ಸರ್ಗ: ೨೫.] ಯುದ್ಧಕಾಂಡವು. ೨೨೫೧ ದೇನು? ಇದೋ ಈ ನನ್ನ ಬಿಲ್ಲೇ ವೀಣೆಯು ಬಾಣಗಳೆಂಬ ತಾಡನದಂಡಗ ಳಿಂದ ಅದನ್ನು ನುಡಿಸುವೆನು ನೋಡು ! ಅದರಲ್ಲಿ ಹುಟ್ಟುವ ಧನುಷ್ಯ೦ಕಾ ರ ಧ್ವನಿಯೂ, ಯುದ್ದದಲ್ಲಿ ನನ್ನ ಬಾಣದಿಂದ ನೊಂದು ಕೊಗಿಡುವವರ ರೋದನಧ್ವನಿಯೂ, ಬಾಣಗಳನ್ನು ತಟ್ಟುವ ಧ್ವನಿಯೂ, ಮಂದ್ರ, ಮ ಧ್ಯಮ, ತಾರಗಳೆಂಬ ಮೂರು ಸ್ವರಗಳೆಂದು ತಿಳಿ ! ಇಂತಹ ವೀಣಾಧ್ವನಿ ಯೊಡನೆ ನಾನು ಯುದ್ಧರಂಗವೆಂಬ ರಂಗಸ್ಥಳವನ್ನು ಪ್ರವೇಶಿಸಿ ನಡೆಸು ವ ಚಮತ್ಕಾರವನ್ನಾದರೂ ನೋಡು' ಎಲೆ ಚಾರನೆ' ಈಗ ಮುಂದೆ ಬರು ವ ಯುದ್ಧವು ನನಗೊಂದು ವಿನೋದವೇ ಹೊರತು ಬೇರೆಯಲ್ಲ ' ಸಾವಿರಕ ಇುಳ್ಳ ದೇವೇಂದ್ರನಿಂದಾಗಲಿ, ವರುಣನಿಂದಾಗಲಿ, ಯಮನಿಂದಾಗಲಿ, ಕುಬೇರನಿಂದಾಗಲಿ, ಯದ್ಯದಲ್ಲಿ ನನ್ನನ್ನು ಎಷ್ಮೆ ಕೂರ ಬಾಣಗಳಿಂದಾ ದರೂ ತಡೆ ಯುವುದು ಸಾಧ್ಯವಲ್ಲ” ಎಂದನು ಇಲ್ಲಿಗೆ ಇಪ್ಪತ್ತು ನಾಲ್ಕನೆ ಯ ಸರ್ಗವು ತಿರುಗಿ ರಾವಣನು ಶುಕಸಾರಣರೆಂಬ ಚಾರರಿಬ್ಬರ | ನ್ನು ಕಳುಹಿಸಿದುದು, ವಿಭೀಷಣನು ಅವರನ್ನು ಹಿ ಡಿದು ರಾಮನಿಗೊಪ್ಪಿಸಿದುದು, ರಾಮನು ಅವರಲ್ಲಿ ಕ ರುಣೆಯಿಂದ ಅವರಿಗೆ ವಾನರ ಸೈನ್ಯವೆಲ್ಲವನ್ನೂ ತೋ ರಿಸಿ ಅವರನ್ನು ಬಿಡಿಸಿ ಕಳುಹಿಸಿದುದು ಅವರು ತಾವು ಹೋಗಿಬಂದ ವೃತ್ತಾಂತವನ್ನು ರಾವಣನಿಗೆ ತಿಳಿಸಿದುದು ದಶರಥಪತ್ರನಾದ ರಾಮನು ವಾನರಸೈನ್ಯದೊಡನೆ ಸಮುದ್ರ ವನ್ನೂ ದಾಟಿಬಂದನೆಂಬ ಸುದ್ದಿಯನ್ನು ಕೇಳಿ ರಾವಣನು, ತನ್ನ ಮಂ ತ್ರಿಗಳಾದ ಶುಕಸಾರಣರಿಬ್ಬರನ್ನೂ ನೋಡಿ ('ಎಲೈ ಮಂತ್ರಿಗಳೆ ” ವಾ ನರಸೈನ್ಯವೆಲ್ಲವೂ ದುಸ್ತರವಾದ ಆ ಸಮುದ್ರವನ್ನು ದಾಟಿ ಬಂದು ಬಿಟ್ಟಿರುವುದು, ಸಮುದ್ರದಲ್ಲಿ ಸೇತುಬಂಧನವೆಂಬುದನ್ನು ನಾವು ಹಿಂದೆ ಯಾವಾಗಲೂ ಕಂಡುಕೇಳಿದುದೇ ಇಲ್ಲ ರಾಮನು ಸಮುದ್ರದಲ್ಲಿಯೂ ಸೇತುವನ್ನು ಕಟ್ಟಿರುವನಂತೆ! ಆದರೆ ಇನ್ನೂ ನನಗೆ ಆ ವಿಷಯದಲ್ಲಿ ನಂಬಿಕೆ ಯು ಹುಟ್ಟಿಲ್ಲ ಮಹಾಸಮುದ್ರವೆಂದರೇನು? ಸೇತುವನ್ನು ಕಟ್ಟುವುದೆಂ
ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೧೪
ಗೋಚರ