ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫೩ ಸರ್ಗ, ೨೫.] ಯುದ್ದ ಕಾಂಡವು. ವರು ! ಮೊದಲೇ ಬಂದಿಳಿದಿದ್ದವರು ಕೆಲವರು ! ಆಗಾಗ ಇಳಿಯುತಿದ್ದವ ರು ಕೆಲವರು ! ಹೀಗೆ ಆ ವಾನರಸೈನ್ಯವು ನಾನಾದಿಕ್ಕುಗಳಿಂದಲೂ, ನಾ ನಾರೀತಿಯಿಂದ ಬಂದು ಸೇರುತ್ಯ, ಆಗಾಗ ಅತಿಭಯಂಕರವಾದ ಸಿಂಹನಾ ದವನ್ನೂ ಮಾಡುತಿತ್ತು, ಮಹಾಬಲಸಂಪನ್ನ ವಾಗಿಯೂ, ಆಕ್ಷೇಭ್ಯ ವಾಗಿಯೂ ಇದ್ದ ಆ ವಾನರಸೈನ್ಯವು ಬೇರೊಂದು ಸಮುದ್ರವೋ ಎಂಬಂತೆ ಈ ರಾಕ್ಷಸರಿಗೆ ಕಾಣಿಸಿತು. ಇಷ್ಟರಲ್ಲಿ ಈ ರಾಕ್ಷಸರಿಬ್ಬರೂ ವೇಷ ಧಾರಿಗಳಾಗಿ ಬಂದಿರುವರೆಂಬ ಸಂಗತಿಯು ವಿಭೀಷಣನಿಗೆ ತಿಳಿದುಹೋ ಯಿತು. ಆಗಲೇ ವಿಭೀಷಣನು ಆ ಶುಕಸಾರಣರಿಬ್ಬರನ್ನೂ ಹಿಡಿದು ತಂದು ರಾಮನ ಮುಂದೆ ನಿಲ್ಲಿಸಿ 1 (ರಾಮಾ ! ಇದೊ ನೋಡು ! ಇವರಿಬ್ಬರೂ ರಾಕ್ಷಸೇಶ್ವರನಾದ ಆ ರಾವಣನ ಮಂತ್ರಿಗಳು ಇವರಿಗೆ ಶುಕಸಾರಣರೆಂ ದು ಹೆಸರು. ಇವರಿಬ್ಬರೂ ನಮ್ಮ ರಹಸ್ಯವನ್ನು ತಿಳಿದುಕೊಂಡುಹೋ ಗುವುದಕ್ಕಾಗಿ ಕಪಿವೇಷದಿಂದ ಗೂಢಚಾರರಾಗಿ ಬಂದಿರುವರು ” ಎಂದನು ಇದನ್ನು ಕೇಳಿದೊಡನೆ, ಶುಕಸಾರಣರಿಬ್ಬರೂ ತಮ್ಮ ಪ್ರಾಣದಮೇಲೆ ಆಸೆಯನ್ನು ಬಿಟ್ಟು, ಭಯದಿಂದ ನಡುಗುತ್ತಾ, ರಾಮನ ಮುಂದೆ ಕೈಮುಗಿ ದು ನಿಂತು ಎಲೆ ಸೌಮ್ಯನೆ ! ನಾವಿಬ್ಬರೂ ರಾವಣಾಜ್ಞೆಯಿಂದ ನಿನ್ನ ಸೈನ್ಯದ ಪರಿಮಾಣವೆಷ್ಟೆಂದು ತಿಳಿದುಕೊಂಡು ಹೋಗುವುದಕ್ಕಾಗಿ ಗೂಢ ಚಾರರಾಗಿ ಇಲ್ಲಿಗೆ ಬಂದೆವು ಇದು ನಿಜವು” ಎಂದನು ರಾಮನು ಮಹಾತ್ಮ ನಾಗಿಯೂ, ಸಭೂತಹಿತಪರನಾಗಿಯೂ, ಕೃಪೆಯೇ ಸಹಜಸ್ವಭಾವ ವುಳ್ಳವನಾಗಿಯೂ ಇದ್ದುದರಿಂದ, ಶತ್ರುಗಳಾಗಿ ಬಂದ ರಾಕ್ಷಸರಲ್ಲಿಯೂ, ವಾತ್ಸಲ್ಯವನ್ನು ತೋರಿಸುತ್ತ, ಅವರ ಮಾತನ್ನು ಅಕ್ಕರೆಯಿಂದ ಕೇಳಿ, ರಾವಣನ ಮಂದಬುದ್ಧಿಯನ್ನು ಕುರಿತು ನಸುನಗತ್ಯ, ಅವರನ್ನು ಕುರಿತು 'ಎಲೆ ರಾಕ್ಷಸರೆ ! ಹೆದರಬೇಡಿರಿ ' ನೀವು ನಿಮ್ಮ ಪ್ರಭುವಿನ ಆಜ್ಞೆ ಯಂತೆ, ಈ ನಮ್ಮ ಸೈನ್ಯವೆಲ್ಲವನ್ನೂ ಚೆನ್ನಾಗಿ ನೋಡಿ, ನಮ್ಮನ್ನೂ ಪರೀ ಕ್ಷಿಸಿ, ನಿಮ್ಮ ಕಾರವೆಲ್ಲವನ್ನೂ ಪೂರ್ಣವಾಗಿ ಮುಗಿಸಿಕೊಂಡಿದ್ದ ಪಕ್ಷ ದಲ್ಲಿ, ಈಗಲೂ ನೀವು ಯಥೇಚ್ಛವಾಗಿ ನಿಮ್ಮ ಪಟ್ಟಣಕ್ಕೆ ತಿರುಗಿ ಹೋಗ ಬಹುದು, ಹಾಗಿಲ್ಲದೆ ಇಲ್ಲಿ ನಿಮಗೆ ತಿಳಿಯಬೇಕಾದ ಅಂಶವೇನಾದರೂ ಈ