ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ: ೨೦ ] ಯುದ್ಧಕಾಂಡವು. ೨೨೧೯ ಕೆಲವುದೂತರಿಗೆ ಆಜ್ಞೆ ಮಾಡಿ ಕಳುಹಿಸು?ಅವರು ಇದ್ದಸ್ಥಿತಿಯನ್ನು ಚೆನ್ನಾ ಗಿ ತಿಳಿದು ಬರಲಿ ಆ ವಾನರಸೈನ್ಯವೇನೋ ಬಹಳ ದೊಡ್ಡದಾಗಿರುವುದು. ಈಗಲೇ ನೀನು ಈ ವಿಷಯದಲ್ಲಿ, ದಾನವನೋ , ಸಾಮವನೋ, ಭೇದವ ನ್ಯೂ ಪ್ರಯೋಗಿಸಿನೋಡುವುದುಮೇಲು' ದಂಡೋಪಾಯಕ್ಕೆ ಅವಕಾಶವೇ ಇಲ್ಲ” ಎಂದನು. ಶಾರ್ದೂಲನ ಮಾತನ್ನು ಕೇಳಿದೊಡನೆ ರಾಕ್ಷಸೇಶ್ವರನಾದ ರಾವಣನು ಬೆಜ್ಜರಗೊಂಡು, ತನ್ನಲ್ಲಿ ತಾನು ಮುಂದೆ ಮಾಡಬೇಕಾದ ಕಾಲ್ಯ ವೇನೆಂದು ನಿರ್ಧರಿಸಿಕೊಂಡು, ತನ್ನ ಮುಂದಿದ್ದ ಶುಕನೆಂಬ ರಾಕ್ಷಸನನ್ನು ಕುರಿತು 'ಎಲೆ ಶುಕಾ ' ಈಗಲೇ ನೀನು ಇಲ್ಲಿಂದ ಹೊರಟು, ವಾನರರಾಜ ನಾದ ಸುಗ್ರೀವನನ್ನು ನೋಡಿ ನನ್ನ ಮಾತಿನಿಂದ ಅವನಿಗೆ ಹೇಳು' ಅಲ್ಲಿ ನೀನು ಧೈಲ್ಯವನ್ನು ಮಾತ್ರ ಬಿಡದೆ, ಮೃದುವಾದ ಮಾತಿನಿಂದಲೇ ನಾನು ಹೇ ಭುವ ಈ ಮಾತುಗಳನ್ನು ಹೀಗೆಯೇ ಹೇಳಬೇಕು, (ಎಲೈ ಕಪಿಸಾಲ್ವಭೌಮ ನೆ' ನನ್ನಂತೆ ನೀನೂ ಮಹಾರಾಜಕುಲದಲ್ಲಿ ಹುಟ್ಟಿ,ರಾಜಪದವಿಯಲ್ಲಿರುವವ ನು, ಆದುದರಿಂದ ನಿಷ್ಕಾರಣವಾಗಿ ನಮ್ಮೊಡನೆ ವೈರವನ್ನು ಬೆಳೆಸಬಾರದು ಇದರಮೇಲೆ ನೀನು ಮಹಾಬಲಾಡ್ಯನಾದುದರಿಂದ, ಅಲ್ಪ ಬಲವುಳ್ಳ ಆ ರಾ ಮನೊಡನೆ ನಿನಗೆ ಸ್ನೇಹವೂ ಯೋಗ್ಯವಲ್ಲ ಇಷ್ಟೇಅಲ್ಲದೆ, ನೀನು ಬ್ರಶ್ನೆಪು ತ್ರನಾದ ಯಕ್ಷರಜಸ್ಸಿಗೆ ಮಗನಾದುದರಿಂದ, ನಮ್ಮಿಬ್ಬರಿಗೆ ಪರಸ್ಪರಬಾಂ ಧನ್ಯವೂ ಇರುವುದು ಇದಿಷ್ಟೂ ಹಾಗಿರಲಿ' ರಾಮನನ್ನಾಶ್ರಯಿಸುವುದರಿಂ ದ ನಿನಗೆ ಯಾವ ಲಾಭವಾಗಲಿ, ಅವನನ್ನು ಬಿಡುವುದರಿಂದ ನಷ್ಟವಾಗಲಿ ಇಲ್ಲ. ನಮ್ಮೊಡನೆ ನಿನಗೆ ಈ ವ್ಯರ್ಥವಾದ ವೈರವು ಯುಕ್ತವಲ್ಲ. ನನಗೂ, ನಿನ್ನಣ್ಣನಾದ ನಾಲಿಗೂ ಎಷ್ಟುಸ್ಸೇಹವೆಂಬುದನ್ನು ನೀನು ಕಾಣೆಯಾ? ಆ ಸಂಬಂಧದಿಂದ ನಾನೂ ನಿನ್ನ ನ್ನು ಒಡಹುಟ್ಟಿದವನೆಂದೇ ಭಾವಿಸಿರುವೆನು. ಆದುದರಿಂದ ಎಲೈ ವಾನರೇಶ್ವರನೆ! ಈಗಲೂ ನೀನು ರಾಮನನ್ನು ಬಿಟ್ಟು ನನ್ನೊಡನೆ ಸ್ನೇಹವನ್ನು ಬಳೆಸು ' ನಾನು ಆ ರಾಮನ ಭಾರೆಯನ್ನು ಕದ್ದು ತಂದಮಾತ್ರಕ್ಕೆ ಅದರಿಂದ ನಿನಗೇನು ? ನಿನ್ನ ಪಾಡಿಗೆ ನೀನು ಕಿಕ್ಕಿಂಧೆಗೆ ಹೋಗಿ ನಿನ್ನ ರಾಜ್ಯದಲ್ಲಿ ಸುಖದಿಂದಿರು? ಆದರೆ ಆರಂಭಿಸಿದ ಕಾಠ್ಯವನ್ನು ಹೇಗೆ ಬಿಡುವು ದೆಂದು ಕೇಳುವೆಯಾ? ನೀನು ಈಗ ಉದ್ದೇಶಿಸಿ ಬಂದಿರುವ ಕಾರವನ್ನು ಪೂರಯಿಸಬೇಕೆಂದರೆ ನಿನ್ನಿಂದ ಸಾಧ್ಯವೆ? ಎಂದಿಗೂ ಸಾಧ್ಯ