ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫೩ ಶ್ರೀಮದ್ರಾಮಾಯಣವು (ಸರ್ಗ, ೨೬, ಯೋಜನಗಳ ವಿಸ್ತಾರಕ್ಕೂ, ನೂರುಯೋಜನಗಳ ಉದ್ದಕ್ಕೂ ಅವರು ಮ ಹಾ ಸಮುದ್ರದಲ್ಲಿಯೇ ಸೇತುವನ್ನು ಕಟ್ಟಿಬಿಟ್ಟಿರುವರು. ಆ ಸೇತುವಿನ ಮಾ ರ್ಗವಾಗಿಯೇ ವಾನರಸೇನೆಯೆಲ್ಲವೂ ಸಮುದ್ರವನ್ನು ದಾಟಿಯೂ ಬಂದು ಬಿಟ್ಟಿತು. ರಾಮನು ಆ ಸೇನೆಯನ್ನು ತಂದು ದಕ್ಷಿಣತೀರದಲ್ಲಿರಿಸಿರುವನು ಸೈನ್ಯಗಳಲ್ಲಿ ಕೆಲವು ದಾಟಿ ಬಂದಿರುವುವು ' ಈಗಲೂ ಕೆಲವು ದಾಟುತ್ತಿರು ವುವು! ಆ ಸೈನ್ಯಕ್ಕೆ ಕೊನೆಯಾವುದೆಂದೇ ತಿಳಿಯಲಿಲ್ಲ. ಆ ವಾನರಸೈನ್ಯದ ಕ್ಲಿ ಒಬ್ಬೊಬ್ಬರೂ ಯುದ್ಧೋತ್ಸಾಹದಿಂದಲೇ ನಿಂತಿರುವರು!ಒಬ್ಬೊಬ್ಬರೂ ದೃಢವಾದ ಸಂಕಲ್ಪವನ್ನೇ ಹಿಡಿದು ಬಂದಿರುವರು. ಒಬ್ಬೊಬ್ಬರೂ ಹ ರ್ಷದಿಂದ ಉಬ್ಬುತ್ತಿರುವರು. ಆದುದರಿಂದ ಎಲೈ ಮಹಾರಾಜನೆ! ಅವರೆ ಡನೆ ನಿನಗೆ ಇನ್ನು ಮೇಲೆ ವಿರೋಧವು ಸಾಕು ! ಕೋಪವನ್ನು ಬಿಟ್ಟುಬಿಡು! ಈಗಲೂ ರಾಮನಿಗೆ ಸೀತೆಯನ್ನೊಪ್ಪಿಸಿಬಿಡು” ಎಂದರು ಇಲ್ಲಿಗೆ ಇಪ್ಪ ತೈದನೆಯಸರ್ಗವು [ ರಾವಣನು ವಾನರಸೇನೆಯನ್ನು ನೋಡುವುದಕ್ಕಾಗಿ ? ಲಂಕೆಯಲ್ಲಿ ಮಹೋನ್ನತವಾದ ಒಂದು ಉಪ್ಪರಿಗೆಯ | ' ನೈ ರಿದುದು ಅಲ್ಲಿ ಸಾರಣನು ರಾವಣನಿಗೆ ವಾನರಸೇ ! ನೆಯಲ್ಲಿದ್ದ ಯಧಪತಿಗಳನ್ನು ಬೇರೆಬೇರೆಯಾಗಿ ಗಿ ತೋರಿಸಿ,ಅವರವರ ಬಲಪರಾಕ್ರಮಾ ದಿಗಳನ್ನೂ ತಿಳಿಸಿದುದು ಸಾರಣನು ಹೀಗೆ ನಿರ್ಭಯವಾಗಿ ನಿಂತು ಹಿತವಾಕ್ಯವನ್ನು ಹೇಳುತ್ತಿ ರುವಾಗಲೇ ರಾವಣನು ಕೋಪದಿಂದ ಆತನನ್ನು ನಿಂದಿಸುತ್ತ, “ಸಾರಣಾ! ಸಾಕು ಸುಮ್ಮನಿರು' ದೇವಗಂಧಶ್ವದಾನವರೆಲ್ಲರೂ ಒಂದಾಗಿ ಸೇರಿ ನನ್ನೊ ಡನೆ ಯುದ್ಧಕ್ಕೆ ಬಂದರೂ, ಸಮಸ್ತಲೋಕಗಳೂ ನನ್ನನ್ನು ಹೆದರಿಸಿದರೂ, ಎಷ್ಟು ಮಾತ್ರಕ್ಕೂ ನಾನು ಸೀತೆಯನ್ನು ಬಿಡುವನಲ್ಲ' ನೀನು ಕೇವಲಸೌಮ್ಯ ನೇ ಹೊರತು ಶೂರನಲ್ಲ. ಆ ವಾನರರ ಪ್ರಹಾರಕ್ಕೆ ಸಿಕ್ಕಿಬಂದುದರಿಂದಲೇ ಸೀನು ಬಹಳಭಯಪಟ್ಟು ನಡುಗುವಂತಿದೆ' ಆ ಭಯಕ್ಕಾಗಿಯೇ ಈಗ ನಿನಗೆ ಸೀತೆಯನ್ನು ಹಿಂತಿರುಗಿ ರಾಮನಿಗೆ ಕೊಟ್ಟು ಬಿಡುವುದೇ ಮೇಲೆಂದೂ ತೋ ರಿದಂತಿದೆ? ಅಯ್ಯೋ ಹುಚ್ಚನೆ! ನನ್ನನ್ನು ಯುದ್ಧದಲ್ಲಿ ಜಯಿಸತಕ್ಕ ಶತ್ರು