ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೫೯ ೨೨೫ ಸರ್ಗ, ೨೬ ] ಯುದ್ಧ ಕಾಂಡವು. ಒಂದು ಸಹಸ್ರಕೋಟೆಗೆ ಮೇಲೆ ಎಂಬತ್ತುಲಕ್ಷವಿರುವುದು ಈ 'ಸೈನ್ಯವ ಲ್ಲದೆ ಚಂದನವನವಾಸಿಗಳಾದ ಬೇರೆ ಅನೇನವಾನರವೀರರೂ ಇನಳನನ್ನು ಹಿಂಬಾಲಿಸಿಬಂದಿರುವರು ಈ ಸಮಸ್ಯಸೇನೆಯೂ ನಳನ ಪರಿವಾರವು ಈ ನಳನೊಬ್ಬನೇ ತನ್ನ ಸೇನೆಯೊಡನೆ ನಮ್ಮ ಲಂಕೆಯನ್ನು ಮರ್ದಿಸಬೇಕೆಂದಿರು ವನು ಅದೊ' ಅತ್ಯಲಾಗಿ ಬೆಳ್ಳಿಯಂತೆ ಶುಭ ದೇಹವುಳ್ಳ ವಾನರನೊಬ್ಬನಿ ರುವನು ನೋಡು ಅವನಿಗೆ ಶೈತನೆಂದು ಹೆಸರು ಈತನಿಗೆ ಯುದ್ಧದಲ್ಲಿ ಬ ಹಳ ಕುತೂಹಲವುಂಟು ಪರಾಕ್ರಮದಲ್ಲಿಯೂ, ಬುದ್ದಿಯಲ್ಲಿಯೂ, ವೀರ ದಲ್ಲಿಯೂ, ಇವನು ಮೂರುಲೋಕದಲ್ಲಿಯೂ ಪ್ರಸಿದ್ಧಿ ಹೊಂದಿದವನು ಎಲೆ ಮಹಾರಾಜನೆ' ಆತನಿಗಿರುವ ಯುದ್ಧಾತುರವೆಷ್ಟೆಂಬುದನ್ನು ನೋಡಿದೆ ಯಾ?ಆಗಲೇ ಅವನು ಸುಗ್ರೀವನಲ್ಲಿಗೆ ಹೋಗಿ,ತಾನೊಬ್ಬನೇ ಲಂಕೆಯನ್ನು ಧ್ವಂಸಮಾಡಿ ಬರುವುದಾಗಿ ಹೇಳಿ, ಅವನ ಅನುಮತಿಯನ್ನೂ ಪಡೆದು, ಅ ದಕ್ಕೆ ತಕ್ಕಂತೆ ತನ್ನ ವಾನರಸೈನ್ಯವನ್ನೂ ಕ್ರಮವಾಗಿ ವಿಭಾಗಿಸಿ, ಅವರನ್ನು ಮೇಲೆಮೇಲೆ ಪ್ರೋತ್ಸಾಹಿಸುತ್ತ,ಆತುರದಿಂದ ಬರುತ್ತಿರುವನು ನೋಡು, ಇದೋ ಇತಲಾಗಿರುವವನು ಕುಮುದನೆಂಬ ಯೂಥಪತಿ ಯ) ಇವನು ಪೂತ್ವದಲ್ಲಿ ಗೋಮತೀ ತೀರದಲ್ಲಿ ಅತಿರಮಣೀಯವಾಗಿಯೂ, ನಾನಾವ್ಯ ಕ್ಷಗಳಿಂದ ನಿಬಿಡವಾಗಿಯೂ ಇದ್ದ ಸಂಕೋಚನವೆಂಬ ಪತದಮೇಲೆ ಸು ತುತ್ಯಾ, ಅಲ್ಲಿನ ರಾಜ್ಯವನ್ನು ಪಾಲಿಸುತಿದ್ದನು ಈಗ ಸುಗ್ರೀವನ ಸಹಾ ಯಕ್ಕಾಗಿ ಬಂದಿರುವನು ಇವನು ತನ್ನ ಕಡೆಯಿಂದ ಹತ್ತು ಕೋಟವಾನರ ಸೇನೆಯನ್ನು ಕರೆತಂದಿರುವನು ಇವನ ಬಾಲದಲ್ಲಿರುವ ಕೂದಲುಗಳೇ ಎ ಷೋ ಮಾರುದ್ದವಿರುವುವು ಅವುಗಳ ವಿಚಿತ್ರವರ್ಣವನ್ನು ನೋಡಿದೆಯಾ? ಕೆಂಪು, ಹಳದಿ, ಬಿಳುಪ, ಅಚ್ಚ ಬಿಳುಪ, ಮುಂತಾದ ನಾನಾಬಣ್ಣದ ಕೂದಲುಗಳು ಕಲೆತಿರುವುವು ಈ ಕುಮುದನೆಂಬ ಕಸಿಯು ಬಹಳಭಯಂ ಕರಕಾರಗಳನ್ನು ನಡೆಸತಕ್ಕವನು. ಎಂತಹ ಮಹಾಪತ್ತಿನಲ್ಲಿಯೂ ಸ್ವಲ್ಪ ಮಾತ್ರವೂ ದೈನ್ಯವನ್ನು ತೋರಿಸುವವನಲ್ಲ' ಬಹಳ ಪ್ರಚಂಡನು? ಅತ್ಯಂತ ಕೋಪಸ್ವಭಾವವುಳ್ಳವನು ! ಯುದ್ಧಕ್ಕಾಗಿಯೇ ಕಾಲೆತ್ತಿನಿಂತಿರುವನು ಈ ತನೂ ತನ್ನ ಸೈನ್ಯದೊಡನೆ, ತಾನೊಬ್ಬನೆ ನಮ್ಮ ಲಂಕೆಯನ್ನು ಮ