ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೦] ಯುದ್ಧಕಾಂಡವು. ೨೨೨೧ ರಾಮನು ಅವನಲ್ಲಿ ಮರುಕಗೊಂಡು, ಅವನನ್ನು ಸುತ್ತಿನಲ್ಲಿ ಹೊಡೆಯುತಿ ದ್ದ ವಾನರರನ್ನು ಕುರಿತು (ಎಲೆ ವಾನರರೆ!ಅವನನ್ನು ಕೊಲ್ಲಬೇಡಿರಿ”ಎಂದು ನಿಯಮಿಸಿದನು?ರಾಮಾಜ್ಞೆಯಿಂದ ವಾನರರು ಅವನನ್ನು ಬಿಟ್ಟುಬಿಡಲು, ಅ ವನು ಸ್ವಲ್ಪಥೈಲ್ಯವನ್ನು ಹೊಂದಿ,ಮುರಿದ ರೆಕ್ಕೆಗಳಿಂದಲೇ ಪ್ರಯತ್ನ ಪಟ್ಟು ತಿರುಗಿ ಮೇಲೆಹಾರಿ, ಅಂತರಿಕ್ಷದಲ್ಲಿ ನಿಂತು, ವಾನರರನ್ನು ಕುರಿತು ಸುಗ್ರಿ ವಾ!ನೀನು ಮಹಾಬಲವುಳ್ಳವನು 'ಶಕ್ತಿಸಂಪನ್ನನು!ಮೇಲಾದ ಪರಾಕ್ರಮವು ಇವನು' ಫುಾತುಕನಾದ ರಾವಣನು ಸಮಸ್ತಲೋಕಗಳನ್ನೂ ಗೋಳಾಡಿ ಸತಕ್ಕವನೆಂಬುದನ್ನು ನೀನುಕಾಣೆಯಾ? ಈಗನಾನುನಿನ್ನಿಂದ ಅವನ ಮಾತಿಗೆ ತಕ್ಕ ಪ್ರತ್ಯುತ್ತರವನ್ನು ತಿಳಿದುಕೊಳ್ಳದೆ ಹೋದಪಕ್ಷದಲ್ಲಿ ನನ್ನನ್ನು ಕೊಂದೇ ಬಿಡುವನು ಆದುದರಿಂದ ಈಗ ನಾನು ನಿನ್ನ ಮಾತಿನಿಂದ ಆವನಿಗೆ ತಿಳಿಸಬೇ ಕಾದುದೇನು?ಹೇಳು'”ಎಂದನು, ಶುಕನು ಹೇಳಿದ ಈ ಮಾತನ್ನು ಕೇಳಿ, ವಾ ನರರಾಜನಾಗಿಯೂ,ಮಹಾಬಲಾಢನಾಗಿಯೂ ಇರುವ ಸುಗ್ರೀವನು, ತನ್ನ ಎಣೆಯಿಲ್ಲದ ಧೈತ್ಯಗುಣಕ್ಕೆ ತಕ್ಕಂತೆ ಆ ದೂತನನ್ನು ಕುರಿತು (ಎಲೆ ರಾ ಕಸದೂತನೆ ನೀನು ನನ್ನ ಮಾತಿನಿಂದ ರಾವಣನನ್ನು ಕುರಿತು, ನೀನು ನನಗೆ ಮಿತ್ರನೂ ಅಲ್ಲ? ನಿನ್ನಲ್ಲಿ ನಾನು ದಯೆಯನ್ನು ತೋರಿಸಬೇಕಾದು ದೂ ಇಲ್ಲ' ಹಿಂದೆ ಯಾವಾಗಲೂ ನಾನು ನಿನ್ನಿಂದ ಉಪಕಾರವನ್ನು ಪಡೆ ದವನೂ ಅಲ್ಲ ' ನಿನ್ನಲ್ಲಿ ನನಗೆ ಪ್ರೀತಿಗೂ ಕಾರಣವಿಲ್ಲ ! ಇಷ್ಟೆ ಅಲ್ಲದೆ ನೀನೂ, ನಿನಗೆ ಸಂಬಂಧಿಸಿದವರೆಲ್ಲರೂ ನನ್ನ ಮಿತ್ರನಾದ ರಾಮನಿಗೆ ಶತ್ರು ಗಳಾದುದರಿಂದ, ನನಗೂ ನೀನು ಶತ್ರುವೇಹೊರತು ಬೇರೆಯಲ್ಲ. ನನ್ನಣ್ಣ ನಾದ ವಾಲಿಗೆ ನೀನು ಪರಮಮಿತ್ರನೆಂದು ಹೇಳಿಕೊಂಡೆಯಲ್ಲವೆ? ಅದೇ ಕಾರಣದಿಂದ ನೀನು ನನಗೆ ಶತ್ರುವಂತೆ ವಧ್ಯನೇಹೊರತು ವಿಶ್ವಾಸಪಾ ತನಲ್ಲ. ನಮ್ಮಿಂದ ಲಂಕೆಗೆ ಪ್ರವೇಶಿಸುವುದೇ ಸಾಧ್ಯವಲ್ಲವೆಂದು ಹೇಳಿದೆ ಯಷ್ಟೆ? ಎಲೆ ಹುಚ್ಚನೆ' ಆ ಭ್ರಾಂತಿಯನ್ನು ಬಿಡು'ಇನ್ನು ಶೀಘ್ರದಲ್ಲಿಯೇ ನಾನು ಲಂಕೆಗೆ ಬಂದು, ಅಲ್ಲಿನ ಯುದ್ಧದಲ್ಲಿ ರಾಕ್ಷಸರಾಜನಾದ ನಿನ್ನನ್ನೂ ನಿನ್ನ ಮಕ್ಕಳನ್ನೂ, ನಿನ್ನ ಬಂಧುಗಳನ್ನೂ, ನಿನ್ನ ದಾಯಾದರನ್ನೂ, ಇನ್ನೂ ನಿನಗೆ ಸೇರಿದವರೆಲ್ಲರನ್ನೂ ವಧಿಸುವೆನು ನೋಡು ! ನಿಮಿಷಮಾತ್ರ ದಲ್ಲಿ ನಿನ್ನ ಲಂಕಾನಗರಿಯನ್ನೇ ಸುಟ್ಟು ಬೂದಿಮಾಡುವನೆಂದು ತಿಳಿ ! ಎಲೆ