ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨೨ ಶ್ರೀಮದ್ರಾಮಾಯಣವು [ಸರ್ಗ ೨೦. ಮೂಢ ರಾವಣಾ' ಇನ್ನು ಮೇಲೆ ನಿನ್ನನ್ನು ದೇವತೆಗಳೊಡಗೂಡಿದ ದೇವೇಂ ದ್ರನೇ ಬಂದು ಬಚ್ಚಿಟ್ಟುಕೊಂಡರೂ, ನಿನ್ನ ಮಾಯೆಯಿಂದ ನೀನೇ ಕಣ್ಣಿ ಗೆ ಕಾಣದೆ ತಲೆತಪ್ಪಿಸಿಕೊಂಡರೂ, ಸೂರಬಿಂಬದ್ವಾರದಲ್ಲಿ ಪ್ರವೇಶಿಸಿದೆ ರೂ ರಾಮನ ಕೈಯಿಂದ ತಪ್ಪಿಸಿಕೊಳ್ಳಲಾರೆ' ಇದು ನಿಜವು'ರಾಮನ ದ್ವೇ ಹಕ್ಕೆ ಪಾತ್ರನಾದ ನಿನ್ನನ್ನು ಪಿಶಾಚರನ್ತಿಯಾಗಲಿ, ರಾಕ್ಷಸರತ್ತಿಯಾಗಲಿ, ಗಂಧತ್ವರಲ್ಲಿಯಾಗಲಿ, ದೈತ್ಯರಲ್ಲಿಯೇ ಆಗಲಿ, ಮೂರು ಲೋಕಗಳಲ್ಲಿಯೂ ಯಾವನೊಬ್ಬನೂ ರಕ್ಷಿಸಿಕೊಳ್ಳಬಲ್ಲವೆಂದು ನನಗೆ ತೋರಲಿಲ್ಲ. ಮುಪ್ಪಿನಿಂ ದ ಕೇವಲ ಬಲಹೀನನಾದ ಜಟಾಯುವನ್ನು ಕೊಂದ ನಿನ್ನ ವೀರಕ್ಕೆ ನೀನೇ ಹಿಗ್ಗುವೆಯಾ?ಛೀ ಮೂಢನೆ ' ನಮ್ಮನ್ನು ಹಾಗೆಣಿಸಬೇಡ ' ಅದೂ ಹೋ ಗಲಿ' ರಾಮನಾಗಲಿ,ಲಕ್ಷ ಣನಾಗಲಿ ಕಣ್ಣಿಟರಿಗಿದ್ದಾಗ,ನೀನು ನಿನ್ನ ವೀರ ವನ್ನು ತೋರಿಸಿ ಸೀತೆಯನ್ನು ಕರೆತಂದೆಯಾ?ಅದೂ ಇಲ್ಲ' ಕಳ್ಳನಂತೆ ಹೋಂ ಚುಹಾಕಿ ಆಕೆಯನ್ನು ಕದ್ದು ತಂದೆಯಲ್ಲಾ' ಈಗಲೂ ನಿನಗೆ ಮುಂದೆ ಬರ ಬಹುದಾದ ಅನರ್ಥವೇನೆಂದು ತಿಳಿದಿಲ್ಲ ' ಮಹಾಬಲಾಢನಾಗಿಯೂ, ಮ ಹಾಬುದ್ದಿವಂತನಾಗಿಯೂ, ದೇವತೆಗಳಿಗೂ ದುರ್ಜಯನಾಗಿಯೂ ಇರುವ ರಫುತಿಲಕನಾದ ಶ್ರೀರಾಮನೇ ನಿನ್ನ ಪ್ರಾಣಗಳನ್ನು ಕಳೆಯತಕ್ಕವನೆಂ ದು ಇನ್ನೂ ನಿನಗೆ ತಿಳಿಯಲಿಲ್ಲವೆ?” ಎಂದು ನಾನು ಹೇಳಿದುದಾಗಿ ತಿಳಿಸು” ಎಂದನು. ಇಷ್ಟರಲ್ಲಿ ವಾಲಿಪುತ್ರನಾದ ಅಂಗದನು ಸುಗ್ರೀವನನ್ನು ಕು ರಿತು, (ಎಲೆ ಮಹಾರಾಜನೆ ! ಇದೇನು ? ಈ ನೀಚರಾಕ್ಷಸನೊಡನೆ ನಿನಗೆ ಇಷ್ಟು ಸಂಭಾಷಣಗಳೇಕೆ? ಇವನು ನಿಜವಾಗಿಯೂ ದೂತನಾಗಿ ಬಂದವನ ಲ್ಲ! ಇವನು ರಾವಣನಿಗೆ ಗೂಢಚಾರನೆಂದೇ ನನಗೆ ತೋರುವುದು ಇವನು ಇಲ್ಲಿ ನಮ್ಮಿದಿರಾಗಿ ನಿಂತು ಮಾತಾಡುವ ನೆವದಿಂದಲೇ, ನಮ್ಮ ಸೈನ್ಯದ ಪ್ರಮಾಣಗಳನ್ನೆಲ್ಲಾ ಕಂಡುಕೊಳ್ಳುತ್ತಿರುವನು. ಇವನನ್ನು ನಾವು ಇ ಕ್ಲಿಯೇ ಹಿಡಿದು ಕೊಂದುಬಿಡಬೇಕು ಇವನನ್ನು ತಿರುಗಿ ಲಂಕೆಯ ಕಡೆಗೆ ಬಿಡಬಾರದೆಂದೇ ನನಗೆ ತೋರುವುದು.”ಎಂದನು ಇಷ್ಟರಲ್ಲಿಯೇ ಸುಗ್ರಿ ವಾಜ್ಞೆಯಿಂದ ಕೆಲವು ವಾನರರು ಆಕಾಶಕ್ಕೆ ಹಾರಿ, ಆ ಶುಕನನ್ನು ಹಿ ಡಿದು, ಅನಾಥನಂತೆ ಗೋಳಿಡುತ್ತಿರುವ ಆ ರಾಕ್ಷಸನನ್ನು ಹಗ್ಗಗಳಿಂದ ಕಟ್ಟೆತಂದರು. ಆಮೇಲೆ ಕೋಪಸ್ವಭಾವವುಳ್ಳ ಕೆಲವು ವಾನರರು ಆ