ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬೮ ಶ್ರೀಮದ್ರಾಮಾಯಣವು (ಸರ್ಗ: ೨೮. ತಿಳಿಸಬೇಕೆಂದು ಮುಂದೆಬಂದು, ಕೈನೀಡಿ ರಾವಣನಿಗೆ ವಾನರಸೈನ್ಯವನ್ನು ತೋರಿಸುತ್ತ (ಎಲೆ ರಾಜನೆ ! ಅದೋ ! ಅಲ್ಲಿ ಮದಿಸಿದ ಮಹಾಗಜಗಳಂತೆ ಯೂ, ಗಂಗಾತೀರದಲ್ಲಿರುವ ಆಲದ ಮರಗಳಂತೆಯೂ, ಹಿಮವತ್ಪವ್ವತದ ಮೇಲಿನ ಸಾಲೆಯಮರಗಳಂತೆಯೂ, ಮಹಾಕಾಯವುಳ್ಳ ಆ ವಾನರರನ್ನು ನೋಡಿದೆಯಲ್ಲವೆ ? ಎಲೆ ಮಹಾರಾಜನೆ ' ಅವರೊಡನೆ ಯುದ್ಧಕ್ಕೆ ನಿಲ್ಲುವು ದೇ ಅಸಾಧ್ಯವು, ಅವರೆಲ್ಲರೂ ಬಹಳಬಲಾಡ್ಯರು ' ಕಾಮರೂಪಿಗಳು' ದೈತ್ಯ ದಾನವರಿಗೆ ಸಾಟಿಯಾದವರು ! ಯುದ್ಧದಲ್ಲಿ ದೇವತೆಗಳಂತೆ ಪರಾಕ್ರಮವು ಇವರು ! ಅವರಲ್ಲಿ ಕೆಲವರು ಅಲ್ಲಲ್ಲಿ ಒಂಭತ್ತು ಸಹಸ್ರಕೋಟಿಗಳಾಗಿ ಯೂ, ಕೆಲವರು ಐದುಸಹಸ್ರಕೋಟೆಗಳಾಗಿಯೂ, ಕಲವರು ಏಳುಸಹ ಸ್ರಕೋಟಿಗಳಾಗಿಯೂ, ಕೆಲವರು ಸಾವಿರಶಂಖ ಸಂಖ್ಯೆಯುಳ್ಳವರಾಗಿ ಯೂ, ಕೆಲವರು ನೂರಾರುವೃಂದಗಳಾಗಿಯೂ, ಅಲ್ಲಲ್ಲಿ ಬೇರೆಬೇರೆ ಸೇನೆ ಗಳಾಗಿ ಕೂಡಿರುವರು ಇವರಲ್ಲರೂ ಸುಗ್ರೀವನಿಗೆ ಸಹಾಯಕರು ಯಾ ವಾಗಲೂ ಅವನಿಗೆ ಬೆಂಬಲವಾಗಿ ಕಿಸ್ಕಂಧೆಯಲ್ಲಿಯೇ ಇರುವರು ಎಲ್ಲ ರೂ ದೇವಗಂಧರಾಂಶಗಳಿಂದ ಕಾಮರೂಪಿಗಳಾವಿಯ ಹುಟ್ಟಿರುವರು ಎಲೆ ದೇವನೆ' ಅದೊ' ಅಲ್ಲಿ ಅಂದವಾದ ರೂಪಯೌವನಗಳುಳ್ಳ ಇಬ್ಬರು ವಾನರರನ್ನು ನೋಡುತ್ತಿರುವೆಯಲ್ಲವೆ ? ಅವರಿಬ್ಬರಿಗೂ ಮೃಂದಾವಿದರೆಂ ದು ಹೆಸರು ಯುದ್ಧದಲ್ಲಿ ಅವರಿಗೆ ಸಾಟಿಯಾದವರು ಯಾರೂ ಇಲ್ಲ ! ಅವ ರಿಬ್ಬರೂ, ಬ್ರಹ್ಮನ ಅನುಜ್ಞೆಯಿಂದ ಅಮೃತಪಾನ ಮಾಡಿರುವರು ಅವರು ತಾವಿಬ್ಬರ ಈ ಲಂಕೆಯನ್ನು ಧ್ವಂಸಮಾಡಬೇಕಂದಿರುವರು ಅವರಿಬ್ಬರಿ ಗೂ ಪಕ್ಕದಲ್ಲಿ ಸ್ವತಾ ಕಾರವುಳ್ಳ ಮತ್ತಿಬ್ಬರು ವಾನರರು, ಹತ್ತು ಕೋ ಟಿವಾನರಸೈನ್ಯದಿಂದ ಪವ್ರತರಾಗಿ ನಮ್ಮ ಲಂಕೆಯನ್ನು ಕಣ್ಣಿಟ್ಟು ನೋ ಡುತ್ತಿರುವರು ನೋಡು ಅವರಿಬ್ಬರಿಗೂ ಸುಮುಖದುರ್ಮುಖರೆಂದು ಹೆಸರು ಅವರು ಮೃತ್ಯುದೇವನ ಮಕ್ಕಳು ತಂದೆಯಾದ ಯಮನಂತೆಯೇ ಎ ಣೆಯಿಲ್ಲದ ಪರಾಕ್ರಮವುಳ್ಳವರು. ಎಲೆ ರಾಜನೆ' ಇದೋ ಇತ್ತಲಾಗಿ ಮದ ದಾನೆಯಂತೆ ನಿಂತಿರುವ ಒಬ್ಬ ವಾನರರನ್ನು ನೋಡುವೆಯಲ್ಲವೆ?ಇವನಿಗೆ ಕೋ ಪವುಂಟಾದರೆ ಮಾತ್ರ ಸಮುದ್ರವನ್ನೇ ಕಲಕಿಬಿಡಬಲ್ಲನು. ಇವನೇ ಮೊ