ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೪೬ ಶ್ರೀಮದ್ರಾಮಾಯಣವು (ಸರ್ಗ: ೨೪. ಳಿದಾಗ, ಅದರ ಪೀಡೆಯಿಂದ ಭಯಪಟ್ಟಂತೆ ಭೂಮಿಯು ನಡುಗಿತು ಈ ವಾನರಸೈನ್ಯವು ಅಲ್ಲಿಗೆ ಬಂದಿಳಿದಾಗಲೇ ಲಂಕೆಯೊಳಗಣ ರಾಕ್ಷಸಸೈನಿ ಕರ ಆಕ್ರೋಶವೂ, ಭೇರೀಮೃದಂಗಾದಿ ವಾದ್ಯಧ್ವನಿಗಳ ಗದ್ದಲವೂ ಈ ವಾನರರ ಕಿವಿಗೆ ಕೇಳಿಸಿತು, ಆ ಅಟ್ಟಹಾಸವನ್ನು ಕೇಳಿದಾಗ ಒಬ್ಬೊ ಬೃ ವಾನರರಿಗೂ ಕೋಪದಿಂದ ಮೈಯಲ್ಲಿ ರೋಮಾಂಚವು ಹುಟ್ಟಿತು ಆ ರಾಕ್ಷಸರ ವೀರವಾದವನ್ನು ಕೇಳುತ್ತಿದ್ದ ಸ್ಕೂ, ಇವರಿಗೆ ಮೇಲೆಮೇಲೆ ಸಂ ತೋಷವೂ ಉಕ್ಕಿಬರುತಿತ್ತು. ಆ ರಾಕ್ಷಸರ ಅಟ್ಟಹಾಸವನ್ನು ಕೇಳಿ ಸಹಿಸ ಲಾರದೆ ಒಬ್ಬೊಬ್ಬರೂ ಅದಕ್ಕಿಂತಲೂ ಮೇಲೆ ಉಚ್ಛಧ್ವನಿಯಿಂದ ಸಿಂಹ ನಾದವನ್ನು ಮಾಡುತಿದ್ದರು ಆಕಾಶದಲ್ಲಿ ಮೇಫುಗಳು ಗುಡುಗಿದಂತೆ ವಾನರರು ದರ್ಪದಿಂದ ಮಾಡಿದ ಗರ್ಜನೆಗಳನ್ನು ಲಂಕೆಯಲ್ಲಿದ್ದ ರಾಕ್ಷ ಸರೂ ಕೇಳಿದರು ಅಲ್ಲಿ ರಾಮನು ವಿಚಿತ್ರಗಳಾದ ಧ್ವಜಗಳಿಂದಲೂ, ಪತಾಕೆಗಳಿಂದಲೂ ಶೋಭಿತವಾದ ಲಂಕಾನಗರಿಯನ್ನು ದೂರದಿಂದಲೇ ನೋಡಿದನು ಆಗಲೇ ಅವನಿಗೆ ಸೀತೆಯ ಸ್ಮರಣವುಂಟಾಯಿತು ಅವನ ಮನಸ್ಸಿನಲ್ಲಿ ವ್ಯಸನವೂ ಹುಟ್ಟಿತು ಹೀಗೆ ದುಃಖಿತನಾದ ರಾಮನು ತನ್ನ ಕ್ಲಿ ತಾನು, (ಹಾ! ನಮ್ಮ ಸಾಕೇತನಗರದಲ್ಲಿ ಸಮಸ್ತರಾಜಭೋಗಗ ಇನ್ನೂ ಅನುಭವಿಸುತ್ತಿರಬೇಕಾದ ವ ಹರಿಣಾಕ್ಷಿಯು, ಈಗ ಈ ಲಂಕೆ ಯಲ್ಲಿ ಅಂಗಾರಕನಿಂದ ಭಂಗಹೊಂದಿದ ರೋಹಿಣಿಯಂತೆ ದುಷ್ಟನಾದ ರಾವಣನ ಕೈಯಲ್ಲಿ ಸೆರೆಸಿಕ್ಕಿರುವಳಲ್ಲಾ !” ಎಂದು ಮಹಾವ್ಯಸನದಿಂದ ಬಿಸಿಬಿಸಿಯಾಗಿ ನಿಟ್ಟುಸಿರನ್ನು ಬಿಟ್ಟನು ರಾಮನಿಗೆ ಮನಸ್ಸಿನಲ್ಲಿ ಇಷ್ಟು ವ್ಯಸನವಿದ್ದರೂ, ಶತ್ರುಜಯಕ್ಕಾಗಿ ಹೊರಡುವಾಗ ದುಃಖದಿಂದ ಉತ್ಸಾಹಭಂಗವನ್ನು ತೋರಿಸಬಾರದೆಂದು, ಆ ವ್ಯಸನವನ್ನು ತನ್ನಲ್ಲಿಯೇ ಅಡಗಿಸಿಟ್ಟುಕೊಂಡು, ಕಾಲೋಚಿತವಾಕ್ಯದಿಂದ ಸಮೀಪದಲ್ಲಿದ್ದ ಲಕ್ಷ ಣನನ್ನು ನೋಡಿ “ಲಕ್ಷಣಾ' ಆಕಾಶವನ್ನು ಭೇದಿಸುವಂತೆ ಮಹೋನ್ನ ತವಾಗಿ ಕಾಣಿಸುತ್ತಿರುವ ಲಂಕಾನಗರಿಯನ್ನು ನೋಡಿದೆಯಾ? ವಿಶ್ವಕರ್ಮ ನು ಆ ತ್ರಿಕೂಟಪಕ್ವತದ ಶಿಖರದಮೇಲೆ ತನ್ನ ಸಂಕಲ್ಪದಿಂದಲೇ ನಿರ್ಮಿ ಸಿಟ್ಟಂತೆ ಕಾಣುವುದು ನೋಡು' ಬಿಳುಪಾದ ಅನೇಕಸೌಧಗಳಿಂದ ತುಂಬಿ