ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೭೧ ಸರ್ಗ ೨೮ | ಯುದ್ಧಕಾಂಡವು ಭೇದಿಸಬಲ್ಲನು ! ಪರೂತಗಳನ್ನೂ ಪುಡಿಮಾಡುವನು ' ಮೃತ್ಯುವಿನಂತೆ ಕೋ ಪವುಳ್ಳವನು' ಇಂದ್ರನಂತೆ ಪರಾಕ್ರಮವುಳ್ಳವನು ನೀನುಜನಸ್ನಾನದಿಂ ದ ಕದ್ದು ತಂದಿರುವ ಸೀತೆಯೆಂಬವಳು ಇವನ ಹೆಂಡಿತಿಯೇ ' ಎಲೆ ರಾಜನೆ | ಇವನೇ ರಾಮನು ' ನಿನ್ನ ಮೇಲೆ ಯುದ್ಧಕ್ಕಾಗಿ ದಂಡೆತ್ತಿ ಬರುತ್ತಿರುವನು ಅದೋ' ಅವನ ಬಲಪಾರ್ಶ್ವದಲ್ಲಿ, ಅಚ್ಚ ಬಂಗಾರದಂತೆ ಮೈಬಣ್ಣವುಳ್ಳವ ನಾಗಿಯೂ, ವಿಸ್ತಾರವಾದ ಎದೆಯುಳ್ಳವನಾಗಿಯೂ, ಕೋಪದಿಂದ ಕೆಂ ಸೇರಿದ ಕಣ್ಣುಳ್ಳವನಾಗಿಯೂ, ಸುರಳಿಗಟ್ಟಿದ ಕಪ್ಪಾದ ತಲೆಕೂದಲು ತೃವನಾಗಿಯೂ ಇರುವ ಆ ರಾಜಕುಮಾರನನ್ನು ನೋಡಿದೆಯಾ ? ಅವನೇ ಆ ರಾಮನಿಗೆ ತಮ್ಮನಾದ ಲಕ್ಷಣನೆಂಬವನು ರಾಮನಿಗೆ ಇವನು ಪ್ರಾಣ ದಂತೆ ೩ ಯನಾದವನು ಇವನು ರಾಜನೀತಿಯಲ್ಲಿಯೂ, ಯುದ್ಧದಲ್ಲಿಯೂ ಬಹಳ ನಿವಣನು ಸಮಸ್ತ ತಾಸಗಳನ್ನೂ ಬಲ್ಲವನು ಶತ್ರುಗಳ ವೀರ ವನ್ನು ಸಹಿಸತಕ್ಕವನಲ್ಲ ' ಲೋಕದಲ್ಲಿ ಇವನನ್ನು ಜಯಿಸುವುದು ಬೇರೆ ಬ್ಬರಿಗೆ ಸಾಧ್ಯವೇ ಇಲ್ಲ ಬಹಳಜಯಶೀಲನು ಪರಾಕ್ರಮಶಾಲಿಯು'ಬಲದಲ್ಲಿ ಯೂ, ಬುದ್ಧಿಯಲ್ಲಿಯೂ ಮಲೆನಿಸಿಕೊಂಡವನು ರಾಮಸಿಗೆ ಬಲದ ಭು ಜದಂತೆಯೂ, ಹೊರಗಿನ ಪ್ರಾಣದಂತೆಯೂ ಇರುವನು ಈತನು ರಾಮನ ಕಲಸಕ್ಕಾಗಿ ಪ್ರಾಣವನ್ನಾ ದರೂ ಕೂಡುವನು ರಾಮನಿಗೆ ಸ್ವಲ್ಪವೂ ಶ್ರಮವಿಲ್ಲದಂತೆ ತಾನೊಬ್ಬನೇ ನಿಂತು ಇಲ್ಲಿನ ಸಮಸ್ಯರಾಕ್ಷಸರನ್ನೂ ಕೂ ಕ್ಲಬೇಕೆಂದು ಆತುರಪಡುತ್ತಿರುವನು. ಅದೋ ! ಅಲ್ಲಿ ರಾಮನ ಎಡಭಾ ಗದಲ್ಲಿ ನಿಂತಿರುವವನನ್ನು ನೋಡಿದೆಯಾ? ಅವನೇ ಮುಂದೆ ಈ ನಮ್ಮ ಲಂ ಕಾರಾಜ್ಯಕ್ಕೆ : ರಾಜನಾಗಬೇಕಾದ ನಮ್ಮ ವಿಭೀಷಣನು' ಅವನನ್ನು ಸ್ತುತಿ ನಿಂತಿರುವ ನಾಲ್ಕು ಮಂದಿರಾಕ್ಷಸರನ್ನು ನೋಡು ಎಲೆ ಮಹಾರಾಜನೆ ' ಆ ಗಲೇ ರಾಮನು, ತಾನು ಆವಾಪಸಮಸ್ಸ ಕಾಮನಾದುದರಿಂದ ಲಂಕಾರಾ ಜ್ಯವನ್ನ ಪೇಕ್ಷಿಸದ ಮಹಾಶ್ರೀಮಂತನಾದರೂ, ವಿಭೀಷಣಸುಗ್ರೀವಾದಿ

  • ಇಲ್ಲಿ ರಾಚಾಯ್‌ಷ ವಿಭೀಷಣಃ ಎಂದು ಮೂಲವು ಇಲ್ಲಿ 'ಹಿ” ಎಂಬವ ವರ್ಣವು ಗಾಯತ್ರಿಯ ಹದಿನಾರನೆಯ ಅಕ್ಷ"ವಾದುದರಿಂದ, ಇಲ್ಲಿ ಹದಿನಾರನೆಯ ಗ್ರಂಥ ಸಹಸ್ರವು ಆರಂಭಿಸುವುದೆಂದು ಗ್ರಾಹ್ಯವು