ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨೭ ) ಯುದ್ಧಕಾಂಡವು. ೨೨೬೩ ಧೂಮ್ರನೆಂಬ ಯೂಥಪತಿಯು ' ಇವನೇ ಭಲ್ಲೂ ಕಸೈನ್ಯಕ್ಕೆ ಮುಖ್ಯಾಧಿಪ ತಿಯು ' ನರ್ಮದಾನದಿಯ ನೀರನ್ನು ಕುಡಿದು ಕೊಬ್ಬಿ, ಋಕ್ಷವಂತವೆಂಬ ಪಕ್ವತಲ್ಲಿ ವಾಸಮಾಡುತ್ತಿರುವನು ಇದೋ ಇತ್ತಲಾಗಿ ಪರೂತದಂತೆ ಮಹಾಕಾಯವುಳ್ಳ ಈತನನ್ನು ನೋಡು ' ಇವನು ಆ ಧೂಮ್ರನ ತಮ್ಮನು. ರೂಪದಲ್ಲಿ ಅಣ್ಣನಿಗೆ ಸಮಾನನಾಗಿ, ಪರಾಕ್ರಮದಲ್ಲಿ ಅವನಿಗಿಂತಲೂ ಮೇಲೆನಿಸಿಕೊಂಡಿರುವನು ಇವನೇ ಜಾಂಬವಂತನೆಂಬವನು ಅಲ್ಲಿ ಕಾಣುವ ದೊಡ್ಡ ಸೈನ್ಯದಲ್ಲಿ ಪ್ರಧಾನರಾದ ಯಾವ ಯಾವ ಯೂಥಪತಿಗಳುಂಟೋ, ಅವರೆಲ್ಲರಿಗೂ ಈತನು ಪ್ರಧಾನನು ' ಮಹಾಪರಾಕ್ರಮಿಯು ' ಪ್ರಭುವಿನ ಮನಸ್ಸನ್ನು ಅನುವರ್ತಿಸಿ ನಡೆಯತಕ್ಕವನು ' ಯುದ್ದದಲ್ಲಿ ಶತ್ರುಗಳ ಪರಾ ಕ್ರಮವನ್ನು ಸ್ವಲ್ಪ ಮಾತ್ರವೂ ಸಹಿಸಲಾರನು ' ಮಹಾಥೀಮಂತನಾದ ಈ ಜಾಂಬವಂತನು, ಮೊದಲು ದೇವಾಸುರಯುದ್ಧದಲ್ಲಿ, ಇನ್ಮನಿಗೆ ದೊ ಈ ಸಹಾಯವನ್ನು ಮಾಡಿ, ಅವನಿಂದ ಎಷ್ಮವರಗಳನ್ನು ಪಡೆದು ಬಂದಿ ರುವನು ಈ ಜಾಂಬವಂತನಲ್ಲಿರುವ ಸೈನ್ಯಗಳನ್ನು ಅಷ್ಟಿಷ್ಟೆಂದು ನಿರ್ಣಯಿ ಸುವುದಕ್ಕೂ ಸಾಧ್ಯವಲ್ಲ ' ಇವನ ಕಡೆಯ ಸೈನಿಕರೆಲ್ಲರೂ ಪರೂತದಂತೆ ದೊಡ್ಡ ಆಕಾರವುಳ್ಳವರು' ದೊಡ್ಡ ರೋಮಗಳುಳ್ಳವರು' ಅಗ್ನಿ ಯಂತೆ ತೇ ಜಸ್ಸುಳ್ಳವರು ' ಮೃತ್ಯು ದೇವತೆಗಾದರೂ ಹೆದರುವವರಲ್ಲ ' ರಾಕ್ಷಸರಿಗೂ, ಪಿಶಾಚರಿಗೂ, ಸಮಾನರಾಗಿರುವರು ಇವರು ಆಗಾಗ ಪರತಶಿಖರಗಳನ್ನೇರಿ, ಅಲ್ಲಿ ಮಹಾಮೇಫುಗಳಂತಿರುವ ವಿಸ್ತಾರವಾದ ಕಲ್ಲುಗಳನ್ನು ಕಿತ್ತು, ಆ ದನ್ನೇ ಆಯುಧಗಳಂತೆ ಪ್ರಯೋಗಿಸುವರು ' ಎಲೆ ರಾಜನೆ ! ಆದೋ ಅತ್ಯ ಲಾಗಿ ಮಹೋತ್ಸಾಹದಿಂದ ಹಾರಿಹಾರಿ ನೆಗೆಯುವಂತೆ ಕಾಣುವ ಆ ವಾನ ರವೀರನ್ನು ನೋಡಿದೆಯಾ ? ಇತರವಾನರರೆಲ್ಲರೂ ಅವನನ್ನು ಆಶ್ಚಯ್ಯ ದಿಂದ ನೋಡುತ್ತ ನಿಂತಿರುವುದನ್ನೂ ನೋಡು' ಇವನೇ ದಂಭನೆಂಬ ಯೂ ಧಪತಿಯು: ಅವನು ಬಹಳ ಬಲಾಡ್ಯನಾದುದರಿಂದ, ಅಗಾಗ ದೇವಾಸುರ ಯುದ್ಧದಲ್ಲಿ ತನ್ನ ಬಲವನ್ನು ತೋರಿಸಿ, ಇಂದ್ರನನ್ನು ಸಂತೋಷಪಡಿಸಿ ಬ ರುತ್ತಿರುವನು. ಇದೆ!ಇವನು ಸನ್ನಾ ದನೆಂಬ ಯೂಥಪತಿಯು, ವಾನರರೆ ಲ್ಲರಿಗೂ ಪಿತಾಮಹನು. ಈತನು ನಡೆಯುವಾಗ ತನ್ನ ಒಂದೊಂದು ಹೆಜ್ಜೆ