ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೨೧.] ಯುದ್ಧಕಾಂಡವು ೨೨೨೩ ಶುಕನನ್ನು ಸುತ್ತಿ ಮುತ್ತಿ ಪೀಡಿಸುತ್ತಿರಲು, ಆತನು ತಿರುಗಿ ಮಹಾತ್ಮನಾದ ರಾಮನನ್ನು ಕೂಗಿ ಮೊರೆಯಿಡುತ್ತ (ಅಯ್ಯೋ' ರಾಮಾ' ಈ ವಾನರರು ನ ರೆಕ್ಕೆಗಳನ್ನು ಮುರಿದು ಕಣ್ಣುಗಳನ್ನು ಕಿಳುತ್ತಿರುವರಲ್ಲಾ! ಇನ್ನು ನನ್ನ ಗತಿಯೇನು ? ನಾನು ನಿಜವಾಗಿಯೂ ಯಾವ ತಪ್ಪನ್ನೂ ಮಾಡಿದವನಲ್ಲ. ದೂತಕಾರಕ್ಕಾಗಿ ಬಂದವನು' ಹೀಗಿರುವಾಗಲೂ ಈ ವಾನರರ ಹಿಂಸೆಯಿಂ ದ ನಾನು ಇಲ್ಲಿ ಪ್ರಾಣವನ್ನು ಬಿಟ್ಟರೆ, ನೀನೇ ನನ್ನನ್ನು ಕೊಲ್ಲಿಸಿದಂತಾಗುವು ದು, ನಾನು ಹುಟ್ಟಿದುದುಮೊದಲು ಸಾಯುವವರೆಗೂ ಮಾಡಿದ ಪಾಪಗ ಆಗೆಲ್ಲಕ್ಕೂ ನೀನೇ ಭಾಗಿಯಾಗಬೇಕಾಗುವುದು ” ಎಂದು ಕೂಗಿಕೊಂಡನು ಈ ಪಿಲಾಪವನ್ನು ಕೇಳಿದೊಡನೆ ರಾಮನು ಅವನಲ್ಲಿ ಮರುಕಗೊಂಡು, ವಾ ನರರನ್ನು ಕುರಿತು, “ಎಲೆ ವಾನರರ 1 ಅವನು ದೂತನು ಅವನನ್ನು ಕೊಲ್ಲ ಬೇಡಿರಿ! ಅವನ ಕಟ್ಟುಗಳನ್ನು ಬಿಚ್ಚಿ ಕಳುಹಿಸಿಬಿಡಿರಿ!” ಎಂದು ಹೇಳಿ ಆ ವಾ ನರರಿಗೆ ಆಜ್ಞೆ ಮಾಡಿದನು. ಇಲ್ಲಿಗೆ ಇಪ್ಪತ್ತನೆಯ ಸರ್ಗವು. ರಾಮನು ದರ್ಭಶಯದಲ್ಲಿದ್ದು ಮೂರುರಾತ್ರಿಗಳ ) ವರೆಗೆ ಸಮುದ್ರವನ್ನಾರಾಧಿಸಿದರೂ, ಸಮುದ್ರನು | ಸನ್ನ ನಾಗದಿರಲು,ಕೋಪದಿಂದ ಬಾಣಪ್ರಯೋಗಕ್ಕೆ( (ತೊಡಗಿದುದು ಲಕ್ಷಣನು ಬೇಡವೆಂದು ತಡೆದುದು ) ಆಮೇಲೆ ರಘುನಂದನನಾದ ಶ್ರೀರಾಮನು, ಸಮುದ್ರತೀರದಲ್ಲಿ ದರ್ಭ ಗಳನ್ನು ಹಾಸಿಕೊಂಡು, ಸಮುದ್ರಕ್ಕಿದಿರಾಗಿ ಕೈಮುಗಿದು ಪೂರಾಭಿಮುಖ ವಾಗಿ ಮಲಗಿಬಿಟ್ಟನು ಪರಂತಪನಾದ ಆ ರಾಮನು ಹೀಗೆ ದರ್ಭಶಯನ ಔ ರುವಾಗ, ಸರ್ಪದೇಹದಂತೆ ಮೃದುವಾಗಿ ಉದ್ಯವಾದ ತನ್ನ ಬಲ ದೋಳನ್ನೆ ತಲೆದೆಸೆಗಿಟ್ಟುಕೊಂಡು, ಆ ಸಮುದ್ರಕ್ಕಿದರಾದ ಬೇರೊಂದು ಮಹಾಸಮುದ್ರದಂತೆ ಮಲಗಿದ್ದನು ಮೊದಲು ಅಯೋಧ್ಯೆಯಲ್ಲಿ ದ್ದಾಗ, ಯಾವಭುಜವು ಬಗೆಬಗೆಯ ರತ್ಯಾಭರಣಗಳಿಂದಲಂಕೃತವಾಗಿ ಶೋಭಿಸುತಿತ್ತೋ,* ಯಾವಭುಜವನ್ನು ಎಷ್ಪಮಂದಿ ಉತ್ತಮಸ್ತಿಯ

  • ಇಲ್ಲಿ 'ಭಜ್ಞೆ ಪರಮನಾರೀ ಣಾಮಭಿನ್ನಷ್ಣ ಮನೇಕಧಾ” ಎಂದು ಮೂಲವ, ಇಲ್ಲಿ ರಾಮನ ಭುಜಕ್ಕೆ ಅನೇಕಯರ ಕರಸ್ಪರ್ಶವನ್ನು ಹೇಳಿರುವುದರಿಂದ, ರಾಮ