ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨೦ ಶ್ರೀಮದ್ರಾಮಾಯಣವು [ಸರ್ಗ, ೨೦° ವಲ್ಲ. ಮನುಷ್ಯರಿಗಾಗಲಿ, ಕಪಿಗಳಿಗಾಗಲಿ ಎಂದಿಗೂ ಈ ಲಂಕೆಯನ್ನು ಪ್ರವೇಶಿಸುವುದು ಶಕ್ಯವಲ್ಲ. ದೇವಗಂಧರಾದಿಗಳಾದರೂ ಇದನ್ನು ಪ್ರ ವೇಶಿಸಲಾರರು ಇನ್ನು ನಿಮ್ಮಂತಹ ನರವಾನರರ ಸಂಗತಿಗಳನ್ನು ಹೇಳಬೇ ಕಾದುದೇನು?”ಎಂದು ನಾನು ಹೇಳಿದುದಾಗಿ ಸುಗ್ರೀವನಿಗೆ ಹೇಳು.” ಎಂದ ನು. ಹೀಗೆ ರಾಕ್ಷಸೇಂದ್ರನಾದ ರಾವಣನು ಆಜ್ಞೆ ಮಾಡಿದೊಡನೆ, ಶುಕನು ಪಕ್ಷಿರೂಪವನ್ನು ಧರಿಸಿ, ಆಗಲೇ ಆಕಾಶಕ್ಕೆ ಹಾರಿ, ಸುಗ್ರೀವನಿದ್ಯಸ್ಥಳಕ್ಕೆ ಹೊರಟನು ಹೀಗೆ ಶುಕನು ಸಮುದ್ರದ ಮೇಲೆ ಅಂತರಿಕ್ಷಮಾರ್ಗದಿಂದ ಬಹುದೂರದವರೆಗೆ ಹಾರಿ ಬಂದು, ಸುಗ್ರೀವಾದಿವಾನರರಿದ್ದ ಸ್ಥಳವನ್ನು ಸಮೀಪಿಸಿ, ಆಕಾಶದಲ್ಲಿದ್ದಂತೆಯೇ ಸುಗ್ರೀವನನ್ನು ಕುರಿತು, ರಾವಣನು. ತನ್ನೊಡನೆ ಹೇಳಿಕಳುಹಿಸಿದ ಮಾತುಗಳಲ್ಲಿ ಒಂದನ್ನೂ ಬಿಡದೆ ಕ್ರಮ ವಾಗಿ ಹೇಳಿದನು. ಹೀಗೆ ಶುಕನು, ರಾವಣನ ಸಂದೇಶಗಳನ್ನು ತಿಳಿಸು ತಿರುವಷ್ಟರಲ್ಲಿಯೇ, ಅಲ್ಲಿದ್ದ ವಾನರರೆಲ್ಲರೂ ಕೋಪಗೊಂಡು, ತಟ್ಟನೆ ಆಕಾಶಕ್ಕೆ ಹಾರಿ, ಅವನನ್ನು ಮುಷ್ಟಿಗಳಿಂದ ಹೊಡೆದು,ಅವನ ರೆಕ್ಕೆಗಳನ್ನು ದಿರಿಸಬೇಕೆಂಬ ಉದ್ದೇಶದಿಂದ ಸುತ್ತಲೂ ಮುತ್ತಿದರು ಈ ವಾ ನರರೆಲ್ಲರೂ ಬಲಾತ್ಕಾರದಿಂದ ಆ ಶುಕನನ್ನು ಹಿಡಿದು ನಿಗ್ರಹಿಸಿ ಕೆಡಹಲು, ಆಗಲೇ ಅವನು ಶಕ್ತಿಗುಂದಿ ದೊಪ್ಪನೆ ನೆಲಕ್ಕೆ ಬಿದ್ದನು ಹೀಗೆ ವಾನರರು, ಸುತ್ತಿಮುತ್ತಿ ಪೀಡಿಸುತ್ತಿರಲು, ಶುಕನು ಅವರ ಹಿಂಸೆಯನ್ನು ತಡೆಯಲಾ ರದೆ, ರಾಮನನ್ನು ಕೂಗಿ ಮೊರೆಯಿಡುತ್ತ (ಎಲೈ ಕಕುವಂಶಶಿಖಾ ಮಣಿಯೆ ' ಲೋಕದಲ್ಲಿ ದೂತರಾಗಿ ಬಂದವರನ್ನು ಕೊಲ್ಲುವುದುಂಟೆ ? ಈ ವಾನರರು ನನ್ನನ್ನು ಕೊಲ್ಲುತ್ತಿರುವರಲ್ಲಾ ! ನೀನಾದರೂ ಇವರನ್ನು ತಡೆ ದು ನನ್ನನ್ನು ಬದುಕಿಸಬೇಡವೇ? ಯಾವನು ತನ್ನ ಪ್ರಭುವು ಹೇಳಿಕಳುಹಿಸಿದ ಅಭಿಪ್ರಾಯವನ್ನು ಬಿಟ್ಟು, ತನಗೆ ತೋರಿದಂತೆ ತನ್ನ ಮತವನ್ನು ಹೇಳು ವನೋ, ಅಂತಹ ದೂತನು ತನ್ನ ಸ್ವಾಮಿಯ ಸಂದೇಶವನ್ನು ಮೀರಿ ನಡೆದ ಹೀನದೂತನೆನಿಸಿಕೊಳ್ಳುವುದರಿಂದ, ಅಂತಹ ದೂತರನ್ನು ಕೊಂದರೂ ದೋಷವಿಲ್ಲ ಹಾಗಿಲ್ಲದೆ ನಾನು ನನ್ನ ಪ್ರಭುವಿನ ಸಂದೇಶವನ್ನು ಇದ್ದು ದಿದ್ಯಂತೆ ತಿಳಿಸುತ್ತಿರುವಾಗಲೂ, ಈ ವಾನರರು ನನ್ನನ್ನು ಕೊಲ್ಲುತ್ತಿರುವ ರಲ್ಲಾ” ಎಂದನು ಹೀಗೆ ಶುಕನು ದೈನ್ಯದಿಂದ ಗೋಳಿಡುವುದನ್ನು ಕೇಳಿ,