ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೩ ಸರ್ಗ ೨೨.] ಯುದ್ದ ಕಾಂಡವು ತಿದ್ದ ಜಲಪ್ರವಾಹದ ಮಧ್ಯದಿಂದ ಸಮುದ್ರರಾಜನು ಮೇಲಕ್ಕೆದ್ದು, ಮ ಹಾಮೇರುಪರೂತದಿಂದ ಉದಿಸಿಬರುವ ಸೂರಿನಂತೆ ಪ್ರಕಾಶಿಸಿದನು. ಆಗೆ ಸಮುದ್ರನು ನುಣುಪಾದ ವೈಡೂರೈಮಣಿಯಂತೆ ಬಣ್ಣವುಳ್ಳವನಾಗಿಯೂ, ಮೇಲಾದ ಸ್ವರ್ಣಾಭರಣಗಳಿಂದಲಂಕೃತನಾಗಿಯೂ, ಕೆಂಪುಬಟ್ಟೆಯನ್ನೂ ಕೆಂಪಾದ ಪುಷ್ಪಮಾಲಿಕೆಯನ್ನೂ ಧರಸಿದವನಾಗಿಯೂ, ಕಮಲದಳದಂತೆ ಕಣ್ಣುಳ್ಳವನಾಗಿಯೂ ಗೋಚರಿಸಿದನು, ಅವನ ಸುತ್ತಲೂ ಉರಿಯನ್ನು ಕಾರುವ ಮಹಾಸರ್ಪಗಳು ಹೆಡೆಯಾಡುತಿದ್ದುವು ಅವನ ತಲೆಯಲ್ಲಿ ಸಮ ಸ್ವಪಷ್ಟಗಳನ್ನೂ ಸೇರಿಸಿ ಕಟ್ಟಿದ ಪುಷ್ಪಮಾಲಿಕೆಯು ಶೋಭಿಸುತಿತ್ತು. ಸ್ವರ್ಣಾಭರಣಗಳಿಂದಲೂ, ಕುಂದಣದೊಡವೆಗಳಿಂದಲೂ, ರತ್ನ ಖಚಿತಗ ಳಾದ ಇತರಭೂಷಣಗಳಿಂದಲೂ ಅಲಂಕೃತನಾಗಿ ನಿಂತಿದ್ದ ಆ ಸಮುದ್ರ ರಾಜನು, ಅನೇಕಗೈರಿಕಾದಿಧಾತುಗಳಿಂದ ಶೋಭಿತವಾದ ಹಿಮವತ್ಪವ್ವತ ದಂತೆ ತೋರುತಿದ್ದನು ಅವನ ಕಂಠದಲ್ಲಿ ಒಂದೆಳೆಯ ಮುತ್ತಿನ ಹಾರವೂ ಅದರ ನಡುವೆ, ಮಹಾವಿಷ್ಣುವಿನ ಕೌಸ್ತುಭಕ್ಕೆ ಒಡಹುಟ್ಟಿದ ಕೆಂಪುಕಲ್ಲಿನ ಪದಕವೂ ಆತನ ವಿಸ್ತಾರವಾದ ಎದೆಯಲ್ಲಿ ಅತ್ಯಂತಕಾಂತಿವಿಶಿಷ್ಟವಾಗಿ ಹೊಳೆಯುತಿತ್ತು, ಮತ್ತು ಸುತ್ತಿ ಸುತ್ತಿ ಬರುವ ತರಂಗಪರಂಪರೆಗಳಿಂದ ಲೂ, ತನಗೆ ಅನುಚರರಾದ ವಾತಮೇಫುಳಿಂದಲೂ,ಅಲ್ಲಲ್ಲಿ ಬೆದರಿ ಬಿಳುತ್ತಿ ರುವ ಮಹಾಗ್ರಾಹಗಳಿಂದಲೂ, ಭಯದಿಂದ ತತ್ತಳಿಸುವ ಪನ್ನಗರಾಕ್ಷಸಾ ದಿ ದೇವಯೋನಿಗಳಿಂದಲೂ ಕೂಡಿದವನಾಗಿ, (ನಾನಾವಿಧ ಸುಂದರ ರೂ ಪವುಳ್ಳ ಗಂಗೆ ಸಿಂಧು ಮೊದಲಾದ ನದೀದೇವತೆಗಳಿಂದಲೂ ಪರಿವೇಷ್ಟಿತ ನಾಗಿ) ರಾಮನಿಗೆ * ಪ್ರತ್ಯಕ್ಷನಾದನು, ವೀರವಂತನಾದ ಆ ಸಮುದ್ರನು ತಾನಾಗಿಯೇ ರಾಮನ ಹೆಸರನ್ನು ಹಿಡಿದು ಕೂಗಿ ಕರೆಯುತ್ತ, ಮುಂದೆ ಬಂದು, ಧನುರ್ಬಾಣಗಳನ್ನು ಧರಿಸಿ ನಿಂತಿದ್ದ ಆ ರಘುಕುಲೋತ್ತಮನಿಗೆ ಕೈಮುಗಿದು ವಿನಯದಿಂದ ವಿಜ್ಞಾಪಿಸುವನು (ಎಲೆ ಸೌಮ್ಯನೆ' ಪ್ರಪಂ

  • ಸಮುದ್ರನು ತನಗೆ ವಿರೋಧಿಗಳಾದ ದ್ರುಮಕುಲ್ಯವಾಸಿಗಳನ್ನು ಕೊಲ್ಲಿ ಸುವುದಕ್ಕಾಗಿಯೇ, ರಾಮನು ಬ್ರಹ್ಮಾಸ್ತ್ರವನ್ನು ಸಂಧಾನಮಾಡುವವರೆಗೂ ತಾನು ಈಾಣಿಸಿಕೊಳ್ಳದೆ ತಡಮಾಡಿದನೆಂದು ತಿಳಿಯಬೇಕು.
  • 141

- - - - - -