ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೨ ಶ್ರೀಮದ್ರಾಮಾಯಣವು - [ಸರ್ಗ ೨೨. ರ್ಫತವು ಹೊರಡುತಿತ್ತು. ಆಕಾಶದಲ್ಲಿ ಆವಹ ಸಿವಹಾದಿ ಸಪ್ತಮಾ ರುತುಗಳೂ ಕ್ರಮವಾಗಿ ಮಹಾವೇಗದಿಂದ ಬೀಸುತಿದ್ದುವ ವಾಯುವೇ ಗದಿಂದ ಚದರಿದ ಮೇಫುಗಳು ಆಕಾಶವೆಲ್ಲವನ್ನೂ ವ್ಯಾಪಿಸಿದುವು ದೊಡ್ಡ ವೃಕ್ಷಗಳೆಲ್ಲವೂ ಮುರಿದುಬಿದ್ದುವು ಪಕ್ವತಶಿಖರಗಳೂ, ಖಂಡಪರೂತಗಳೂ, ವಾಯುವೇಗದಿಂದ ಉರುಳುತಿದ್ದುವು. ಆಕಾಶದಲ್ಲಿ ಮಹಾಮೇಘಗಳು ಒಂ ದಾಗಿ ಸೇರಿ ಮಹಾಧ್ವನಿಯೊಡನೆ ಮಿಂಚಿನ ಕಿಡಿಗಳನ್ನು ಕಕ್ಕುತಿದ್ದುವು ಆ ಕಿಡಿಗಳು * ಮಹಾಶನಿಗಳಂತೆ ನೆಲಕ್ಕೆ ಬಿಳುತಿದ್ದುವು ಪ್ರಪಂಚದಲ್ಲಿ ಕ ಣ್ಣಿಗೆ ಕಾಣುವ ಮನುಷ್ಯಾದಿಭೂತಗಳೂ, ಅದೃಶ್ಯಗಳಾದ ಪಿಶಾಚಾದಿ ಭೂತಗಳೂ ಭಯದಿಂದ ನಡುಗಿ ತುಳಿಸುತ್ಯ ಭಯಂಕರಧ್ವನಿಯೊಡನೆ ನೆಲಕ್ಕುರುಳಿ ದುಃಖದಿಂದಲೂ,ಸಂಕಟದಿಂದಲೂ ನಿಶ್ಚಲವಾಗಿಬಿದ್ದಿದ್ದುವು ರಾಮನು ಬ್ರಹ್ಮಾಸ್ತ್ರವನ್ನು ಸಂಧಾನಮಾಡಿದಾಗಲೇ ಆ ಮಹಾಸಮುದ್ರ ವು ತನ್ನಲ್ಲಿರುವ ಸಮಸ್ತಭೂತಗಳೊಡನೆಯೂ, ಸರ್ಪಗಳೊಡನೆಯೂ, ರಾಕ್ಷಸರಡನೆಯೂ, ದೊಡ್ಡ ದೊಡ್ಡ ಅಲೆಗಳೊಡನೆಯೂ, ಉಲ್ಕೆ ಲಕಲ್ಲೋಲವಾಗಿ, ಮೊದಲು ರಾಮನು ಸಾಮಾನ್ಯವಾಗಿ ತನ್ನ ಮೇಲೆ ಬಾಣವನ್ನು ಬಿಟ್ಟಾಗ ತನಗುಂಟಾದ ದುರವಸ್ಥೆಗಿಂತಲೂ, ಅತಿ ಭಯಂಕರ ವಾದ ಸ್ಥಿತಿಯನ್ನು ಹೊಂದಿತು. ರಾಮನು ಬ್ರಹ್ಮಾಸ್ತ್ರವನ್ನು ಸಂಧಿಸಿದೆ ಡನೆ ಸಮುದ್ರ ಜಲಪ್ರವಾಹವು ತನ್ನ ಎಲ್ಲೆಯನ್ನು ಮೀರಿ ಅತ್ತಲಾಗಿ ಒಂ ದುಯೋಜನದೂರಕ್ಕೆ ಒತ್ತಿಹೋಯಿತು.(ಒಂದು ಯೋಜನದಷ್ಟು ಕೆಳಕ್ಕಿಳಿ ದು ಹೋಯಿತು)ಆಗ ಪರಂತಪನಾದ ರಾಮನಾದರೋ, ಹೀಗೆ ಭಯದಿಂ ದ ಪಲಾಯನಮಾಡುತ್ತಿರುವ ಆ ಸಮುದ್ರನಮೇಲೆ ಮರುಕದಿಂದ, ಮುಂ ದೆ ಬಾಣವನ್ನು ಪ್ರಯೋಗಿಸಲಾರದೆ ನಿಂತಿರಲು, ಇಷ್ಟರಲ್ಲಿ ಉಬ್ಬಿ ಬರು ಯು ಒಂದಕ್ಕೊಂದು ಇದಿರಿದಿರಾಗಿ ಬಂದು ಅಪ್ಪಳಿಸಿ ಆಕಾಶದಿಂದ ಕೆಳಕ್ಕಿಳಿಯುವಾ ಗ ಭಯಂಕರವಾಗಿ ಹುಟ್ಟುವಧ್ವನಿಯೇ ನಿಘರ್ಣತವೆನಿಸುವುದೆಂದು ವರಾಹಮಿಹಿರರು.

  • ಆಶನಿಯಂದರೆ “ಅಶನಿಸ್ಸನೇನ ಮಹತಾ ಯುಕ್ತಾ ಇಗಜಾಶ್ವಪಶುತರು ಮು ಬೇಷು | ನಿಪತತಿ ವಿದಾರಯಂತೀ ಧರಾತಲಂ ಚಕ್ರಸಂಸ್ಥಾನಾ” ಮಹಾಧ್ವನಿಯಿಂದ ಕೂಡಿ, ಚಕ್ರಾಕಾರವಾಗಿ ಮನುಷ್ಯಗಜಾದಿಗಳ ಮುಖದಲ್ಲಿ ಬಿಳುತ್ತ ಭೂಮಿಯನ್ನು

ಭೇದಿಸಿಕೊಂಡು ಹೋಗುವುದು ಅಶನಿಯೆಂದು ವರಾಹಮಿಹಿರರು,