ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦೭೪ ಶ್ರೀಮದ್ರಾಮಾಯಣವು [ಸರ್ಗ, ೧. ಎಂದು ಹೇಳುತ್ತ, ಪ್ರೇಮದಿಂದ ಪುಳಕಿತವಾದ ಮೈಯುಳ್ಳವನಾಗಿ, ಕಾ ರವನ್ನು ಸಾಧಿಸಿಬಂದ ಮಹಾತ್ಮನಾದ ಆ ಹನುಮಂತನನ್ನು ತನ್ನ ಎರಡು ಕೈಗಳಿಂದಲೂ ಬಿಗಿಯಾಗಿ ಅಪ್ಪಿಕೊಂಡನು. ಹಾಗೆಯೇ ರಾಮನು ಸ್ವಲ್ಪಹೊ ತಿನವರೆಗೆ ಧ್ಯಾನಿಸುತ್ತಿದ್ದು, ವಾನರರಾಜನಾದ ಸುಗ್ರೀವನೂ ಕೇಳುತ್ತಿರುವ ಈ ಆಲಿಂಗನವು ಈ ಆಲಿಂಗವೆಂತದು? ಸ್ವಾನುಭವಸಿದ್ಧವಾದುದು. ಇಚ್ಚಾಗೃಹೀತಾ ಭಿಮತೋರದೇಹ;” ಎಂಬಂತೆ ರಾಮನು ಈ ತನ್ನ ದೇಹವನ್ನು ತಾನಾಗಿಯೇ ಆಸೆ ಪಟ್ಟು ಸ್ವೀಕರಿಸಿರುವದರಿಂದ, ತನಗೆ ಬಹಳ ಅಭಿಮತವಾಗಿಯೂ, ಮಹತ್ತಾಗಿಯೂ ಇರುವ ಆ ದೇಹವನ್ನೆ ಒಪ್ಪಿಸುವುದಾಗಿ ಭಾವವು, ಲೋಕದಲ್ಲಿ ಯಾರಾದರೂ ತಮಗೆ ನಿರವಧಿಕಭೋಗ್ಯವಾದ ವಸ್ತುವನ್ನೇ ತಮ್ಮ ಇಷ್ಟಜನಗಳಿಗೆ ಕೊಡುವರಲ್ಲವೆ ? ಅದ ರಂತೆಯೇ ಇಲ್ಲಿ ರಾಮನೂ ತನಗೆ ಅತ್ಯಂತಭೋಗ್ಯವೆಂದು ಸ್ವಾನುಭವಸಿದ್ದವಾದ ತನ್ನ ವಿಗ್ರಹವನ್ನೇ ಆಲಿಂಗನವೆಂಬ ವ್ಯಾಜದಿಂದ ಹನುಮಂತನಿಗೆ ಕೊಟ್ಟು ಬಿಡುವುದಾಗಿ ಭಾವವು (ಸರಸ್ವಧೂತ ) ಈ ವಿಗ್ರಹವನ್ನು ಬಿಟ್ಟು ಬೇರೆ ಯಾವಯಾವ ಉತ್ತಮ ವಸ್ತುಗಳನ್ನು ಕೊಟ್ಟರೂ, ಆಯಾ ವಸ್ತುಗಳನ್ನು ಮಾತ್ರವೇ ಕೊಟ್ಟಂತಾಗುವುದೇ ಹೊರತು, ತದಿತರವಸು ಗಳನ್ನು ಕೊಡಲಿಲ್ಲವೆಂಬ ಕೊರತೆಯೇ ಏರ ಡುವುದು ಈ ದೇಹವಾದರೆ ಸಮಸ್ತ ಚರಾಚರಗಳಿಗೂ ನಿತ್ಯಾಶ್ರಯವಾದುದರಿಂದ, ಇದನ್ನು ಕೊಟ್ಟರೆ, ಪ್ರಾಪಂಚಿಕಗಳಾದ ಸರಸ್ವಗಳನ್ನೂ ಕೊಟ್ಟಂತಾಗುವು ದೆಂದು ಭಾವವು. (ಪರಿಷಂಗೂ ಹನುಮತ ) ಈ ಆಲಿಂಗನವಾದರೂ ಹನುಮಂತನಿಗೆಮಾತ್ರವೇ ಉಚಿ ತವು, ಅಮೃತವನ್ನು ಭುಜಿಸಿದವರಿಗೆ ಗಂಜಿ ಮೊದಲಾದುವನ್ನು ಕೊದಬಾರದಲ್ಲವೆ? ಯಾವನಿಗೆ ಯಾವವಸ್ತುವಿನಲ್ಲಿ ಬಹಳ ರುಚಿಯುಂಟಿ ಅವನಿಗೆ ಆ ವಸ್ತುವನ್ನೇಕೊಡ ಬೇಕಾದುದರಿಂದ “ಸೈ ಹೋ ಮೇ ಪರಮೋರಾರ್ಜ” ಎಂಬಂತೆ, ಈ ದೇಹದಲ್ಲಿ ಪರ ಮಪ್ರೇಮವುಳ್ಳ ಹನುಮಂತನಿಗೆ ಅದನ್ನೇ ಒಪ್ಪಿಸುವುದಾಗಿ ಭಾವವು, (ಮಯಾಕಾಲ ಮಿಮಂ ಪ್ರಾಪ್ಯ) ಇಂತಹ ಸಮಯವು ಸಿಕ್ಕಿರುವಾಗ, ಈಕಾಲಕ್ಕೆ ಅದನ್ನು ಬಿಟ್ಟರೆ ಬೇರೆ ಯಾವುದೂ ತಕ್ಕುದಲ್ಲವು. (ಮಹಾನ.) ಮಹಾಸ್ವಭಾವವುಳ್ಳವನು, ಅಥವಾ ಮಹದಾರವಳ್ಳವನು ವೇಣುದ್ಯಥನಕಾಲದಲ್ಲಿ ಆ ಸೀತೆಗೆ ನನ್ನ ವೃತ್ತಾಂತವನ್ನು ತಿಳಿಸಿ ಅವಳ ದೇಹವನ್ನುಳಿಸಿದನು, ಅವಳ ವಿಯೋಗದುಃಖದಿಂದ “ ಅವಗಾಹ್ಯಾ ರ್ಕವಂ ಸ್ಪ” ಎಂದು ಪ್ರಾಣತ್ಯಾಗಕ್ಕಾಗಿ ಉದ್ಯೋಗಿಸುತ್ತಿದ್ದ ನನಗೆ ಅವಳ ವೃತ್ತಾಂತವನ್ನು ತಿಳಿಸಿ ನನ್ನ ದೇಹವನ್ನುಳಿಸಿದನು, ಹೀಗೆ ನಮ್ಮಿಬ್ಬರಿಗೂ ದೇಹ ದಾನವನ್ನು ಮಾಡಿದ ಈ ಮಹಾತ್ಮನಿಗೆ ಈ ನನ್ನ ಒಂದು ದೇಹವನ್ನೊಪ್ಪಿಸಿದರೂ, ಅವನು ಮಾಡಿರುವ ಮಹದಾರಕ್ಕೆ ತಕ್ಕ ಪ್ರತ್ಯುಪಕಾರವಾಗದೆಂದು ಭಾವವು.