ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೦ ಶ್ರೀಮದ್ರಾಮಾಯಣವು (ಸರ್ಗ, ೨, ರ್ದಿಸಬೇಕೆಂದು ಉತ್ಸಾಹಪಡುತ್ತಿರುವವನು. ಎಲೆ ರಾಜನೆ' ಅದೋ ಅತ್ತಲಾಗಿ ನೋಡು : ಸಿಂಹದಂತೆ ಕಪಿಲವರ್ಣನಾಗಿ, ಅಗಲವಾದ ಕ ಇುಳ್ಳವನಾಗಿ, ಕಣ್ಣಿನಿಂದಲೇ ನಮ್ಮ ಲಂಕೆಯನ್ನು ಸುಟ್ಟುಬಿಡುವಂ ತೆ, ಎವೆಮುಚ್ಚದೆ ಈಕಡೆಗೆ ನೋಡುತ್ತಿರುವ ಆ ಯೂಥಪತಿಯನ್ನು ನೋಡು, ಅವನಿಗೆ ರಂಭನೆಂದು ಹೆಸರು. ಇವನು ಯಾವಾಗಲೂ ವಿಂ ಧ್ಯಪರತದಲ್ಲಿಯೂ, ಕೃಷ್ಣಗಿರಿಯಲ್ಲಿಯೂ, ಸಹ್ಯಸುದರ್ಶನಗಳೆಂಬ ಪ ರೂತಗಳಲ್ಲಿಯೂ ವಾಸಮಾಡುತ್ತಿರುವನು ಶೂರರಾಗಿಯೂ, ಪ್ರಚಂಡ ರಾಗಿಯೂ, ಚಂಡಪರಾಕ್ರಮವುಳ್ಳವರಾಗಿಯೂ ಇರುವ ನೂರಮೂವ ತುಲಕ್ಷವಾನರರು ಇವನಿಗೆ ಬೆಂಬಲವಾಗಿರುವರು ಅವರೆಲ್ಲರೂ ನಮ್ಮ ಲಂಕೆಯನ್ನು ಧ್ವಂಸ ಮಾಡುವುದರಲ್ಲಿ ಉತ್ಸಾಹದಿಂದ ನಿಂತಿರುವರು ಆ ದೊ'ಅತ್ತಲಾಗಿ ಕಿವಿಗಳನ್ನು ನಿಗುರಿಸಿ, ಆಗಾಗ ದೊಡ್ಡದಾಗಿ ಬಾಯನ್ನು ಬಿಟ್ಟು, ಆಕಳಿಸುತ್ತಿರುವ ಆ ವಾನರಯಧಪತಿಯನ್ನು ನೋಡು ! ಅವನಿ ಗೆ ಶರಭನೆಂದು ಹೆಸರು ಅವನಾದರೋ ಮೃತ್ಯುದೇವತೆಗೂ ಹೆದರುವವ ನಲ್ಲ' ಯಾವಯುದ್ದಕ್ಕೂ ಹಿಂಜರಿಯುವವನಲ್ಲ ' ಅವನು ಕೋಪದಿಂದು ಬ್ಲ್ಯುತ್ತಿರುವುದನ್ನೂ ,ಅತ್ತಿತ್ತ ದೃಷ್ಟಿಯನ್ನು ತಿರುಗಿಸಿ ನೋಡುವ ಅವನ ಓ ರೆನೋಟವನ್ನೂ ನೋಡು ಮತ್ತು ಅವನು ಆಗಾಗ ತನ್ನ ಬಾಲವನ್ನು ನೋ ಡಿ, ತನಗೆ ತಾನೇ ಹಿಗ್ಗಿ, ಸಂತೋಷದಿಂದ ಸಿಂಹನಾದವನ್ನು ಮಾಡುವನು. ಬಲಾಡ್ಯನಾಗಿಯೂ, ಭಯರಹಿತನಾಗಿಯೂ, ವೇಗಶಾಲಿಯಾಗಿಯೂ, ಇರುವ ಈತನು, ಯಾವಾಗಲೂ, ರಮಣೀಯವಾದ ಸಾಲ್ವೇಯವೆಂಬ ಪ ಊತದಲ್ಲಿಯೇ ವಾಸಮಾಡುತ್ತಿರುವನು ಈತನ ವಶದಲ್ಲಿ ವಿಹಾರರೆಂಬ ನಾಲ್ವತ್ತು ಲಕ್ಷ ವಾನರವೀರರಿರುವರು ಅವರೆಲ್ಲರೂ ಬಹಳ ಬಲಾಡ್ಯರು | ಎಲೆ ರಾಕ್ಷಸೇಂದ್ರನೆ' ಅದೊ'ಅತ್ತಲಾಗಿ, ಮಹಾಮೇಫುದಂತೆ ಆಕಾಶವ ನಾವರಿಸಿ, ದೇವತೆಗಳನಡುವೆ ದೇವೇಂದ್ರನಂತೆ, ವಾನರರನಡುವೆ ನಿಂತಿರು ವ ಆತನೇ ಪನಸನೆಂಬ ಯೋಧಪತಿಯು, ಯುದ್ಯೋದ್ಯುಕ್ತರಾಗಿರುವ ವಾನರರನಡುವೆ ನಿಂತಿರುವ ಇವನ ಕಂಠಧ್ವನಿಯು, ಅನೇಕಭೇರಿಗಳಿಂದ ಹುಟ್ಟಿದ ಮಹಾಧ್ವನಿಯಂತೆ ಮೊಳಗುತ್ತಿರುವುದನ್ನು ಕೇಳಿದೆಯಾ ? ಯು