ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೯ ಸರ್ಗ ೨೮. | ಯುದ್ದ ಕಾಂಡವು. ದಲು ನಮ್ಮ ಲಂಕೆಗೆ ಬಂದು ಸೀತೆಯನ್ನು ನೋಡಿ, ನಿನ್ನೊಡನೆ ಮಾತಾಡಿ ಹೋದವನು ಮೊದಲೇ ನೀನು ಈತನನ್ನು ನೋಡಿರುವೆ ? ತಿರುಗಿ ಬಂದಿ ರುವನು ನೋಡು? ಇವನು ಕೇಸರಿಯೆಂಬ ವಾನರನ ಕ್ಷೇತ್ರದಲ್ಲಿ ಹುಟ್ಟಿದವ ನು, ವಾಯುವಿಗೆ ಹುಟ್ಟಿದವನೆಂದು ಹೇಳಿಕೊಳ್ಳುವರು ಇವನನ್ನು ಹನು ಮಂತನನ್ನು ವರು ಇವನು ಮೊದಲು ಸಮುದ್ರವನ್ನು ಹಾರಿ ಇಲ್ಲಿಗೆ ಬಂ ದಿದ್ದವನು ಇವನು ಕಾಮರೂಪಿಯ' ಮಹಾಬಲಾಢನು' ಪರತಾಗಾರ ವುಳ್ಳವನು ವಾಯುವಿನಂತೆ ತಡಿಯಿಲ್ಲದ ಗಮನವೇಗವುಳ್ಳವನು ಬಹಳ ಸಮರ್ಥವು' ಮೊದಲು ಈತನು ಹುಟ್ಟಿದಾಗಲೇ ಹಸಿವಿನ ಆತುರದಿಂದ, ಆ ಗಲೇ ಉದಿಸಿಬಂದ ಸೂರೆಬಿಂಬವನ್ನು ನೋಡಿ, ತನ್ನ ಬಲದ ಕೊಬ್ಬಿನಿಂದ (ನನಗೆ ಎಷ್ಟಾದರೂ ಹಸಿವು ತೀರದು ಈ ಸೂರನನ್ನು ಹಿಡಿದು ಭಕ್ಷಿಸು ವೆನು”ಎಂದು ಮನಸ್ಸಿನಲ್ಲಿ ನಿರ್ಧರಿಸಿಕೊಂಡು, ಆ ಸೂರೆಬಿಂಬವನ್ನೇ ಕಿ ತು ತಿನ್ನ ಬೇಕೆಂದೆಣಿಸಿ ಮೂರು ಸಹಸ್ರಯೋಜನಗಳ ದೂರದವರೆಗೆ ತಾನಿದ್ದ ಮರುಪರೈತದಿಂದ + ಕೆಳಕ್ಕೆ ಧುಮಿಕಿ, ದೇವಋಷಿದಾನವಾಡಿಗ ಗೂ ಸಮೀಪಿಸಲಸಾಧ್ಯನಾದ ಸೊಲ್ಯನಿಗಿದಿರಾಗಿ ಹೋದನು ಆದರೆ ಆಸೆ ರಬಿಂಬದ ಬಳಿಗೆ ಹೋಗುವುದಕ್ಕೆ ಅವನಿಗೂ ಸಾಧ್ಯವಿಲ್ಲದೆ ಹೋಯಿತು ಅಲ್ಲಿಂದ ಹಾಗೆಯೇ ಉದಯಪರತದಮೇಲೆ ಬಿದ್ದನು ಇವನು ವೇಗದಿಂದ

  • ಇಲ್ಲಿ 'ಸೂಲ್ಯಬಿಂಬವು ಎಲ್ಲಕ್ಕಿಂತಲೂ ಮೇಲಿರುವಾಗ, ಹನುಮಂತನು ಮ ರು ಸಹಸ್ರಯೋಜನಗಳ ದೂರಕ್ಕೆ ಕೆಳಕ್ಕೆ ಧುಮಿಕಿದನೆಂದು ಹೇಳಿದುದು ಹೇಗೆ?' ಎಂಬ ಶಂಕೆಯುಂಟಾಗಬಹುದು ಕೇಸರಿಯೆಂಬ ಹನುಮಂತನ ತಂದೆಯು ಮೇರುಕ ರೈತ ಶಿಖರದಲ್ಲಿ ವಾಸಮಾಡುವನು ಸೂಯ್ಯನು ಆ ಪರತದ ಮಧ್ಯಭಾಗದಲ್ಲಿರುವನು ಈ ಸೂರರಥಮಾರ್ಗಕ್ಕಿಂತಲೂ ಶಿಖರವು ಮೂರುಸಹಸ್ರಯೋಜನಗಳ ಎತ್ತರದ ಲ್ಲಿದ್ದುದರಿಂದ, ಅಲ್ಲಿಂದ ಇಳಿದುಬಂದುದಾಗಿಯೇ ಹೇಳಬೇಕು ಅಥವಾ ಇಲ್ಲಿ ಮೂಲ ದಲ್ಲಿರುವ “ತ್ರಿಯೋಜನಸಹಸ್ರಂತು ಅಧ್ಯಾನಮವಶೀರನಾ ” ಎಂಬ ವಾಕ್ಯದಲ್ಲಿ, ತ್ರಿಯೋಜನಸಹಸ್ರವೆಂಬುದನ್ನು ಅನೇಕ ಜನಗಳಿಗೆ ಉಪಲಕ್ಷಣವಾಗಿಟ್ಟು ಕೊಂ ಡು, ಬಹುದೂರಕ್ಕೆ ಹಾರಿಹೋದನೆಂದೂ ಹೇಳಬಹುದು ಸೂರನಿಗೂ ಭೂ ಮಿಗೂ ಒಂದುಲಕ್ಷಯೋಜನದೂರವಿರುವುದಾಗಿ ನಿರ್ಣಯಿಸಲ್ಪಟ್ಟಿರುವುದರಿಂದಹಾಗೆ ಗ್ರಹಿಸಬೇಕಾಗುವುದು