ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮ ಶ್ರೀಮದ್ರಾಮಾಯಣವು [ಸರ್ಗ ೨೩. ನ್ನು ಮೇಲಕ್ಕೆತ್ತಿ ನೆಲದಮೇಲೆ ಕಾಲೂರಿ ನಿಂತಿರುವ ವೀರವಂತನಾದ ಮ ತ್ತೊಬ್ಬ ವಾನರನು ನಮ್ಮ ಲಂಕೆಗಿದಿರಾಗಿ ಮೇಲೆಮೇಲೆ ಕೋಪದಿಂದ ಉಬ್ಬುವುದನ್ನೂ, ಪತಶಿಖರದಂತಿರುವ ಆತನ ಮಹೋನ್ನತಾಕಾರವ ನ್ಯೂ, ಕಮಲಕಿ೦ಜಲ್ಯದಂತಿರುವ ಅವನ ಮೈ ಬಣ್ಣವನ್ನೂ ನೋಡಿದೆಯಾ? ಆ ವಾನರಯೂಥಪತಿಯು, ಆಗಾಗ ಕೋಪದಿಂದ ತನ್ನ ಬಾಲವನ್ನೆ ತಿ ಬಡಿ ಯುತ್ತಿರುವಾಗ, ಅದರಿಂದುಂಟಾದ ಮಹಾಧ್ವನಿಯೇ ಹತ್ತು ದಿಕ್ಕುಗಳಲ್ಲಿ ಯೂ ಪ್ರತಿಧ್ವನಿಯನ್ನುಂಟುಮಾಡುವುದನ್ನು ನೋಡಿದೆಯಾ ? ಇವನನ್ನೇ ವಾನರರಾಜನಾದ ಸುಗ್ರೀವನು ಯೌವರಾಜ್ಯದಲ್ಲಿ ಇರಿಸಿರುವನು ಇವನಿಗೆ ಅಂಗದನೆಂದು ಹೆಸರು.ಈಗಾಗಲೇ ಇವನು ನಿನ್ನನ್ನು ಯುದ್ಧಕ್ಕೆ ಕರೆಯುತ್ತಿ ರುವನು ನೋಡು, ಇವನು ವಾಲಿಗೆ ತಕ್ಕ ಪತ್ರನು ' ಸುಗ್ರೀವನಿಗೆ ಬಹಳ ಪ್ರೇಮಪಾತ್ರನು ದೇವೇಂದ್ರನಿಗೆ ವರುಣನು ಹೇಗೋ ಹಾಗೆ, ಇವನು ರಾ ಮನಿಗಾಗಿ ತನ್ನ ಪರಾಕ್ರಮದ ಸರಸ್ವವನ್ನೂ ತೋರಿಸಬೇಕಂದು ಪ್ರ ಯತ್ರಿ ಸಿರುವನು ಹಿಂದೆ ಮಹಾವೇಗಶಾಲಿಯಾದ ಹನುಮಂತನು ರಾ ಮನ ಕಾಠ್ಯಕ್ಕಾಗಿ ಇಲ್ಲಿಗೆ ಬಂದು ಸೀತೆಯನ್ನು ನೋಡಿಹೋದನಷ್ಟೆ? ಅವೆ ಲ್ಲಕ್ಕೂ ಇವನ ಬುದ್ಧಿಯೇ ಮೂಲವು ' ವೀರವಂತನಾದ ಈ ಅಂಗದನು ತನ್ನೊಡನೆ ಕೊನೆಮೊದಲಿಲ್ಲದಷ್ಟು ವಾನರಸೇನೆಯನ್ನೂ ಕರೆತಂದಿರುವನು. ಆ ಸೈನ್ಯದಿಂದಲೇ ನಿನ ನ್ನು ಇದಿರಿಸುವುದಕ್ಕೆ ಸಿದ್ಧನಾಗಿಯೂ ನಿಂತಿರು ವನು ಈತನನ್ನು ಜಯಿಸುವುದು ಲೋಕದಲ್ಲಿ ಯಾರಿಗೂ ಸಾಧ್ಯವಿಲ್ಲ ಅ ದೋ' ಅಲ್ಲಿ ವಾಲಿಪುತ್ರನಾದ ಅಂಗದನಹಿಂದೆ, ದೊಡ್ಡ ಸೈನ್ಯದೊಡನೆ ನಿಂ ತಿರುವವನೇ ನಳನೆಂಬವನು ಆತನೂ ನಿನ್ನೊಡನೆ ಯುದ್ಯಕ್ಕಾಗಿಯೇ ಕಾದಿ ರುವನು ಅವನೇ ಸೇತುವನ್ನು ಕಟ್ಟಿದವನು ಎಲೆ ಮಹಾರಾಜನೆ ' ಅದೋ ಅಲ್ಲಿ ಆ ನಳನ ಹಿಂದೆ, ದೇಹವನ್ನು ಬಿಸಿ, ಸಿಂಹನಾದಗಳಿಂದ ಗರ್ಜಿಸುತ್ತ, ಕೋಪದಿಂದಮೇಲೆದ್ದು ನಿಂತಿರುವ ಕೆಲವುವಾನರವೀರರನ್ನು ನೋಡಿದೆಯಾ? ಅವರನ್ನಿ ದಿರಿಸುವುದು ಯಾರಿಗೂ ಸಾಧ್ಯವಲ್ಲ ಒಬ್ಬೊಬ್ಬರೂ ಭಯಂಕರಾ ಕಾರವುಳ್ಳವರು ' ಒಬ್ಬೊಬ್ಬರೂ ಬಹಳಕೂರರು ! ಒಬ್ಬೊಬ್ಬರೂ ಚಂ ಡಪರಾಕ್ರಮವುಳ್ಳವರು ಅವರ ಸಂಖ್ಯೆಯೆಷ್ಟೆಂಬುದನ್ನು ನೋಡು ?