ವಿಷಯಕ್ಕೆ ಹೋಗು

ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೨೮ ಶ್ರೀಮದ್ರಾಮಾಯಣವು (ಸರ್ಗ ೨೧. ರೂಪವನ್ನು ತೋರಿಸುವ ಹಾಗಿಲ್ಲ. * ವತ್ಸಲಕ್ಷಣಾ' ನನ್ನ ಬಿಲ್ಲನ್ನೂ, ವಿ ಷಸರ್ಪಗಳಿಂತಿರುವ ನನ್ನ ಕೂರಬಾಣಗಳನ್ನೂ ತಂದುಕೊಡು ! ಈ ಸ ಮುದ್ರವನ್ನು ಶೋಷಿಸಿಬಿಡುವೆನು' ನಮ್ಮ ಕಡೆಯ ಕಪಿಗಳು ಇದನ್ನು ಕಾ ಲುವಡೆಯಿಂದಲೇ ದಾಟಿಹೋಗಲಿ ! ಈ ಸಮುದ್ರನು ಅಕ್ಷಭ್ಯನೆಂದು ಲೋಕದಲ್ಲಿ ಖ್ಯಾತಿಹೊಂದಿದವನಲ್ಲವೆ? ಈಗ ನಾನು ಅವನಿಗೆ ಆ ಖ್ಯಾತಿಯ ವೈ ಹೋಗಲಾಡಿಸುವೆನು ನೋಡು'ಆಗಾಗ ಅಲೆಗಳಿಂದ ತುಂಬಿ ತುಳುಕುತಿ ದರೂ, ಸುತ್ತಲೂ ಇರುವ ತನ್ನ ಎಲ್ಲೆಕಟ್ಟನ್ನು ಮೀರದೆ ಸೈಯ್ಯದಿಂದಿರು ವ ಈ ಸಮುದ್ರನನ್ನು , ಈಗ ನನ್ನ ಬಾಣಗಳಿಂದ ತನ್ನ ಎಲ್ಲೆಯನ್ನು ಮೀರು ವಂತೆ ಮಾಡುವೆನು ನೋಡು' ಈ ಮಹಾಸಮುದ್ರವನ್ನು , ನಾನು ಅದರಲ್ಲಿ ಕಾವಲಿರುವ ಅನೇಕದೈತ್ಯದಾನವಸಮೂಹದೊಡನೆ ಕೈಭಹೊಂದಿಸುವು ದನ್ನಾ ದರೂ ನೋಡು”ಎಂದನು. ಹೀಗೆಂದು ಹೇಳಿ ರಾಮನು ಕೈಯಲ್ಲಿ ಧ

  • ಇಲ್ಲಿ 'ಚಾಪಮಾನಯ ಸೌಮಿತ್ರೆ ಶರಾಂಶ್ವಾಶೀವಿಷ್ಟೆಪರ್ಮಾ” ಎಂದು ಮೂಲವು ಸರಶಕ್ತನಾದ ರಾಮನು ಮೊದಲು ಎಷ್ಟೊವಿನಯದಿಂದ ಸಮುದ್ರವನ್ನು ಉವಾಸನೆಮಾಡಿ ಪ್ರಾರ್ಥಿಸಿದರೂ ಅವನು, ಪ್ರತ್ಯಕ್ಷನಾಗದುದಕ್ಕಾಗಿ, ಆಗಲೇ ಅವನ ನ್ನು ನಿಗ್ರಹಿಸಿಬಿಡಬಹುದಾಗಿದ್ದರà, ದಯಾಸ್ವಭಾವದಿಂದ ಅವನನ್ನು ನಿಗ್ರಹಿಸಲಾ ರದೆ, ಹೇಗಾದರೂ ಅವನು ತನಗೆ ಪ್ರತ್ಯಕ್ಷನಾಗಲೆಂದು ಇದುವರೆಗೆ ಮಾತಿನಿಂದ ಹೆದ ರಿಸಿ, ಈಗ ಕಾರದಿಂದಲೂ ಹೆದರಿಸುವನು. ಇಷ್ಟು ಕಾಲವಿಳಂಬಕ್ಕೂ ಅವನ ದಯಾ ಸ್ವಭಾವವೇ ಕಾರಣವೇ ಹೊರತು ಬೇರೆಯಲ್ಲವು ಮೇಲಿನ ವಾಕ್ಯಗಳ ಗೂಢಾರವೇ ನೆಂದರೆ -(ಚಾಪಮಾನಯ) ಗುಣಹೀನನಾದ ಇವನನ್ನು ನಿಗ್ರಹಿಸುವುದಕ್ಕೆ ಗುಣ ಯುಕ್ತವಾದ ನನ್ನ ಬಿಲ್ಲನ್ನು ತಂದಿಡು! (ಚಾಪಮಾನಯ) ಈತನ ಅನಮ್ರತೆಯನ್ನು ನೀಗಿಸುವುದಕ್ಕಾಗಿ ನಮವಾದ ಬಿಲ್ಲನ್ನು ತಂದುಕೊಡು ! (ಚಾಪಮಾನಯ) ಇವನ ಕಟ್ಟನ್ನು ಕದ 'ಸುವುದಕ್ಕಾಗಿ ಕಟ್ಟಳ್ಳ ನನ್ನ ಬಿಲ್ಲನ್ನು ತಂದುಕೊಡು! (ಸೌಮಿತ್ರೆ ) ರಾಮೇಪ್ರಮಾದಂ ಮಾಕಾರ್ಷಿ ” ಎಂದು ನಿನ್ನ ತಾಯಿಯಾದ ಸುಮಿತ್ರೆಯು ನಿನಗೆ ಹೇಳಿದ ಮಾತನ್ನು ಮರೆತೆಯೇನು? (ಶರಾಂಶ್ಚಾಶೀವಿಷ್ಪರ್ಮಾ) ಮುಳ್ಳನ್ನು ಮುಳ್ಳಿನಿಂದಲೇ ಕಿಳಬೇಕು, ಉಷ್ಯವನ್ನು ಉಷ್ಣದಿಂದಲೇ ಶಮನ ಮಾಡಬೇಕು, ವಿಷ ವನ್ನು ವಿಷದಿಂದಲೇ ಅಡಗಿಸಬೇಕಲ್ಲವೆ ? ಹಾಗೆಯೇ ಇಲ್ಲಿನ ಶರವನ್ನು (ನೀರನ್ನು) ಶೋಷಿಸುವುದಕ್ಕಾಗಿ ಶರಗಳನ್ನೇ (ಬಾಣಗಳನ್ನು ತಂದುಕೊಡು ! " ಎಂದು ಹೇಳಿದುದಾಗಿಭಾವವು