ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨೭ ಸರ್ಗ ೨೧.] ಯುದ್ಧಕಾಂಡವು. ಈ ಮೊದಲಾದ ಗುಣಗಳೆಲ್ಲವೂ ಸತ್ಪುರುಷರಿಗೆ ಅವಶ್ಯವಾಗಿರಬೇಕಾದ ಸುಗುಣಗಳೆಂಬುದರಲ್ಲಿ ಸಂದೇಹವಿಲ್ಲ. ಆದರೇನು? ಈ ಸದ್ಗುಣಗಳನ್ನೇ ಹೀಗೆ ನೀಚರಾದವರಲ್ಲಿ ತೋರಿಸಿದರೆ, ಅವರು ಆ ಗುಣವುಳ್ಳವರನ್ನು ಆಸ ಮರ್ಥರೆಂದು ಗ್ರಹಿಸಿಬಿಡುವರು ಇಂತಹ ಅವಿವೇಕಿಗಳಲ್ಲಿ ಈ ಸದ್ಗುಣ ಗಳನ್ನು ತೋರಿಸುವುದರಿಂದ ಕೈಲಾಗದವನೆಂದು ಹೇಳಿಸಿ ಕೊಳ್ಳುವುದೊಂ ದೇ ಫಲವು. ಆಜ್ಞರಾದ ಜನರು ಆತ್ಮಸ್ತುತಿಮಾಡಿ ಕೊಳ್ಳುವವನನ್ನೂ, ದಯೆಯಿಲ್ಲದವನನ್ನೂ, ವಂಚಕನನ್ನೂ, ಜನರಲ್ಲಿ ಸಲಿಗೆಯಿಲ್ಲದವನನ್ನೂ ನ್ಯಾಯವಿವೇಚನೆಯಿಲ್ಲದೆ ಶಿಕ್ಷಿಸುವವನನ್ನೂ, ಬಹಳ ಸಮರ್ಥನೆಂದು ತಿಳಿ ದು ಗೌರವಿಸುವರು ಲಕ್ಷಣಾ ' ಮುಖ್ಯವಾಗಿ ಲೋಕದಲ್ಲಿ ಮೃದುತ್ವ ದಿಂದ ಬಲವಂತನೆಂಬ ಕೀರ್ತಿಯೂ ಬಾರದು ಪರಾಕ್ರಮವುಳ್ಳವನೆಂಬ ಯಶಸೂ ಬಾರದು. ಯುದ್ಧದಲ್ಲಿ ಜಯವೂ ಬಾರದು ದುರ್ಜನರಲ್ಲಿ ಸಾಮವೆಂಬುದು ಕೆಲಸಕ್ಕೆ ಬಾರದು ಇಂತವರಲ್ಲಿ ದಂಡೋಪಾಯವೇ ಮೇಲಾದ ಸಾಧನವು ಎಲೆ ವತ್ಪನೆ'ಇದೋ ನೋಡು' ಈಗಲೇ ನಾನು ನನ್ನ ಬಾಣಗಳಿಂದ ಈ ಸಮುದ್ರವನ್ನು ಕಲಕಿ ಬಿಡುವೆನು ನನ್ನ ಬಾಣಗ ಳಿಂದ ಇದರಲ್ಲಿರುವ ಮಹಾಮಕರಗಳೆಲ್ಲವೂ ಭಿನ್ನ ಭಿನ್ನ ಗಳಾಗಿ ಈ ಸಮು ದ್ರದ ನೀರನ್ನೆಲ್ಲಾ ವ್ಯಾಪಿಸಿ ಮೇಲೆತೇಲಾಡುವಂತೆ ಮಾಡುವೆನು ನೋಡು! ಅಲ್ಲಲ್ಲಿರುವ ಮಹಾಸರ್ಪಗಳ ದೊಡ್ಡ ದೇಹಗಳೂ, ಗಜಾಕೃತಿಯುಳ್ಳ ಮೀ ನುಗಳ ಸುಂಡಿಲುಗಳೂ,ನನ್ನ ಬಾಣಗಳಿಂದ ಕತ್ತರಿಸಲ್ಪಡುವುದನ್ನೂ ನೋ ಡು' ಈಗಲೇ ನನ್ನ ಬಾಣಗಳನ್ನು ಪ್ರಯೋಗಿಸಿ, ಶಂಖಗಳಿಂದಲೂ, ಮು ತುಚಿಪ್ಪುಗಳಿಂದಲೂ, ಮೀನುಗಳಿಂದಲೂ, ಮೊಸಳೆಗಳಿಂದಲೂ ತುಂಬಿದ ಈ ಸಮುದ್ರವನ್ನು ನಿಮಿಷಮಾತ್ರದಲ್ಲಿ ಶೋಷಿಸುವುದನ್ನಾ ದರೂ ನೋ ಡು'ಲಕ್ಷಣಾ!ನಾನು ತಾಳ್ಮೆಯಿಂದ ಸುಮ್ಮನಿರುವುದನ್ನು ನೋಡಿ, ಈ ಸ ಮುದ್ರವು ನನ್ನನ್ನು ಕೈಲಾಗದವನೆಂದು ತಿಳಿದಹಾಗಿದೆ. ಛೇ!ಇಂತಹ ನೀಚ ಜನದಲ್ಲಿ ತಾಳ್ಮೆಯೆಂಬುದು ಎಂದಿಗೂ ಕೆಲಸಕ್ಕೆ ಬಾರದು'ಇಂತವನಲ್ಲಿ ಕೋ ಪವೇ ಯುಕ್ತವೇ ಹೊರತು, ಸಾಮದಿಂದ ಈ ಸಮುದ್ರವು ನಮಗೆ ತನ್ನ