ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ಗ, ೨೩ ] ಯುದ್ಧಕಾಂಡವು ೨೨೪೩ ನಾವು ಶೀತಲಜಲದಿಂದಲೂ, ಉತ್ತಮಫಲಗಳಿಂದಲೂ ತುಂಬಿದ ಪ್ರದೇಶ ದಲ್ಲಿ ನಮ್ಮ ಸೈನ್ಯವನ್ನಿಳಿಸಿ, ಈಗಲೇ ಆಸೈನ್ಯಗಳನ್ನು ಬೇರೆಬೇರೆಯಾಗಿಯೂ ವಿಭಾಗಿಸಿ,ಗರುಡವ್ಯೂಹವನ್ನಾಗಿ ನಿಲ್ಲಿಸಿಡುವುದು ಮೇಲು 'ಅದೋ ನೋಡು! ಕ್ಷುದ್ರ ಜನಗಳಿಗೆ ನಾಶಸೂಚಕಗಳಾಗಿಯೂ, ಭಯಂಕರವಾಗಿಯೂ, ಇ ರುವ ಯುದ್ಧವು ಸಮೀಪಿಸಿದಂತೆ ತೋರುವುದು ಇದರಿಂದ ಕವಿಗಳಲ್ಲಿಯೂ ಕರಡಿಗಳಲ್ಲಿಯೂ, ರಾಕ್ಷಸರಲ್ಲಿಯೂ, ಪ್ರಮುಖರಾದ ವೀರರಿಗೆ ವಿಶೇಷವಾ ಗಿ ನಾಶವುಂಟಾಗುವಂತೆಯೂ ನನಗೆ ತೋರುತ್ತಿರುವುದು ವಾಯುವು ಕಲು ಷವಾಗಿ ಬೀಸುತ್ತಿರುವುದು * ಭೂಮಿಯು ನಡುಗುವುದು ಪಕ್ವತಾಗ್ರಗ ಇು ಅದಿರುತ್ತಿರುವುವು ಮರಗಳು ಇದ್ದಕ್ಕಿದ್ದಹಾಗೆ ಮುರಿದು ಬೀಳುವು ವು ಅದೋ ' ಆಕಾಶದಲ್ಲಿ ಮೇಫುಗಳು, ತೋಳಗಳಂತೆ ಬಣ್ಣವುಳ್ಳವುಗಳಾ ಗಿ, ಭಯಂಕರಸ್ವರೂಪದಿಂದ ಕಾಣಿಸಿ, ಕೋರಸ್ವರದಿಂದ ಮೊಳಗುತ್ತಿರು ವುವು + ಮತ್ತು ಆ ಮೇಘಗಳು ರಕ್ತಬಿಂದುಗಳೊಡನೆ ಮಿಶ್ರವಾದ ಜಲ ವನ್ನು ವರ್ತಿಸುತ್ತಿರುವುವು ರಕ್ತಚಂದನದಂತಿರುವ ಮಫುದೊಡನೆ ಸೇರಿ ಸಂಧ್ಯಾಕಾಲವು ಅತ್ಯಂತಭಯಂಕರವಾಗಿರುವುದು ಜ್ವಲಿಸುತ್ತಿರುವ ಸತ್ಯಬಿಂದದಿಂದ ಅಗ್ನಿ ಪಿಂಡಗಳು ಉಬರುವುವು ನೋಡು ' ಮೃಗಪಕ್ಷ ಗಳೆಲ್ಲವೂ ಕರಸ್ವರದಿಂದ ಕೂಗುತ್ತಿರುವುವು ಇವೆಲ್ಲವೂ ನೋಡುವಾಗಲೇ ಮಹಾಭಯವನ್ನು ಹುಟ್ಟಿಸುತ್ತಿರುವುವು, ೯ ರಾತ್ರಿಯಲ್ಲಿ ಚಂದ್ರನು ಕಾಂತಿ - -----

  • ಸಂಧ್ಯಾಕಾಲದ ಭೂಕಂಪವು ರಾಜರಿಗೆ ಮಹಾಸಿಸೂಚಕವೆಂದು ನಿಮಿತ್ತ ಶಾಸ್ತ್ರವು ಈ ವಿಷಯದಲ್ಲಿ ಯಾಮತಯಾಚ್ ಭೂಕಂಪೋ ದ್ವಿಜಾತೀನಾಮರಿಷ್ಯ ದಃ | ಅರಿಷ್ಟದ ಕ್ಷಿತೀಶಾನಾಂ ಸಂಧ್ಯಯೋರುಭಯೋರಪಿ”ಎಂದು ವಸಿಷವಚನವು

↑ ದಿಮ್ಮಲ್ಕಾ ಪತನಂಚೈವ ದಿವಾ ನಕ್ಷತ್ರದರನಂ | ದಿವಾನಿಸ ಥಾಕಾಮತೃಷ್ಣ ರಕ್ತ ಪ್ರವರ ಸಂ” ಎಂದು ರಕ್ತವರ್ಷವು ಸುರಿಯುವುದು ಬಹಳ ದೊಡ್ಡದುರ್ನಿ ಮಿತ್ರವೆಂದು ಮಿಹಿರವಚನವು,

  1. ಚಂದ್ರಕಿರಣವು ಸಂತಾಪಕರವಾಗಿದ್ದರೆ ಮಹೋತ್ಸಾತಸೂಚಕವೆಂದು ನಿಮಿ ತ್ರ ಶಾಸ್ತ್ರವು,