ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫೦ ಶ್ರೀಮದ್ರಾಮಾಯಣವು [ಸರ್ಗ ೨೪. ಇವೆರಡರಲ್ಲಿ ಯಾವುದಾದರೂ ಒಂದು ಕೆಲಸವನ್ನು ಶೀಘ್ರದಲ್ಲಿಯೇ ನಡೆ ಸಬೇಕು ಈಗಮಾತ್ರ ಕಾಲವಿಳಂಬವನ್ನು ಮಾಡಬಾರದು” ಎಂದನು ಶುಕನು ಹೇಳಿದ ಈ ಮಾತನ್ನು ಕೇಳಿದೊಡನೆ ರಾವಣನಿಗೆ ಮಿತಿಮೀರಿದ ಕೋಪವುಂಟಾಯಿತು ಅವನ ಕಣ್ಣುಗಳೆಲ್ಲವೂ ಕೆಂಡದಂತೆ ಕೆಂಪಾದುವು. ಆ ಶುಕನನ್ನು ತನ್ನ ದೃಷ್ಟಿಯಿಂದಲೇ ಸುಟ್ಟುಬಿಡುವಂತೆ ನೋಡುತ್ತ, «ಶುಕಾ' ನೀನೇನು ಹೇಳಿದೆ? ಸೀತೆಯನ್ನು ರಾಮನಿಗೊಪ್ಪಿಸುವುದೇ? ದೇವ ಗಂಧರ್ವದಾನವರೆಲ್ಲರೂ ಒಟ್ಟಾಗಿ ಸೇರಿ ನನ್ನೊಡನೆ ಯುದ್ಧಕ್ಕೆ ಬಂದರೂ, ನಾನು ಸೀತೆಯನ್ನೊಪ್ಪಿಸುವವನಲ್ಲ! ಬೇವಜಾತಿಯೇ ಅಲ್ಲದೆ, ಈ ಚತು ರ್ದಶಭುವನಗಳೂ ಒಂದಾಗಿ ಸೇರಿ ಬಂದು ನನ್ನನ್ನು ಹೆದರಿಸಿದರೂ ನಾನು ಸೀತೆಯನ್ನು ಕೊಡುವವನಲ್ಲ ' ವಸಂತಋತುವಿನಲ್ಲಿ ಪುಷ್ಟಿಸಿದ ಗಿಡಗಳ ಮೇಲೆ ಮದಿಸಿದ ದುಂಬಿಗಳು ಬಂದು ಬಿಳುವಂತೆ ನನ್ನ ಬಾಣಗಳು ಯಾವಾಗ ರಾಮನಮಲೆ ಬಿಳುವುವೆಂದೇ ನಾನು ಇದಿರುನೋಡುತ್ತಿರು ವೆನು ಬಹುಕಾಲದಿಂದ ಯುದ್ಧವಿಲ್ಲದೆ ಬತ್ತಳಿಕೆಯಲ್ಲಿ ಶಾಂತವಾಗಿ ಮ ಲಗಿರುವ ಜಾಜ್ವಲ್ಯಮಾನಗಳಾದ ನನ್ನ ಬಾಣಗಳು, ನನ್ನ ಬಿಲ್ಲಿನಿಂದ ತಂ ಡತಂಡವಾಗಿ ಹೊರಟು, ಕೊಳ್ಳಿಗಳಿಂದ ಕಾಡಾನೆಗಳನ್ನು ಓಡಿಸುವಂತೆ ಯಾವಾಗ ಆ ರಾಮನನ್ನು ಓಡಿಸುವೆವೆಂದೇ ನಿರೀಕ್ಷಿಸುತ್ತಿರುವುವು ಎಲೆ ಚಾರನೆ ? ಆ ರಾಮನು ವಿರಾಧಾದಿರಾಕ್ಷಸರನ್ನು ಕೊಂದವನೆಂದು ಅವ ನ ಬಲವನ್ನು ಹೇಳಿವೆಯಲ್ಲವೆ? ಆದರೇನು? ಸೂರನು ಉದಿಸಿಬರುವಾಗಲೇ ಇತರಗ್ರಹಗಳ ಕಾಂತಿಯನ್ನಡಗಿಸುವಂತೆ, ನಾನು ದೊಡ್ಡ ಸೇನೆಯೊಡನೆ ಹೋಗಿ ನಿಂತಾಗಲೇ,ಅವನ ಶಕ್ತಿಯು ನಿಶೇಷವಾಗಿ ಅಡಗಿ ಹೋಗುವುದೆಂ ದುತಿಳಿ' ನನಗೆ ಸಮುದ್ರದಂತೆ ವೇಗವೂ, ವಾಯುವಿನಂತೆ ಗತಿಯೂ ಇರು ವುದೆಂದು ಇನ್ನೂ ಆ ರಾಮನಿಗೆ ತಿಳಿದಿಲ್ಲವೆಂದು ತೋರುತ್ತಿದೆ ಅದಕ್ಕಾ ಗಿಯೇ ಅವನು ನನ್ನೊಡನೆ ಯುದ್ಧಕ್ಕೆ ಪ್ರಯತ್ನಿ ಸುತಿರುವನು, ವಿಷಸ ರ್ಪಗಳಂತೆ ನನ್ನ ಬತ್ತಳಿಕೆಯಲ್ಲಿ ಮಲಗಿರುವ ನನ್ನ ಬಾಣಗಳ ರೀತಿಯನ್ನು ಆ ರಾಮನು ಹಿಂದೆ ಯಾವಾಗಲೂ ಕಂಡವನಲ್ಲ ಆದರಿಂದಲೇ ನನ್ನೊಡ ನೆ ಯುದ್ಧವನ್ನ ಪೇಕ್ಷಿಸಿ ಬರುತ್ತಿರುವನು. ಆ ರಾಮನು ಇದುವರೆಗೆ ಯು ದ್ಯದಲ್ಲಿ ನನ್ನ ವೀರವನ್ನೂ ಕಂಡವನಲ್ಲ. ಶುಕಾ ! ಇನ್ನು ಹೆಚ್ಚು ಮಾತಿನಿಂ