ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೨೧.] ಯುದ್ಧಕಾಂಡವು ೨೨೨೯ ನುಸ್ಸನ್ನು ಹಿಡಿದು,ಕೋಪದಿಂದ ಕಣ್ಣಾಲೆಗಳನ್ನು ತಿರುಗಿಸುತ್ತ, ಪ್ರಳಯ ಕಾಲಾಗ್ನಿ ಯಂತೆ ಜ್ವಲಿಸುತಿದ್ದನು ಅವನನ್ನು ತಡೆಯುವುದು ಯಾರಿಗೂ ಸಾಧ್ಯವಿಲ್ಲದಂತಾಯಿತು. ಹೀಗೆ ಕೋಪೋದ್ರಿಕ್ತನಾದ ರಾಮನು, ಸ ಮಸ್ತ ಜಗತ್ತನ್ನೂ ನಡುಗಿಸುತ್ತ, ಭಯಂಕರವಾದ ತನ್ನ ಧನುಸ್ಸನ್ನೆಳೆದು ಕಟ್ಟಿ, ಇಂದ್ರನು ವಜ್ರಾಯುಧಗಳನ್ನು ಪ್ರಯೋಗಿಸುವಂತೆ ಅನೇಕ ಕೂರಬಾಣಗಳನ್ನು ಪ್ರಯೋಗಿಸಿದನು ತೇಜಸ್ಸಿನಿಂದ ಜ್ವಲಿಸುತಿದ್ದ ಆ ಬಾಣಗಳೆಲ್ಲವೂ ಮಹಾವೇಗವುಳ್ಳವುಗಳಾಗಿ ಬಂದು ಸಮುದ್ರಜಲ ದೊಳಗೆ ಪ್ರವೇಶಿಸುತ್ತಿದ್ದುವು ಆಗ ಪಾತಾಳದವರೆಗಿದ್ದ ಮಹಾಸರ್ಪ ಗಳೆಲ್ಲವೂ ಭಯದಿಂದ ನಡುಗಿಹೋದುವು ಅನೇಕಮಗಳಿಂದಲೂ, ಮೊ ಸಳೆಗಳಿಂದಲೂ ತುಂಬಿದ ಆ ಮಹಾಸಮುದ್ರದಲ್ಲಿ, ಅಲೆಗಳ ಪ್ರವಾಹ ವೇಗವು, ಬಾಣದ ಗಾಳಿಯ ಬಡಿತದಿಂದುಂಟಾದ ಮಹಾಧ್ವನಿಯೊಡನೆ ಮ ತಷ್ಟು ಭಯಂಕರವಾಯಿತು ಆಗ ಆ ಸಮುದ್ರದ ಸ್ಥಿತಿಯನ್ನು ಕೇಳಬೇ ಕೆ ? ಸುತ್ತಲೂ ಅಲೆಗಳು ಮೇಲೆಮೇಲೆ ಉಬ್ಬಿಬಂದು, ತೀರಪ್ರದೇಶಕ್ಕೆ ಅಪ್ಪಳಿಸಿ ಹೊಡೆಯುತ್ತಿರುವುವು ಕೆಳಗಿದ್ದ ಶಂಖಗಳೂ, ಮತ್ತು ಚಿಪ್ಪ ಗಳೂ, ಮೇಲೆದ್ದು ತೇಲುತ್ತಿರುವುವು ನಡುನಡುವೆ ಸಮುದ್ರಜಲವು ಶೋ ಷಿಸುತ್ತಬಂದು ಹೋಗೆಯೇಳುತ್ತಿರುವುದು ಒಳಗಿದ್ದ ಮಹಾಸರ್ಪಗಳೆಲ್ಲವೂ ಬಾಣವೇಗಕ್ಕೆ ಸಿಕ್ಕಿ ಸಂಕಟಪಟ್ಟು ತತ್ತಳಿಸುತ್ತ,ಮುಖಗಳಿಂದಲೂ,ಕಣ್ಣುಗ ಳಿಂದಲೂ ಉರಿಯನ್ನು ಕಾರುತ್ತಿರುವುವು, ಪಾತಾಳವಾಸಿಗಳಾದ ಮಹಾ ವೀಠ್ಯವುಳ್ಳ ದಾನವರೂಕೂಡ ಭಯದಿಂದ ನಡುಗುತ್ತಿರುವರು ಆ ಸಮು ದ್ರದಮೇಲೆ ದೊಡ್ಡದೊಡ್ಡ ತರಂಗಗಳು ವಿಂಧ್ಯಮ೦ದರಪಕ್ವತಗಳಂತೆ ಮಹೋವ್ರ ತಗಳಾಗಿ, ಮೊಸಳೆ, ಮೀನು, ಮುಂತಾದ ಪ್ರಾಣಿಗಳೊಡನೆ ಲಕ್ಷೇಪಕ್ಷಸಂಖ್ಯೆಯಿಂದ ಹಾರಿ ಬಿಳುತ್ತಿರುವುವು. ಅಲ್ಲಲ್ಲಿ ದೊಡ್ಡ ದೊಡ್ಡ ಅಲೆಗಳು ಸುತ್ತಿ ಸುತ್ತಿ ಹೊಡೆಯುತ್ತಿರುವುವು ಪಾತಾಳವಾಸಿಗ ಳಾದ ಉರಗರೂ, ರಾಕ್ಷಸರೂ ಭಯದಿಂದ ತತ್ವಳಿಸುವರು ಅಲ್ಲಲ್ಲಿ ಮಹಾ ಗ್ರಾಹಗಳು ತಲೆಕೆಳಗಾಗಿ ಉರುಳುತ್ತಿರುವುವು ಆ ಮಹಾಸಮುದ್ರವನ್ನೇ ಅಡಿಮೇಲಾಗಿ ಮಗುಚಿದಂತೆ ಜಲಪ್ರವಾಹವು ಉಕ್ಕಿಬರುತ್ತಿರುವುದು ಹೀಗೆ