ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೧೭ ಸರ್ಗ ೧೯ | ಯುದ್ದ ಕಾಂಡವು ಲೋಚಿತಬುದ್ಧಿಯುಳ್ಳವನಾಗಿಯೂ ಇರುವ ವಿಭೀಷಣನು ಹೇಳಿದ ಈ ಮಾತನ್ನು ಕೇಳಿದೊಡನೆ, ಸುಗ್ರೀವನು, ರಾಮಲಕ್ಷ್ಮಣರಿದ್ದಕಡೆಗೆ ಬಂದು, ವಿಭೀಷಣನು ಹೇಳಿದ ಶುಭವಾಕ್ಯವನ್ನು ತಿಳಿಸಿದನು ರಾಮನು ಸಹಜವಾಗಿ ಯ ಧರ್ಮಶೀಲನಾದುದರಿಂದ, ಆತನಿಗೂ, ಥರಹೇತುವಾದ ಆ ಉಪಾ ಸನವೇ ಕಾಲೋಚಿತವೆಂದು ಬುದ್ಧಿಗೆ ತೋರಿತು. ಮಹಾತೇಜಸ್ವಿಯಾದ ರಾಮನು ತನಗೆ ತೋರಿದ ಕಾರವನ್ನು ತನ್ನಿ ಹೃದಂತೆ ನಡೆಸುವುದಕ್ಕೆ ಸ ಮದ್ಧನಾಗಿದ್ದರೂ, ಲೋಕನೀತಿಯನ್ನನುಸರಿಸಿ, ಲಕ್ಷಣಸುಗ್ರೀವರಲ್ಲಿ ಗೌ ರವವನ್ನು ತೋರಿಸುವುದಕ್ಕಾಗಿ, ಅವರಿಬ್ಬರನ್ನೂ ನೋಡಿ ಮಂದಹಾಸಪೂ ಕ್ವಿಕವಾಗಿ “ವತ್ಸ ಲಕ್ಷಣಾ ' ವಿಭೀಷಣನು ಹೇಳಿದ ಆಲೋಚನೆಯೇ ನನಗೂ ಬಹಳ ಸಮ್ಮತವಾಗಿರುವುದು. ಆದರೆ ಈ ವಿಷಯದಲ್ಲಿ ನಿಮ್ಮಿ ಬ್ಬರ ಅಭಿಪ್ರಾಯವನ್ನೂ ನಾನು ಕೇಳಿ ತಿಳಿಯಬೇಕಾಗಿರುವುದು ಈ ಸುಗ್ರಿ ವನು ಕಾಲ್ಯಾಕಾರಗಳನ್ನು ಚೆನ್ನಾಗಿ ಬಲ್ಲವನು ನೀನೂ ಮಂತ್ರಾಲೋ ಚನೆಯಲ್ಲಿ ಸಮರ್ಥನು ಆದುದರಿಂದ ನೀವಿಬ್ಬರೂ ಈ ವಿಷಯವನ್ನು ಚೆ ನ್ನಾಗಿ ಪರಾಲೋಚಿಸಿ, ನಿಮಗೆ ಯಾವುದಿಷ್ಟ್ಯವೆಂಬುದನ್ನು ನಿರ್ಧರಿಸಿ ತಿಳಿಸಬೇಕು ” ಎಂದನು. ಈ ಮಾತನ್ನು ಕೇಳಿ ಲಕ್ಷಣಸುಗ್ರಿವರಿಬ್ಬರೂ ರಾಮನನ್ನು ಕುರಿತು ಉಪಚಾರಪೂಲ್ವಿಕವಾಗಿ, (ಎಲೈ ಪುರುಷೋತ್ರ ಮನೆ' ನಾವು ಸಮುದ್ರವನ್ನು ದಾಟುವುದಕ್ಕೆ ದಾರಿತೋರದೆ ಚಿಂತಿ ಸುತ್ತಿರುವಕಾಲದಲ್ಲಿ, ಈ ವಿಭೀಷಣನು ಇಷ್ಟು ಸುಲಭೋಪಾಯವನ್ನು ನಮಗೆ ಹೇಳಿರುವಾಗ, ನಾವು ಒಪ್ಪಲಾರೆವೆ ? ಭಯಂಕರವಾದ ಈ ಮಹಾ ಸಾಗರದಲ್ಲಿ ಸೇತುವನ್ನು ಕಟ್ಟಿದಹೊರತು, ಇಂದ್ರನೊಡಗೂಡಿದ ದೇವಾ ಸುರರಿಗಾದರೂ ಲಂಕೆಯನ್ನು ಸಾಧಿಸುವುದು ಶಕ್ಯವಲ್ಲ. ಆದುದರಿಂದ ಮಂತ್ರಾಲೋಚನೆಯಲ್ಲಿ ಸಮರನಾದ ಈ ವಿಭೀಷಣನು ಹೇಳಿದುದು ಯ ಧಾರವು. ಅವನ ಮಾತಿನಂತೆಯೇ ನಡೆಸಬೇಕು, ಇನ್ನು ಕಾಲವನ್ನು ಕಳೆ ದುದು ಸಾಕು ! ನಾವು ನಮ್ಮ ಸೇನೆಯೊಡನೆ ರಾವಣಪಾಲಿತವಾದ ಲಂಕ ಗೆ ಹೋಗಿ ಸೇರುವಂತೆ ಈ ಸಮುದ್ರವನ್ನು ಪ್ರಾರ್ಥಿಸು” ಎಂದರು, ಈ ಮಾತನ್ನು ಕೇಳಿ ರಾಮನು ಆಗಲೇ ಸಮುದ್ರತೀರದಲ್ಲಿ ದರ್ಭಾಸ್ತರಣವ 140