೨೨೧೩ ಸರ್ಗ ೧೯.] ಯುದ್ಧಕಾಂಡವು ವಾಕ್ಯಗಳಿಂದ ಆತನನ್ನು ಸಮಾಧಾನಪಡಿಸಿ, ಕಣ್ಣುಗಳಿಂದ ಕುಡಿದು ಬಿಡುವಂತೆ ಆತನನ್ನು ಪ್ರೀತಿಪೂರೈಕವಾಗಿ ನೋಡಿ ( ಎಲೆ ಮಿತ್ರನೆ' ಉಳಿದ ಸಂಗತಿಗಳೆಲ್ಲವೂ ಹಾಗಿರಲಿ ' ಲಂಕೆಯೊಳಗಣ ರಾಕ್ಷಸರ ಬಲಾಬಲಗಳನ್ನು ಇದ್ದುಬಿದ್ದಂತೆ ನನಗೆ ವಿವರವಾಗಿ ತಿಳಿಸು” ಎಂದನು ಈ ಮಾತನ್ನು ಕೇಳಿ ದೊಡನೆ ವಿಭೀಷಣನು ರಾವಣನ ಬಲಸನ್ನದ್ಧಿಗಳೆಲ್ಲವನ್ನೂ ವಿವರಿಸುವು ದಕ್ಕೆ ತೊಡಗಿ 'ಎಲೈ ರಾಜಪುತ್ರ' ನನ್ನಣ್ಣನಾದ ರಾವಣನು ಬ್ರಹ್ಮನ ನರದ ಬಲದಿಂದ, ದೈತ್ಯಗಂಧಶ್ವರಾಕ್ಷಸರೇ ಮೊದಲಾದ ದೇವಜಾತಿಗ ಳಿಗೂ, ಉಳಿದ ಸಮಸ್ತ ಪ್ರಾಣಿಗಳಿಗೂ ಅವಧ್ಯನಾಗಿರುವನು ಆ ರಾವಣ ನಿಂದೀಚೆಗೆ ನನಗೆ ಕುಂಭಕರ್ಣನೆಂಬ ಜೈಷ್ಣ ಸಹೋದರನು ಬೇರೊಬ್ಬ ನುಂಟ ; ಅವನೂ ಬಹಳ ವೀಠ್ಯವುಳ್ಳವನು ' ಮಹಾತೇಜಸ್ವಿಯು ' ಇಂದ್ರ ಸಿಗೆಣೆಯಾದ ಬಲವುಳ್ಳವನು ಮತ್ತು ಆ ರಾವಣಸಿಗೆ ಪ್ರಹಸನೆಂಬ ಸೇ ನಾಪತಿಯೊಬ್ಬನಿರುವನು ಹಿಂದೆ ಕೈಲಾಸದಲ್ಲಿ ನಡೆದ ಯ ದ್ಯದಲ್ಲಿ,ಆ ಪ್ರಹ ಸನು ಮಾಣಿರ್ಭನೆಂಬ ಕುಬೇರನ ಸೇನಾಪತಿಯನ್ನೆ ಓಡಿಸಿರುವನು. ನೀನೂ ಅವರ ಪಿಷಯವನ್ನು ಹನುಮಂತನ ಮೂಲಕವಾಗಿ ಮೊದಲೇ ಕೇಳಿರಬಹದು ರಾ ರಾ ' ಲಂಕಾಧಿಪತಿಯಾದ ಆ ರಾವಣಸಿಗೆ ಇಂದ್ರಜಿ ವಾ' ಆತ್ರಕ ವಾಗಶರೀರಗಳೊಡನ ಸಂಬಂಧವಿದ ೦ತ ತೋರಿದರೂ ಸಂಬಂಧ ವಿಲ್ಲದೆಯೇ ಇರುವುದು ಹೀಗಿರುವಾಗ ಪತ್ರಮಿತ ಕಳತೆ ದಿಗಳ ಡನೆ ಸಂಬಂಧ ವೆಂದರೇನು ? ಆದುದರಿಂದ ಸಂವಿಧಬಂಧುವೂ ಸ್ವಾಮಿಯಾದ ಭಗವಂತನೊಬ್ಬನೇ ಹೊರತು ಬೇರೆಯಲ್ಲ ಹಾಗೆಯೇ ಪಿತೃಮಾತೃ ಸುಹೃದ್ಮಾತೃ ದಾರ ಪುತ್ರದ ಯೋಪಿವಾ ! ಏಕೈಕ ಫಲಲಾಭಾಯ ಸರ ಲಾಭಾಯ ಕೇಶವ ?” ತಾಯಿ, ತಂದೆ, ಮೊದಲಾದವರು ಒಂದೊಂದು ಲಾಭಕ್ಕಾದರೂ ಸಧ್ವಲಾಭಕ್ಕಾಗಿ ಭಗವಂತನೆಂ ಒಂತೆ ನೀನೇ ಸರೂಪುರುಷಾರವೆಂದು ವಿಭೀಷಣನು ಆತ್ಮಭರನ್ಯಾಸವನ್ನು ಮಾಡಿದು ದಾಗಿ ಗ್ರಾಹ್ಯವು |
- ಇಲ್ಲಿ “ವಚಸಾ ಸಾಂತ್ವಯನಂ ಲೋಚನಾಭ್ಯಾಂ ಪಿಬನ್ನಿವ' ಎಂದು ಮೂಲವು ಇದರಿಂದ ರಾಮನು ವಿಭೀಷಣನನ್ನು ಮೊದಲು ತನ್ನ ಮೃದುವಾಕ್ಯಗಳಿಂದ ಕರಗಿಸಿ (ನೀರಾಗಿ ಮಾಡಿ) ಕಣ್ಣುಗಳಿಂದ ಕುಡಿದು ಬಿಡುವಂತೆ ಅವನಲ್ಲಿ ಅಸಾಧಾರಣ ವಾತ್ಸಲ್ಯವನ್ನು ತೋರಿಸಿ ಮಾತಾಡಿದುದಾಗಿ ಭಾವವು
-- -