ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬೪ ಶ್ರೀಮದ್ರಾಮಾಯಣವು [ಸರ್ಗ, ೨೭. ಗೂ ಒಂದೊಂದುಯೋಜನದುದ್ಧವುಳ್ಳ ಪಕ್ವತವನ್ನೇ ದಾಟಿ ಹೋಗಬಲ್ಲ ನು, ಇವನು ಮೇಲಕ್ಕೆದ್ದು ನಿಂತರೆ, ಒಂದು ಯೋಜನದುದ್ದವುಳ್ಳ ಪಕ್ಷ ತವೂಕೂಡ ಇವನ ದೇಹಕ್ಕಿಂತಲೂ ತಣ್ಣಾಗಿ ಕಾಣುವುದು ಚತುಷ್ಟಾತು ಗಳಲ್ಲಿ ಇವನಿಗಿಂತಲೂ ದೊಡ್ಡ ರೂಪವುಳ್ಳ ಪ್ರಾಣಿಯು ಒಂದಾದರೂ ಇಲ್ಲ. ಮೊದಲು ದೇವದಾನವರ ಯುದ್ದದಲ್ಲಿ ಈತನ ಸೇರಿ ಯುದ್ಧಮಾ ಡಿ ಪರಾಜಯವನ್ನು ಹೊಂದದೆ ಬಂಡವನು, ವೀರದಲ್ಲಿ ಇನ್ಮನಿಗೆ ಸ ಮಾನನಾಗಿರುವನು ಇವನು ಒಬ್ಬ ಗಂಧಶ್ವಕನ್ಶಿಯಲ್ಲಿ ಅಗ್ನಿ ದೇವನಿಗೆ ಹು ಟ್ಟಿದವಮ ದೇವಾಸುರ ಯುದ್ಧದಲ್ಲಿ ದೇವತೆಗಳ ಸಹಾಯಕ್ಕಾಗಿಯೇ ಅಗ್ನಿ ಯು ಇವನನ್ನು ಹುಟ್ಟಿಸಿದನು. ಎಲೆ ರಾಕ್ಷಸೇನ್ನೇ' ಆದೋ' ಅತ್ತಲಾಗಿ ಕ್ರಥನನೆಂಬ ಬೇರೊಬ್ಬ ಯೂಥಪತಿಯಿರುವನು ನೋಡು ' ಕುಬೇರನಿಂದ ಪಾಲಿತವಾಗಿಯೂ, ಪ್ರಸಿದ್ಧವಾದ ಜಂಬೂವೃಕ್ಷದಿಂದ ಕೂಡಿದುದಾ ಗಿಯೂ, ಅನೇಕಕಿನ್ನರರಿಂದ ಸೇವಿಸಲ್ಪಟ್ಟ ಪಕ್ವತಗಳಿಗೆಲ್ಲಕ್ಕೂ ರಾಜ ನಾಗಿಯೂ, ನಿನ್ನಣ್ಣನಾದ ಕುಬೇರನಿಗೆ ಯಾವಾಗಲೂ ಸುಖಾಶ್ರಯ ವಾಗಿಯೂ ಇರುವ ಹಿಮವತ್ಪರತವೇ ಇವನ ವಾಸಸ್ಥಳವು ಶ್ರೀಮಂತ ನಾಗಿಯೂ, ಬಲಾಢನಾಗಿಯೂ ಇರುವ ಈ ವಾನರೋತ್ತಮನು, ಯು ವ್ಯದಲ್ಲಿ ಯಾವಾಗಲೂ ಆತ್ಮಸ್ತುತಿಯನ್ನು ಮಾಡಿಕೊಳ್ಳುವವನಲ್ಲ ಆ ದೋ ! ಅವನು ಸಹಸ್ರಕೋಟೆವಾನರರೊಡನೆ ನಿನ್ನ ಮೇಲೆ ದಂಡೆತ್ತಿ ಬರುತ್ತಿರುವನು ನೋಡು' ಇವನು ತಾನೊಬ್ಬನೇ ನಮ್ಮ ಲಂಕೆಯಲ್ಲವನ್ನೂ ಧ್ವಂಸಮಾಡಬೇಕೆಂಬ ಆತುರದಿಂದಿರುವನು. ಇದೊ' ಇತಲಾಗಿ ಬೇರೊ ಬ ಯೋಧಪತಿಯಿರುವನು ನೋಡು ಇವನಿಗೆ ಪ್ರಮಾಥಿಯೆಂದು ಹೆಸರು. ಇವನು ಪೂರದಲ್ಲಿ ಗಜಾ ಕಾರದಿಂದ ಮಹರ್ಷಿಗಳನ್ನು ಬಾಧಿಸುತಿದ್ದ ಶಂ

  • ವೂರದಲ್ಲಿ ಶಂಬಸಾದನನೆಂಬ ರಾಕ್ಷಸನೊಬ್ಬನು, ಗಟಾಕಾರದಿಂದ ಮುನಿ ಗಳನ್ನು ಬಹಳವಾಗಿ ಬಾಧಿಸುತ್ತಿರಲು, ಆ ಮಹರ್ಷಿಗಳು ಹನುಮಂತನ ತಂದೆಯಾ ದ ಕೇಸರಿಯೆಂಬ ವಾನರನನ್ನು ಪ್ರೇರಿಸಿ, ಅವನ ಕೈಯಿಂದ ಆ ರಾಕ್ಷಸನನ್ನು ಕೊಲ್ಲಿ ಸಿದರು ಇದಕ್ಕಾಗಿ ಋಷಿಗಳು ಸಂತೋಷಿಸಿ, ಅವನಿಗೆ ಮಹಾಪರಾಕ್ರಮಶಾಲಿಯಾದ ಹನುಮಂತನು ಪುತ್ರನಾಗಿ ಹುಟ್ಟುವಂತೆ ವರವನ್ನು ಕೊಟ್ಟರು. ಅದುಮೊದಲು ಆನೆ ಗಳಿಗ ಕಪಿಗಳಿಗೂ ವೈರವು ಹುಟ್ಟಿತೆಂದು ಪೂರಕಥೆಯು.

- - - -