ್ಷಣದಲ್ಲಿಯೇ ಈ ಮನು, ತಟ್ಟನೆಗಿ ಸುಗ್ರೀವನೊಡನೆ ಸೇರಿಕೊಂಡನೆಂದು ಭಾವವು ಇದರಿಂದ, ಭಗವಂತ ನಿಗೆ ಆಶ್ರಿತರೊಡನ ಸಂಶ್ಲೇಷವನ್ನು ಹೊಂದಿ ಅವರನ್ನು ರಕ್ಷಿಸುವುದರಲ್ಲಿರುವ ತರಾತಿಶಯವ ಸೂಚಿತವಾಗುವುದು

ಇಲ್ಲಿ 'ಭರನುಚರೈಸೃಹ ' ಎಂದು ಮೂಲವ ಭಕ್ತರೆಂದರೆ, ವಿಭೀಷ ಹನು ಮೊದಲು ಲಂಕೆಯನ್ನು ಬಿಟ್ಟು ಹೊರಟಾಗಲೂ, 'ಉತ್ಪನಾತ ಗದಾ ಪಾಜೆ ಶೃತುರ್ಭಿಸ್ಪದ ರಾಕ್ಷಸ್ಯೆ,” ಎಂದು, ಅವನೊಡನೆ ತಾವೂ ದೇಶಭ್ರಷ್ಟರಾಗಿ, 'ವಧ್ಯತಾಮೇಷ ತೀವ್ರಷ ದಂಡೇನ ಸಚಿವೈಸ್ಸಹ” ಎಂದು ವಧೋದ್ದೇಶದಲ್ಲಿಯ ತಾವು ಭಾಗಿಗಳಾಗಿ, ಹಾಗೆಯೇ ಈಗ ಸ್ವೀಕಾರದಶೆಯಲ್ಲಿಯೂ ಭಾಗಿಗಳಾದುದರಿಂದ, ಸುಖದುಃಖಗಳಿಗೆ ಸಮಭಾಗಿಗಳಾದವರೆಂದು ಭಾವವು