ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨೫ ಸರ್ಗ ೨೧ } ಯುದ್ಧಕಾಂಡವು. ಕೈಗಳಿಂದ ಅನೇಕ ಪ್ರಕಾರವಾಗಿ ಒತ್ತುತಿದ್ದರೋ, ಯಾವಭುಜವು ಪೂರ, ದಲ್ಲಿ ಅಗರುಚಂದನಾದ್ಯನೇಕಸುಗಂಧಗಳಿಂದಲೂ, ಬಾಲಸೂರನಂತೆ ಹೊಳೆಯುವ ರಕ್ತಚಂದನದಿಂದಲೂ ಲೇಪಿತಪಾಗಿ ಘಮಘಮಿಸುತಿ ತೊ, ಯಾವಭುಜವು ಮೊದಲು ಹಂಸತೂಲಿಕಾಲತಲ್ಪದಲ್ಲಿ ಗಂಗಾಪ್ರ ವಾಹದಲ್ಲಿರುವ ತಕ್ಷಕದೇಹದಂತೆ ಕಾಣಿಸುತ್ತೆ, ಸೀತೆಯ ತಲೆಗೆ ಆಗಾಗ ಸುಖಾಶ್ರಯವಾಗುತಿತ್ತೋ, ಈಗಲೂ ಯಾವಭುಜವು ಗೋಪುರದ ಬಾ ಗಿಲಗುಳಿಯಂತೆ ಶನಿವಾರಕವಾಗಿ, ನೋಡುವಾಗಲೇ ಶತ್ರುಗಳಿಗೆ ಭಯ ವನ್ನೂ , ಸುಕೃತ್ತುಗಳಿಗೆ ಆನಂದವನ್ನೂ ಉಂಟುಮಾಡುತ್ತಿರುವುದೋ, ಈಗಲೂ ಯಾವಭುಜವು ಸಮುದ್ರಾಂತವಾದ ಸಮಸ್ತಭೂಮಿಗೂ ಆಶ್ರ ಯವೆನಿಸಿರುವುದೋ, ಎಡಗೈಯಿಂದ ಬಾಣವನ್ನು ಬಿಡುವಾಗ ಯಾವ ಭುಜದಲ್ಲಿ ಬಿಲ್ಲಿನ ನಾಣಿನ ಬಡಿತದಿಂದ ಚರ್ಮವೆದ್ದು, ಅಲ್ಲಲ್ಲಿ ಪಟ್ಟುಗಟ್ಟಿ ರುವುದೋ, ದೊಡ್ಡ ಕಬ್ಬಿಣದಗುಳಿಯಂತೆ ದುಂಡಗೆ ದಪ್ಪನಾಗಿ ನೀಡಿ ರುವ ಯಾವಭುಜವು, ಇದುವರೆಗೆ ಎಷ್ಟೋ ಸಹಸ್ರಗೋವುಗಳನ್ನು ದಾ ನಮಾಡಿ ಪ್ರಸಿದ್ಧಿ ಹೊಂದಿರುವುದೋ, ಆ ತನ್ನ ಬಲದೋಳನ್ನೇ ರಾಮನು ತನ್ನ ತಲೆದೆಸೆಗಿಟ್ಟು ಮಲಗಿ, ತನ್ನಲ್ಲಿ ತಾನು, “ಈಗ ನನಗೆ ಹೀಗೆಯೇ ಮರಣವಾಗಲಿ, ಸಮುದ್ರತರಣವಾಗಲಿ, ಈ ಎರಡರಲ್ಲಿ ಯಾವುದಾದರೂ ಒಂದು ಸಿದ್ಧಿಸಲಿ'” ಎಂದು ದೃಢಬುದ್ಧಿಯಿಂದ ಸಂಕಲ್ಪಿಸಿ, ಸ್ನಾ ನಾಡಿಗ ಳಿಂದ ದೇಹಶುದ್ಧಿಯನ್ನು ಮಾಡಿಕೊಂಡು, ವಾಚ್ಚೆ ಯಮದಿಂದಲೂ, ಮನೋನಿಯಮದಿಂದಲೂ ಕೂಡಿ ಶಾಸೊಕ್ಕವಿಧಿಯಿಂದ ಸಮುದ್ರ ಯಜ್ಞದಲ್ಲಿ, ವಿಷ್ಣುಕ್ರಮವೆಂಬವಡೆ, ಆಜ್ಞಾಪೇಕ್ಷಣ,ಇದೇಮೊದಲಾದುವು ಲೋಪಿಸಬಹು ಬಾದರೂ, ಅವರ ಯಜ್ಞಕ್ಕೆಲೋಪವೇನೂ ಬಾರದು ಅಂತಹ ಸಂದರ್ಭಗಳಲ್ಲಿ ಆಯಾ ಮಂತ್ರೋಚ್ಚಾರಣಮಾತ್ರದಿಂದಲೇ ಕಾಠ್ಯವುನೆರವೇರಿದಂತೆ ಗ್ರಹಿಸಬೇಕಾಗುವುದಲ್ಲವೆ? ಆದುದರಿಂದ ಇಲ್ಲಿಯೂ ಕೇವಲನ್ಯಾಯಸಂಚಾರವನ್ನು ಹಿಡಿದು ಅಪನ್ಯಾಯಮಾರ್ಗ ವನ್ನನುಸರಿಸಬಾರದು ರಾಮನ ಆಚಾರವೇ ಲೋಕಕ್ಕೆ ಮುಖ್ಯ ಪ್ರಮಾಣವೆಂದು ತಿಳಿಯ ಬೇಕು ಆದುದರಿಂದ ರಾಮನಿಗೆ ಸೀತೆಯೊಬ್ಬಳುಹೊರತು ಬೇರೆ ಪತ್ನಿ ಯರಿಲ್ಲವೆಂಬು ದು ಸಿದ್ಧಾಂತವು ಈ ವಿಚಾರವು! ಅಯೋಧ್ಯಾಕಾಂಡದ ಎಂಟನೆಯಸರ್ಗದ ವ್ಯಾಖ್ಯಾ ನದಲ್ಲಿ ಇನ್ನೂ ವಿವರವಾಗಿ ಚರ್ಚಿಸಿ ಸಿದ್ದಾಂತೀಕರಿಸಲ್ಪಟ್ಟಿದೆ.