ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೨ } ಯುದ್ಧಕಾಂಡವು. ೨೨೪೧ ಕ್ಯವಾಗಿಯೂ, ಮೈಯಲ್ಲಿ ರೋಮಾಂಚವನ್ನು ಹುಟ್ಟಿಸುವಂತೆ ಆಶ್ಚಯ್ಯಕರ ವಾಗಿಯೂ, ಇದ್ದ ಆ ಸೇತುಬಂಧನವನ್ನು ಸಮಸ್ತಭೂತಗಳೂ ಕುತೂಹಲ ದಿಂದ ನೋಡುತಿದ್ದುವು. ಹೀಗೆ ಮಹಾಬಲವುಳ್ಳ ಕೋಟಿಸಹಸ್ರವಾನರರು ಸೇರಿ ಸಮುದ್ರದ ಕೊನೆಯವರೆಗೆ ಸೇತುವನ್ನು ಕಟ್ಟಿ ಮುಗಿಸಿದರು. ಆ ಮ ಹಾಸೇತುವು ಅತ್ಯಂತವಿಶಾಲವಾಗಿಯೂ, ಬಲವಾದ ಕಟ್ಟುಳ್ಳುದಾಗಿಯೂ ಅಂದವಾಗಿಯೂ, ಸಮತಲವಾಗಿಯೂ, ಅಪಾಯರಹಿತವಾಗಿಯೂ ನಿರ್ಮಿ ಸಲ್ಪಟ್ಟುದಲ್ಲದೆ, ಸಮುದ್ರಕ್ಕೆ ಸೀಮಂತರೇಖೆಯಂತೆ ಪ್ರಕಾಶಿಸುತಿತ್ತು. ಆಮೇಲೆ ವಿಭೀಷಣನು ಕೈಯಲ್ಲಿ ಗದೆಯನ್ನು ಹಿಡಿದು, ಆ ಸಮುದ್ರದ ದಕ್ಷಿಣತೀರಕ್ಕೆ ಹೋಗಿ, ತನ್ನ ಮಂತ್ರಿಗಳೊಡನೆ ಅಲ್ಲಿ ಶತ್ರುಗಳನ್ನು ತಡೆ ಯುವುದಕ್ಕಾಗಿ ಕಾವಲಿರುತಿದ್ದನು. ಆಮೇಲೆ ಇತ್ತಲಾಗಿ ಸುಗ್ರೀವನು ಸತ್ಯ ಪರಾಕ್ರಮನಾದ ರಾಮನನ್ನು ಕುರಿತು, ರಾಮಾ ನೀನು ಈ ಹನುಮಂ ತನ ಭುಜವನ್ನೇರು ! ಅಕ್ಷಣವು ಅಂಗದನನ್ನೇರಲಿ ! ಈ ಸಾಗರವು ಬಹಳ ವಿಸ್ತಾರವಾಗಿರುವುದು ಅಷ್ಟು ದೂರದವರೆಗೆ ನೀವಿಬ್ಬರೂ ನಡೆದು ಹೋ ಗುವುದು ಸರಿಯಲ್ಲ ಈ ವಾನರರಿಬ್ಬರೂ ನಿಮ್ಮನ್ನು ಅಂತರಿಕ್ಷಗತಿಯಿಂದ ಲೇ ಅಲ್ಲಿಗೆ ಸಾಗಿಸಿಬಿಡಬಲ್ಲರು,” ಎಂದನು ಆಮೇಲೆ ಧಾತ್ಮನಾದ ಶ್ರೀ ರಾಮನು ಧನುರ್ಧಾರಿಯಾಗಿ, ಲಕ್ಷಣ 'ಸುಗ್ರೀವರೊಡಗೂಡಿ ಆ ಸೇನೆಗೆ ಮುಂದಾಗಿ ಹೊರಟನು, ಕೆಲವು ವಾನರವೀರರು ಸೇನೆಯನಡುವೆ ಹೊರ ಟರು. ಕೆಲವರು ಪಾರ್ಶ್ವಭಾಗದಲ್ಲಿ ನಡೆದು ಬಂದರು, ಕೆಲವರು ನಡೆಯು ವುದಕ್ಕೆ ದಾರಿಯಿಲ್ಲದುದಕ್ಕಾಗಿ ಅಲ್ಲಲ್ಲಿ ನೀರಿಗಿಳಿದು ಜಲಮಾರ್ಗದಿಂದಲೇ ಬರುತಿದ್ದರು ಕೆಲವರು ಅದಕ್ಕೂ ಅವಕಾಶವಿಲ್ಲದೆ ಸ್ವಲ್ಪ ಕಾಲದವರೆಗೆ ಹಿಂದುಳಿದಿದ್ದು, ಆಮೇಲೆ ಪ್ರಯಾಣಮಾಡಿದರು ಕೆಲವರು ಗರುತ್ಯಂತ ರಂತೆ ಅಂತರಿರಿಕ್ಷದಿಂದಲೇ ಹಾರಿಹೋದರು. ಹೀಗೆ ಭಯಂಕರವಾದ ಆ ವಾ ನರಸೈನ್ಯವು, ಸೇತುಮಾರ್ಗವಾಗಿ ಸಮುದ್ರವನ್ನು ದಾಟುತ್ತಿದ್ದಾಗ, ಆ ಸೈ ನ್ಯದಲ್ಲಿ ಹುಟ್ಟಿದ ಕೋಲಾಹಲಧ್ವನಿಯು ಸಮುದ್ರಘೋಷವನ್ನೂ ಮರೆ

  • ಇದರಿಂದ ಸುಗ್ರೀವನ ರಾಮಲಕ್ಷಣರಂತೆಯೇ ಆಕಾಶಗತಿಯಿಂದ ಹೋದು ದಾಗಿ ಗ್ರಾಹ್ಯನ