ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨ ಸರ್ಗ, ೨೬ ] ಯುದ್ಧಕಾಂಡವು. ವು ಲೋಕದಲ್ಲಿ ಬೇರೊಬ್ಬನುಂಟೆ ?” ಎಂದನು. ಹೀಗೆ ರಾಕ್ಷಸೇಶ್ವರನಾದ ರಾವಣನು ಸಾರಣವನ್ನು ಪರುಷವಾಕ್ಯದಿಂದ ಧಿಕ್ಕರಿಸಿ, ಆ ವಾನರಸೈನ್ಯವ ನ್ನು ತಾನೇ ಕಣ್ಣಾರೆ ನೋಡಬೇಕೆಂಬ ಕುತೂಹಲವುಳ್ಳವನಾಗಿ, ಆಗಲೇ ಅಲ್ಲಿಂದ ಹೊರಟು, ಹಿಮದಂತೆ ಬಿಳುಪಾಗಿಯೂ, ಅನೇಕತಾಳವೃಕ್ಷಗಳ ಪ್ರ ಮಾಣದಷ್ಟು ಮಹೋನ್ನತವಾಗಿಯೂ ಇದ್ದ ಒಂದು ಪ್ರಾಸಾದವನೇ ರಿದ ನು. ಕೋಪೋದ್ರಿಕ್ತನಾದ ಆ ರಾವಣನು ಶುಕಸಾರಣರೊಡಗೂಡಿ ಪ್ರಾಸಾ ದದಮೇಲೆ ನಿಂತು, ಅಲ್ಲಿಂದ ಸಮುದ್ರವನ್ನೂ, ಪಕ್ವತಗಳನ್ನೂ, ಕಾಡುಗಳ ನ್ನೂ ನೋಡುತ್ತ, ತ್ರಿಕೂಟಪಕ್ವತಕ್ಕೆ ಕೆಳಗಿದ್ದ ಭೂಪ್ರದೇಶವೆಲ್ಲವೂ ವಾ ನರಸೇನೆಯಿಂದಲೇ ನಿಬಿಡವಾಗಿ ತುಂಬಿಹೋಗಿರುವುದನ್ನೂ ಕಂಡನು. ಹೀಗೆ ಕೊನೆಮೊದಲಿಲ್ಲದೆ ಅಸಂಖ್ಯಾತವಾಗಿದ್ದ ಆ ದೊಡ್ಡ ವಾನರಸೇನೆ ಯನ್ನು ನೋಡಿ ರಾವಣನು, ಸಾರಣನನ್ನು ಕುರಿತು “ಸಾರಣಾ' ಈ ವಾನರ ರ ಗುಂಪಿನಲ್ಲಿ ಬಹಳಶೂರರೆನಿಸಿದವರಾರು? ಯಾರಿಗೆ ಹೆಚ್ಚು ಬಲವುಂಟು ? ಇ ವರಲ್ಲಿ ಮಹೋತ್ಸಾಹದಿಂದ ಯುದ್ಧಕ್ಕೆ ಮುಂದಾಗಿ ನಿಲ್ಲುವವರಾರು ? ವರಲ್ಲಿ ಯಾರ ಮಾತನ್ನು ಸುಗ್ರೀವನು ವಿಶೇಷವಾಗಿ ನಂಬುವನು” ಇವರಲ್ಲಿ ಪ್ರಧಾನಯಧಪತಿಗಳಾರು ? ಸೇನಾಪತಿಗಳಾದ ಕಪಿಗಳಾರು ? ಇವೆಲ್ಲವ ನ್ಯೂ ಯಥಾಸ್ಥಿತವಾಗಿ ನನಗೆ ತಿಳಿಸು' ಎಂದು ಕೇಳಿದನು ಈ ಮಾತನ್ನು ಕೇಳಿ ಸಾರಣನು, ಆ ವಾನರಪ್ರಮುಖರ ಬಲಪರಾಕ್ರಮಗಳನ್ನು ಚೆನ್ನಾಗಿ ತಿಳಿದವನಾಗಿದ್ದುದರಿಂದ, ರಾವಣನಿಗೆ ಅವರವರನ್ನು ಬೇರೆಬೇರೆಯಾಗಿ ತಿಳಿಸುತ್ತ, ಆತನನ್ನು ಕುರಿತು 'ಎಲೆ ಮಹಾರಾಜನೆ | ಅದೋ ! ಅಲ್ಲಿ ಒಬ್ಬ ವಾನರನು ನಮ್ಮ ಲಂಕೆಗಿದಿರಾಗಿ ಸಿಂಹನಾದವನ್ನು ಮಾಡುತ್ತ, ಲಕ್ಷಯೂರಪತಿಗಳಿಂದ ಪರಿವ್ರತನಾಗಿ ನಿಂತಿರುವುದನ್ನು ನೋಡಿದೆಯಾ ? ಅವನ ಮಹಾಧ್ವನಿಗೆ ನಮ್ಮ ಲಂಕೆಯೆಲ್ಲವೂ, ತೋರಣಪ್ರಾಕಾರಗಳೊ ಡನೆಯೂ, ಪಕ್ವತಾರಣ್ಯಗಳೊಡನೆಯೂ, ಪರೋಪವನಗಳೊಡನೆಯೂ ನ ಡುಗುವಂತಿರುವುದು ನೋಡು ! ಅವನಿಗೆ ನೀಲನೆಂದು ಹೆಸರು ವಾನರೇಂ ದ್ರನಾಗಿಯೂ, ಮಹಾತ್ಮನಾಗಿಯೂ ಇರುವ ಸುಗ್ರೀವನ ಸಮಸ್ತಸೈನ್ಯ ಕ್ಕೂ ಈತನೇ ಪ್ರಧಾನಸೇನಾನಾಯಕನು. ಆದೋ ! ಅಲ್ಲಿ ತೋಳುಗಳ