ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೧೮ ಶ್ರೀಮದ್ರಾಮಾಯಣವು [ಸರ್ಗ ೧೯. ನ್ನು ಹಾಸಿ, ವೇದಿಕೆಯಲ್ಲಿರುವ ಅಗ್ನಿ ಯಂತೆ ಅದರಮೇಲೆ ಶಯನಿಸಿದನು. ಇಲ್ಲಿಗೆ ಹತ್ತೊಂಬತ್ತನೆಯ ಸರ್ಗವು.

=

ರಾಮನು ಸೇನಾಸಮೇತನಾಗಿ ಸಮುದ್ರತೀರಕ್ಕೆ ! ಒಂದಿರುವದನ್ನು ,ರಾವಣನು ಶಾರ್ದೂಲನೆಂಬ ರಾಕ್ಷಸ ನಿಂದ ಕೇಳಿ, ಸುಗ್ರೀವನನ್ನು ರಾಮನಿಂದ ಬೇರ್ಪಡಿಸು ಇದಕ್ಕಾಗಿ ಶ್ರಕ ಅನ್ನು ಕಳುಹಿಸಿದುದು, ವಾನರರು ಆ | ಶಕನನ್ನು ಪ್ರಹರಿಸುವುದಕ್ಕೆ ಹೋಗಲು, ರಾಮನು | - ಬೇಡವೆಂದು ಅವರನ್ನು ತಡೆದುದು ಇಷ್ಟರಲ್ಲಿ ಶಾರ್ದೂಲನೆಂಬ ರಾಕ್ಷಸನೊಬ್ಬನು, ಅಕಸ್ಮಾತಾಗಿ ಸಮದ್ರ ತೀರಕ್ಕೆ ಬಂದು, ಅಲ್ಲಿ ಸುಗ್ರೀವನಿಂದ ರಕ್ಷಿತವಾದ ದೊಡ್ಡ ವಾನರಸೈನ್ಯ ವನ್ನು ನೋಡಿಬಿಟ್ಟನು. ಈ ರಾಕ್ಷಸನು ದುರಾತ್ಮನಾದ ಆ ರಾವಣನಿಗೆ ಚಾ ರನಾಗಿ ಸುತ್ತುತಿದ್ದವನಾದುದರಿಂದ, ಅವನು ಸಮುದ್ರತೀರದಲ್ಲಿದ್ದ ಆ ವಾನರಸೈನ್ಯವನ್ನು ಬಹಳ ಎಚ್ಚರಿಕೆಯಿಂದ ಸುತ್ತಲೂ ನೋಡಿ ಬಂದು, ವೇ ಗದಿಂದ ಹಿಂತಿರುಗಿ ಲಂಕೆಗೆ ಹೋಗಿ, ರಾವಣನನ್ನು ಕುರಿತು ಹೇಳುವನು. (1ಎ ಲೆ ಮಹಾರಾಜನೆ' ಆದೋ' ಸಮುದ್ರದ ಆಚೆಯ ದಡದಲ್ಲಿ ಅಷ್ಟಿಷ್ಟೆಂದು ನಿರ್ಣಯಿಸುವುದಕ್ಕಾಗದೆ, ಎರಡನೆಯ ಸಮುದ್ರವೋ ಎಂಬಂತೆ ಆಗಾಧವಾ ದ ವಾನರಭಲ್ಲಕಸೈನ್ಯವು ಅಪಾರವಾಗಿ ಬಂದುಸೇರಿರುವುದು ನಮ್ಮ ಲಂ ಕೆಯನ್ನು ಮುತ್ತುವುದಕ್ಕೂ ಸಿದ್ಧವಾಗಿರುವುದು, ದಶರಥಪ್ರತ್ರರಾದ ರಾಮ ಲಕ್ಷ್ಮಣರೆಂಬ ಅಣ್ಣತಮ್ಮಂದಿರಿಬ್ಬರೂ, ಉತ್ತಮಾಯುಧಗಳನ್ನು ಧರಿಸಿ, ನೆಟ್ಟಗೆ ಸೀತೆಯಿರುವ ಸ್ಥಕ್ಕೆ ಬರುವುದರಲ್ಲಿರುವರು. ಮಹಾತೇಜಸ್ವಿಗಳಾದ ಅವರಿಬ್ಬರೂ ಸಮುದ್ರತೀರದಲ್ಲಿಯೇ ಆ ಸೈನ್ಯವನ್ನಿಳಿಸಿರುವರು. ಯಾವ ಕಡೆಗೆ ತಿರುಗಿ ನೋಡಿದರೂ ಹತ್ತುಯೋಜನಗಳ ದೂರದವರೆಗೆ ಆ ದೊಡ್ಡ ವಾನರಸೈನ್ಯವೇ ವಿಶಾಲವಾಗಿ ವ್ಯಾಪಿಸಿರುವುದು, ಎಲೆ ರಾಜೇಂದ್ರನೆ ! ಈ ಗ ನಾನು ಸಾಮಾನ್ಯವಾಗಿ ನೋಡಿಬಂದಿರುವೆನು ಇನ್ನೂ ವಿವರವಾಗಿ ಅಲ್ಲಿ ನ ನಿಜಸ್ಥಿತಿಯನ್ನು ತಿಳಿಯಬೇಕಾದರೆ, ಶೀಘ್ರದಲ್ಲಿಯೇ ನೀನು ಬೇರೆ ಯಾರ ನ್ಯಾದರೂ ಕಳುಹಿಸಿ,ಅವರಿಂದ ತಿಳಿದುಕೊಳ್ಳಬೇಕು, ಆದುದರಿಂದ ಈಗಲೇ