ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೧೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪o ಶ್ರೀಮದ್ರಾಮಾಯಣವು [ಸರ್ಗ ೨೨, ತೆರಡುಯೋಜನಗಳ ದೂರವನ್ನು ಕಟ್ಟಿದರು. ಐದನೆಯದಿನದಲ್ಲಿ ಆ ವಾನ ರರೇ ಮತ್ತಷ್ಟು ತ್ವರೆಯಿಂದ ಕೆಲಸಮಾಡಿ ಸುವೇಲಪತದವರೆಗೆ ಉಳಿ ಡಿದ್ದ ಇಪ್ಪತ್ತುಮರುಯೋಜನಗಳನ್ನೂ ಆದಿನವೇ ಕಟ್ಟಿ ಪೂರೈಸಿಬಿ ಟೈರು, ಶ್ರೀಮಂತನಾಗಿಯೂ, ವಿಶ್ವಕರ್ಮಪುತ್ರನಾಗಿಯೂ, ಬಲಾಡ್ಯ ನಾಗಿಯೂ ಇದ್ದ ನಳನು, ತನ್ನ ತಂದೆಯಂತೆಯೇ ಮಹಾದ್ಭುತವಾದ ಶಿಲ್ಪ ಸಾಮರ್ಥ್ಯದಿಂದ ಸಮುದ್ರದಲ್ಲಿ ಸೇತುವನ್ನು ಕಟ್ಟಿ ಮುಗಿಸಿದನು ಮಹಾಸಮುದ್ರದಲ್ಲಿ ನಳನಿರ್ಮಿತವಾದ ಆ ಸೇತುವು, ಆಕಾಶದಲ್ಲಿ * ಛಾ ಯಾಪಥದಂತೆ ಮಹಾಮಹಿಮೆಯುಳ್ಳದಾಗಿಯೂ, ಕಾಂತಿವಿಶಿಷ್ಟವಾಗಿಯೂ ಶೋಭಿಸುತಿತ್ತು ಆಗ ದೇವಗಂಧರ್ವಸಿದ್ಧವಿದ್ಯಾಧರಾದಿಗಳೂ, ಮಹರ್ಷಿ ಗಳೂ ಆ ಅದ್ಭುತವನ್ನು ನೋಡುವುದಕ್ಕಾಗಿ ಆಕಾಶದಲ್ಲಿ ನೆರೆದರು ದೇವತೆ ಗಳೂ, ಗಂಧರ್ವರೂ, ಅಲ್ಲಿ ಹತ್ತು ಯೋಜನೆಗಳ ವಿಸ್ತಾರಕ್ಕೂ, ನೂರುಯೋ ಜನದುದ್ದಕ್ಕೂ ವ್ಯಾಪಿಸಿ, ಇತರರಿಗೆ ದುಷ್ಟರವಾಗಿ 'ನಲನಿರ್ಮಿತವಾದ ಆ ಸೇತುವನ್ನೆ ಆಶ್ಚರ್ಯಭರಿತರಾಗಿ ನಮ್ಮ ದೃಷ್ಟಿಯಿಂದ ನೋಡುತಿದ್ದರು. ಇತ್ತಲಾಗಿ ವಾನರರೂಕೂಡ ತಾವು ಸೇತುವನ್ನು ಕಟ್ಟಿ ಮುಗಿಸಿದಸಂತೋ ಷದಿಂದ ಮೈಮರೆತು ಆಗಾಗ ಹಾರಿಹಾರಿ ಕುಣಿಯುವರು ' ನೆಗೆಯುವರು ? ಗರ್ಜಿಸುವರು ! ಅದನ್ನೆ ನೋಡಿನೋಡಿ ಹಿಗ್ಗು ವರು ! ಇದಕ್ಕೆ ಮೊದಲು ಮನಸ್ಸಿನಿಂದಲೂ ಚಿಂತಿಸಲಸಾಧ್ಯವಾಗಿಯೂ, ಬೇರೊಬ್ಬರಿಗೆ ಯತ್ನಿ ಸಲಶ

  • ಇಲ್ಲಿ “ಶುಶುಭೇ ಸುಭಗಶ್ಚಿರ್ಮಾ ಸ್ನಾತೀಪದ ಇವಾಂಬರೇ” ಎಂದು ಮೂ ಲವು ಸ್ನಾತೀಪಥವೆಂದರೆ ಛಾಯಾಪಥವು, ಅಥವಾ ಸೂಯ್ಯಾದಿಗಳ ಮಧ್ಯಮಾರ್ಗದ ಲ್ಲಿರುವ ಮಧ್ಯವೀಧಿಯಾದ ಸ್ನಾತೀನೀಧಿಯು, “ಸರಾದೀನಾಂ ತ್ರಯೋ ಮಾರ್ಗಾ ದಕ್ಷಿಣೋತ್ತರಮಧ್ಯಮಾ” ದಕ್ಷಿಣೋತ್ತರಮಧ್ಯಮಗಳೆಂದು ಸೂರಾದಿಗ್ರಹಗಳಿಗೆ ಮೂರು ಸಂಚಾರ ಮಾರ್ಗಗಳುಂಟು, ಅವುಗಳಲ್ಲಿಯೂ ಮಧ್ಯಮಾರ್ಗವೆಂಬುದರಲ್ಲಿ, ಆರ್ಷ, ಮಧ್ಯೆ, ಆಜಗವಿಯೆಂಬ ಮರುವೀಧಿಗಳಿರುವುವು, ಸ್ನಾತೀನಕ್ಷತ್ರಮಾರ್ಗವು ಮಧ್ಯ ವೀಧಿಯಲ್ಲಿ ಸೇರುವುದು, ಈ ವಿವರವು ವಾಯುಪುರಾಣದಲ್ಲಿ 'ತಥಾ ದೈಚಾಪಿ ಫಲುನ್ ಮಖಾಚೈವಾರ್ಷಭೀ ಮತಾ | ಹಸ್ತತ್ರಾ ತಥಾ ಸ್ನಾತೀ ಮಧ್ಯ ವೀಧ್ಯಳಿ ಕೀರ್ತಿತಾ | ಜೈಷ್ಣಾ ವಿಶಾಖಾನೂರಾಧಾ ವೀಧಿರಾಜಗವೇ ಮತಾ ! ಏತಾಸ್ತು ವೀಧ ಯಸಿಸ್ಕೋ ಮಧ್ಯಮೋ ಮಾರ್ಗ ಉಚ್ಯತೇ” ಎಂದು ವಿವರಿಸಲ್ಪಟ್ಟಿದೆ.