ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೨ } ಯುದ್ಧಕಾಂಡವು. ೨೨೩೯ ರು ಮೇಲೆ ಹಾರಿ, ಅಂತರಿಕ್ಷವನ್ನೆಲ್ಲಾ ವ್ಯಾಪಿಸುವಂತಾಯಿತು. ಈ ವಾನರರ ಕಾಠ್ಯಸಂಭ್ರಮದಲ್ಲಿ ಸಮುದ್ರವೆಲ್ಲವೂ ಸುತ್ತಲೂ ಕೈಭಹೊಂದಿತು. ಕೆಲವರು ಕಟ್ಟಿದ ಸೇತುವನ್ನಳೆಯುವುದಕ್ಕಾಗಿ ನೂರುಯೋಜನದುದ್ಧದ ನೂಲನ್ನು ಹಿಡಿದುನಿಂತಿದ್ದರು ನಳನು ಮುಂದಾಳಾಗಿ ನಿಂತು ಸಮುದ್ರದ ನಡುವೆ ಸೇತುವನ್ನು ಕಟ್ಟುತ್ತಬಂದನು ಭಯಂಕರಕಾರವುಳ್ಳ ಇತರವಾನ ರರೂಕೂಡ ಆನಳನನ್ನು ಹಿಂಬಾಲಿಸಿ,ಕಟ್ಟಿದ ಭಾಗವನ್ನು ಸರಿಮಾಡyಬಂ ದರು ಆ ವಾನರರಲ್ಲಿ ಅಳತೆಯ ಕೋಲನ್ನು ಹಿಡಿದುನಿಂತವರು ಕೆಲವರು ಅಲ್ಲಲ್ಲಿ ಕಾರನಿಯಾಮಕರಾಗಿ ಕೈಯಲ್ಲಿ ದಂಡವನ್ನು ಹಿಡಿದು, ವಾನರರನ್ನು ತ್ವರೆಪ ಡಿಸುತಿದ್ದವರು ಕೆಲವರು ' ಮೇಲೆಮೇಲೆ ಕಲ್ಲು ಮಣ್ಣುಗಳನ್ನು ತಂದು ಸೇ ರಿಸುತಿದ್ದವರು ಕೆಲವರು ! ಹಳ್ಳತಿಟ್ಟುಗಳನ್ನು ಪರೀಕ್ಷಿಸಿ ನೋಡುವವರು ಕೆಲವರು ಮೃಗಳ್ಳರಾರೆಂದು ಹುಡುಕಿ ನೋಡುವವರು ಕೆಲವರು ' ಹೀಗೆ ನೂರಾರುಮಂದಿ ವಾನರರು ಗುಂಪುಗುಂಪಾಗಿ ಸೇರಿ, ರಾಮಾಜ್ಞೆಯನ್ನು ಮುಂದಿಟ್ಟುಕೊಂಡು, ಮಹಾಮೇಫುಗಳಂತಿರುವ ಪರತಶಿಖರಗಳನ್ನೂ, ಹುಲ್ಲುಕಡ್ಡಿಗಳನ್ನೂ, ಪಷಿತಗಳಾದ ಗಿಡಗಳನ್ನೂ, ಸೇರಿಸಿ ಸೇತುವನ್ನು ಸರಿಮಾಡುತ್ತ ಬಂದರು, ಕೆಲವರು ಸೇತುವಿನಮೇಲೆ ಕಾಲಿಗೆ ಮೃದುವಾ ಗಿರುವುದಕ್ಕಾಗಿ ಹೂಗಿಡಗಳನ್ನು ತಂದೊಮ್ಮುತಿದ್ದರು ಅಲ್ಲಲ್ಲಿ ಕೆಲವು ವಾ ನರರು ಬೆಟ್ಟದಂತಿರುವ ಕಲ್ಲುಗಳನ್ನೂ, ಪತಶಿಖರಗಳನ್ನೂ ಹೊತ್ತು ಕೊಂಡು ಮಹಾಗಜಗಳಂತೆ ಅತ್ತಿತ್ತ ಓಡಾಡುತಿದ್ದರು ಹೀಗೆ ವಾನರರು, ಕಲ್ಲುಗಳನ್ನೂ, ಪತತಿಖರಗಳನ್ನೂ, ಸಮದ್ರದಲ್ಲಿ ತಂದು ಬಿಸುಡುವಾಗ, ಅದರಿಂದ ಹುಟ್ಟಿದ ಮಹಾಧ್ವನಿಯು ದಿಕ್ಕುಗಳೆಲ್ಲವನ್ನೂ ವ್ಯಾಪಿಸಿತು. ಆ ವಾನರರೆಲ್ಲರೂ ಸೇರಿ ಮೊದಲನೆಯ ದಿನದಲ್ಲಿ ಹದಿನಾಲ್ಕು ಯೋಜ ನಗಳ ಸೇತುವನ್ನು ಮುಗಿಸಿದರು. ಕಾರೊತ್ಸಾಹವುಳ್ಳವರಾಗಿಯೂ, ಆನೆಯಂತೆ ಬಲವುಳ್ಳವರಾಗಿಯೂ, ತ್ವರೆಯಿಂದ ಕೆಲಸಮಾಡತಕ್ಕವರಾ ಗಿಯೂ ಇದ್ದ ಆ ವಾನರರೇ ಎರಡನೆಯದಿನದಲ್ಲಿ ಇಪ್ಪತ್ತು ಯೋಜನೆಗಳ ಸೇತುವೆಯನ್ನು ಕಟ್ಟಿದರು ಮಹಾಕಾಯವುಳ್ಳ ಆ ವಾನರರು ಮೂರನೆಯ ದಿನದಲ್ಲಿ ಮತ್ತಷ್ಟು ತ್ವರೆಯಿಂದ ಕೆಲಸಮಾಡಿ, ಇಪ್ಪತ್ತೊಂದು ಯೋಜನ ಗಳನ್ನು ಮುಗಿಸಿದರು. ನಾಲ್ಕನೆಯದಿನದಲ್ಲಿ ಇನ್ನೂ ತ್ವರೆಯಿಂದ ಇಪ್ಪ