ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ, ೨.] ಯುದ್ಧಕಾಂಡವು. ೨೦೭೫ ಹಾಗೆ ನಾವು ಸೀತಾನ್ವೇಷಣಕ್ಕಾಗಿ ಪ್ರಯತ್ನಿಸಿದ ಕಾಠ್ಯವೇನೋ ಬಹಳ ತೃಪ್ತಿಕರವಾಗಿಯೇ ನೆರವೇರಿತು ' ಆದರೇನು ? ಮುಂದೆ ನಾವೆಲ್ಲರೂ ದುಸ್ತ ರವಾದ ಸಮುದ್ರವನ್ನು ದಾಟುವುದು ಹೇಗೆ ? ಇದನ್ನು ನೆನೆಸಿಕೊಂಡರೆ ಈಗಿನ ಕಾರೈಸಿದ್ದಿಯಿಂದುಂಟಾದ ನನ್ನ ಸಂತೋಷವೂ ತಗ್ಗಿ ಮನಸ್ಸಿಗೆ ಬಹಳ ಕಳವಳವುಂಟಾಗುವುದು. ಈ ಕಪಿಗಳೆಲ್ಲರೂ ಆಷ್ಟು ದುಸ್ತರವಾದ ಆ ಮಹಾಸಮುದ್ರವನ್ನು ದಾಟಿ, ಆದರ ದಕ್ಷಿಣತೀರವನ್ನು ಹೇಗೆ ಸೇರಬಲ್ಲರು? *ನಾವೆಲ್ಲರೂ ಸಮುದ್ರವನ್ನು ದಾಟಿಬರುವೆವೆಂಬ ಭರವಸವನ್ನು ಸೀತೆಗೂ ಕೊಟ್ಟು ಬಂದಾಯಿತು. ಇನ್ನು ಈ ಕಪಿಗಳೆಲ್ಲರನ್ನೂ ಆ ದಕ್ಷಿಣ ತೀರಕ್ಕೆ ಸಾಗಿ ಸುವ ಉಪಾಯವೇನು !” ಎಂದನು. ಮಹಾಬಾಹುವಾಗಿಯೂ, ಶತ್ರುಸೂ ದನನಾಗಿಯೂ ಇರುವ ಆ ರಾಮನು ಚಿಂತೆಯಿಂದ ಕೊರಗುತ್ತ ಸುಮ್ಮನೆ ತನ್ನಲ್ಲಿ ತಾನು ಧ್ಯಾನಿಸುತ್ತಿದ್ದನು ಇಲ್ಲಿಗೆ ಒಂದನೆಯ ಸರ್ಗವು. ++ ಸುಗ್ರೀವನು ರಾಮನಿಗೆ ಸಮಾ ಧನವನ್ನು ಹೇಳಿದುದು.ww ಹೀಗೆ ದುಃಖದಿಂದ ಕರಗುತ್ತಿರುವ ದಶರಥಪತ್ರನಾದ ರಾಮನ ನ್ನು ನೋಡಿ, + ಮಿತ್ರಗುಣಸಂಪನ್ನ ನಾದ ಸುಗ್ರೀವನು, ದುಃಖನಿವಾರಕಗ ಳಾದ ಮಾತುಗಳಿಂದ ಅವನನ್ನು ಕುರಿತು, ರಾಮಾ ' ಇದೇನು ” ನೀನೂ ಹೀಗೆ ಕುದ್ರಜನದಂತೆ ದುಃಖಿಸುವುದೆಂದರೇನು ? ದುಃಖಿಸಬೇಡ ! ಕೃತ

  • ಇಲ್ಲಿ ಯದ್ಯಪ್ಷತು ವೃತ್ತಾಂತೋ ವೈದೇಹಾ ಗದಿತೋಮು' ಸಮುದ್ರ ಪಾರಗಮನೇ ಹರೀಣಾಂ ಕಿಮಿವೋತ್ರಮ್” ಎಂದು ಮೂಲವು, ಇಲ್ಲಿ 'ಸೀತೆಯ ವೃ ತಾಂತವನ್ನೇನೋ ನನಗೆ ತಿಳಿಸಿದುದಾಯಿತು, ಇದರ ಮುಂದೆ ಸಮುದ್ರವನ್ನು ದಾ ಟುವುದಕ್ಕು ಪಾಯವೇನು?” ಎಂದು ಅಕ್ಷಾಂತರವನ್ನೂ ಹೇಳಬಹುದು

↑ ಇಲ್ಲಿ ಮಿತ್ರಗುಣಸಂಪನ್ನ ನೆಂದರೆ, “ ಆಪದ್ಯುನ್ಮಾರ್ಗಗಮನೇ ಕಾರ ಕಾಲಾ ತ್ಯಯೇಷುಟ | ಅಪೃಷ್ಠೆಪಿ ಹಿತಾನ್ವೇಮೇ ಬಯಾತ್ಕಲ್ಯಾಣ ಭಾಷಿತಂ” ಎಂದೂ 'ಶುಚಿತಾ ತ್ಯಾಗಿತಾ ಶ್ರಂ ಸಮಾನಸುಖದುಃಖಿತಾ / ಅನುರಾಗಶ್ಯದಾಕ್ಷಿಣ್ಯಂ ಸತ್ಯ ತಾಚ ಸುಹೃದ್ಗುಣಾಃ || ಎಂದೂ ಹೇಳಿರುವ ಮಿತ್ರಲಕ್ಷಣವನ್ನನುಸರಿಸಿ ಸುಗ್ರೀವನು ರಾಮನ ಸುಖದುಃಖಗಳಿಗೆ ತಾನೂ ಸಮಭಾಗಿಯಾಗಿ ನಿಂತು ಸಮಾಧಾನವನ್ನು ಹೇಳಿದುದಾಗಿ ಭಾವವು.