ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೬ ಶ್ರೀಮದ್ರಾಮಾಯಣವು [ಸರ್ಗ, ೨೨, ದು ಹುಟ್ಟಿತು. ಆ ರಂಧ್ರವೇ ಒಂದು ದೊಡ್ಡ ಬಾವಿಯಂತಾಯಿತು ಆ ರಂಥಕ್ಕೆ ವಣಕೂಪವೆಂದೂ ಹೆಸರಾಯಿತು. ಈ ವಣಕೂಪದಿಂದ ನೀರು ಮೇಲಕ್ಕೆ ಹಾರಿ ಎಡೆಬಿಡದೆ ಪ್ರವಹಿಸುತ್ತಿರುವುದರಿಂದ, ಸಮು ಪ್ರಜಲದಂತೆ ಯಾವಾಗಲೂ ಅಶೋಷವಾಗಿ ಕಾಣುತಿರುವುದು ಆ ಸ್ಥಳದಲ್ಲಿ ರಾಮಬಾಣವು ಬಿದ್ದುದರಿಂದುಂಟಾದ ಮಹಾಧ್ವನಿಯೂ ಅತ್ಯಂ ತಭಯಂಕರವಾಯಿತು ದ್ರುಮಕುಲ್ಯವೆಂಬ ಪ್ರದೇಶದಲ್ಲಿ ಮೊದಲು ಶೂ ದ್ರಾದಿಪಾಪಜಾತಿಗಳಿಂದ ಸ್ಪರ್ಶಿಸಲ್ಪಡುತ್ತಿದ್ದ ನೀರೆಲ್ಲವೂ, ರಾಮನು ಬಿಟ್ಟ ಬಾಣದಿಂದ ಕ್ಷಣಮಾತ್ರದಲ್ಲಿ ಶೋಷಿಸಿ ಹೋಗಲು, ಮೂರು ಲೋಕಗಳಲ್ಲಿಯೂ ಆ ಸ್ಥಳವು ಮರುಕಾಂತಾರವೆಂದೇ ಪ್ರಸಿದ್ಧವಾಯಿತು. * ಹೀಗೆ ದಶರಥಪುತ್ರನಾದ ರಾಮನು ಸಮುದ್ರದನಡುವೆ ಇದ್ದ ಮರು ಕಾಂತಾರವನ್ನು ದಹಿಸಿ, ಕೊನೆಗೆ ಪ್ರಸನ್ನ ನಾಗಿ, ಆ ಮರುಕಾಂತಾರಕ್ಕೆ ವ ರವನ್ನು ಕೊಟ್ಟಿರುವನು, ಹೀಗೆ ರಾಮನು ವರವನ್ನು ಕೊಟ್ಟ ಮೇಲೆ, ಆ ಮರುಕಾಂತಾರವು ಪಶುಗಳಿಗೆ ಬೇಕಾದ ಗರಿಕೆ ಮೊದಲಾದುವುಗಳಿಂದ ಸಮೃದ್ಧವಾಗಿಯೂ, ರೋಗನಿವಾರಕವಾಗಿಯೂ, ಬಗೆಬಗೆಯ ಹಣ್ಣುಗ ಳಿಂದಲೂ, ಹೂಗಳಿಂದಲೂ, ಮಧುಪದಾರ್ಥಗಳಿಂದಲೂ ತುಂಬಿದು ದಾಗಿಯೂ, ತುಪ್ಪ, ಹಾಲು, ಸುಗಂಧದ್ರವ್ಯಗಳು, ಬಗೆಬಗೆಯ ಮೂಲಿಕೆ ಗಳು ಮುಂತಾದ ಸಮಸ್ತಭೋಗ್ಯದ್ರವ್ಯಗಳಿಂದಲೂ ಶೋಭಿತವಾಯಿ ತು, ರಾಮನ ವರಪ್ರದಾನದಿಂದ ಅಲ್ಲಿನ ಪ್ರದೇಶವೆಲ್ಲವೂ ಈಗಲೂ ಶುಭ ಕರವಾಗಿಯೇ ಪ್ರಕಾಶಿಸುತ್ತಿರುವುದು, ಆಮೇಲೆ ಸಮುದ್ರನು ರಾಮನನ್ನು ಕುರಿತು, 'ಎಲೆ ಸೌಮ್ಯನೆ ಇದೋ ! ಈ ನಳನೆಂಬವನು ವಿಶ್ವಕರನ ಮಗನು, ಇವನ ತಂದೆಯು ತನ್ನ ಪತ್ನಿಗೆ ನಿನಗೆ ನನ್ನಂತಹ ಕುಮಾರನೇ ಹುಟ್ಟಲಿ”ಎಂದು ವರವನ್ನು ಕೊಟ್ಟು ದರಮೇಲೆ, ಈತನು ವಿಶ್ವಕಮ್ಮನಿಗೆ ಸ

  • ಇಲ್ಲಿ 'ಶೋಷಯಿತ್ಸಾ ತತಃ ಕುಕ್ಷಿಂ .. ವರಂ ತಸ್ಯೆ , ದರ್ದ ವಿದ್ಯಾ ನ ರವೇjಮರವಿಕ್ರಮಃ ಎಂದು ಮೂಲವು ಮನುಷ್ಯ ಸ್ವಭಾವವುಳ್ಳ ರಾಮನಿಗೆ ವರ ದಾನಶಕ್ತಿಯೆಲ್ಲಿ?”ಎಂಬ ಭ್ರಾಂತಿಯನ್ನು ನಿವಾರಿಸುವುದಕ್ಕಾಗಿಯೇ “ಅಮರವಿಕ್ರಮ ನೆಂಬ ವಿಶೇಷಣವು, ಇಲ್ಲಿ ಶೋಷಯಿತ್ತಾ”ಎಂಬುದಕ್ಕೆ “ಮೋಕ್ಷಯಿತ್ತಾ?” ಎಂಬ ಪಾರಾಂತವೂ ಉಂಟು. ಈ ಪಾಠದಲ್ಲಿ “ಶದ್ರಸ್ಪರ್ಶದಿಂದ ಬಿಡಿಸಿ” ಎಂದರವು