ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪೨ ಶ್ರೀಮದ್ರಾಮಾಯಣವು [ಸರ್ಗ ೨೩, ಸುವಂತೆ ಅತಿಭಯಂಕರವಾಗಿ ವ್ಯಾಪಿಸಿತು. ಹೀಗೆ ಆ ಸುಗ್ರೀವನಿಗೆ ಸೇರಿ ದ ಕಪಿಸೇನೆಯೆಲ್ಲವೂ ನಳನಿರ್ಮಿತವಾದ ಸೇತುವಿನಿಂದ ಸಮುದ್ರವನ್ನು ದಾಟಿ, ದಕ್ಷಿಣತೀರವನ್ನು ಸೇರಿ, ಅಲ್ಲಿ ಫಲಮೂಲಗಳಿಂದಲೂ ಜಲದಿಂದ ಲೂ ಸಮೃದ್ಧವಾದ ಪ್ರದೇಶಕ್ಕೆ ಬಂದಿಳಿಯಿತು ದೇವತೆಗಳೂ, ಸಿದ್ದರೂ, ಚಾರಣರೂ, ಮಹರ್ಷಿಗಳೂ, ಅತ್ಯಾಶ್ರಕರವಾಗಿಯೂ, ಬೇರೊಬ್ಬರಿಗೆ ಸಾಧಿಸಲಶಕ್ಯವಾಗಿಯೂ ಇದ್ದ ಆ ರಾಮನ ಕಾವ್ಯವನ್ನು ನೋಡಿ, ಸಂ ತೋಷದಿಂದ ಬೇಗನೆ ರಾಮನ ಬಳಿಗೆ ಬಂದು, ಮಂಗಳತೀರ್ಥಗಳಿಂದ ಆತ ನನ್ನು ಪ್ರೋಕ್ಷಿಸಿದರು ಮತ್ತು ಅವರೆಲ್ಲರೂ ರಾಮನನ್ನು ಕುರಿತು ಎಲೆ ರಾಜೇಂದ್ರನೆ! ನಿನಗೆ ಜಯವಾಗಲಿ' ನಿನ್ನ ಸಮಸ್ತಶತ್ರುಗಳನ್ನೂ ಜಯಿಸಿ, ಸಮುದ್ರಮೇಖಲೆಯಾದ ಸಮಸ್ತಭೂಮಿಯನ್ನೂ ಬಹುಕಾಲದವರೆಗೆ ಸುಖದಿಂದ ಪಾಲಿಸು!” ಎಂದು ನಾನಾವಿಧಗಳಾದ ಶುಭವಾಕ್ಯಗಳಿಂದ ಅವನನ್ನು ಮನ್ನಿಸಿ ಪೂಜಿಸಿದರು, ಇಲ್ಲಿಗೆ ಇಪ್ಪತ್ತೆರಡನೆಯ ಸರ್ಗವು. (ಶ್ರೀರಾಮನು ಯುದ್ಧ ಸೂಚಕಗಳಾದ ಮಹೋತ್ಸಾ) w+ ತಗಳನ್ನು ಕಂಡು ಅವುಗಳನ್ನು ಲಕ್ಷ ಹನಿಗೆ ತೋರಿ » ಸಿದುದು * ನಿಮಿತ್ತಶಾಸ್ತ್ರವನ್ನು ಚೆನ್ನಾಗಿ ಬಲ್ಲವನಾದ ಶ್ರೀರಾಮನು,ಆ ಸಮು ದ್ರತೀರದಲ್ಲಿ ಕೆಲವುಶಕುನಗಳನ್ನು ನೋಡಿ, ತಾನು ಬಹುಕಾಲದಿಂದ ಕೋರುತಿದ್ದ ಯುದ್ಧವು ಸಮೀಪಿಸಿತೆಂಬ ಸಂತೋಷದಿಂದ ಲಕ್ಷಣವನ್ನು ಆಲಿಂಗಿಸಿಕೊಂಡು, ಅವನೊಡನೆ ಹೇಳುವನು (ವತ್ಸ ಲಕ್ಷಣಾ ? ಈಗ

  • ಇಲ್ಲಿ ನಿಮಿತ್ತಾನಿ ನಿಮಿತ್ತ ಜ್ಞ” ಎಂದು ಮೂಲವು 'ನಿಮಿತ್ತಾ ನೈವ ಶಂಸ೦ತಿ ಶುಭಾಶುಭಫಲೋದಯಂ | ತಸ್ಮಾ ದೇತಾನಿ ಶಾಸ್ತ್ರಜ್ಯೋ ರಾಜಾ ಸಮು ಪಲಕ್ಷಯೇತ” ಎಂದು ನಿಮಿತ್ತಗಳು ಮುಂದೆ ಬರಬಹುದಾದ ಶುಭಾಶುಭಫಲಗ ಳನ್ನು ಸೂಚಿಸುವುದರಿಂದ, ರಾಜನು ಅವುಗಳನ್ನು ಅವಶ್ಯವಾಗಿ ನೋಡಿ ತಿಳಿಯಬೇ ಕಂದು ರಾಜನೀತಿಯು ಆ ರಾಜನೀತಿಯನ್ನನುಸರಿಸಿ ಇಲ್ಲಿ ರಾಮನೂ ನಿಮಿತ್ತಗಳನ್ನು ನೋಡಿದನೆಂದು ಗ್ರಾಹ್ಯವು.