ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩೪ ಶ್ರೀಮದ್ರಾಮಾಯಣವು {ಸರ್ಗ ೨೯. ತೃ ವಾನರರಾಜನಾದ ಸುಗ್ರೀವನನ್ನೂ ಕ್ರಮವಾಗಿ ನೋಡುತ್ತ ಬಂದನು ಹಾಗೆಯೇ, ಗಜ, ಗವಾಕ್ಷ, ಗನಯ, ಮೈಂದ, ದ್ವಿವಿದರೇ ಮೊದಲಾದ ಯೂರಪತಿಗಳನ್ನೂ , ವಾಯುಪುತ್ರನಾದ ಅಂಗದನನ್ನೂ, ಮಹಾಪರಾ ಕ್ರಮಿಯಾದ ಹನುಮಂತನನ್ನ, ದುರ್ಜಯನಾದ ಜಾಂಬವಂತನನ್ನೂ, ಸುಷೇಣನನ್ನೂ, ಕುಮದನನ , ನೀಲನನ್ನೂ , ನಲವನ್ನೂ ನೋಡಿದನು ಇವರೆಲ್ಲರನ್ನೂ ನೋಡಿದಮೇಲೆ ಅವನ ಮನಸ್ಸಿಗೆ ಸ್ವಲ್ಪವಾಗಿ ಭಯವು ತೋರಿತು ಹಾಗಿದ್ದರೂ ಆ ಭಯವನ್ನು ಹೊರಕ್ಕೆ ತೋರಿಸದೆ, ಶತ್ರುಸ್ತುತಿ ಯನ್ನು ಮಾಡುತಿದ್ದ ಆ ಶಕಸಾರಣರ ಮಾತಿಗೆ ಕೋಪಗೊಂಡು, ಅವರ ನ್ನು ಪರುಷವಾಕ್ಯಗಳಿಂದ ಬೆದರಿಸಿದನು ಎನಯದಿಂದ ನಮ್ರರಾಗಿ ನಿಂತಿ ದ ಆ ಶಕಸಾರಣರಿಬ್ಬರನ್ನೂ ನೋಡಿ, ರಾವಣನು ಕೂಪುಂದ ತಡವರಿ ಸುವ ನುಡಿಗಳಿಂದ (Jಲ ಚಾರರೆ' ಸಾಕು ಸುಮ್ಮನಿರಿ? ಸಿಗ್ರಹಾನುಗ್ರಹಗ ಇಲ್ಲಿ ಸಮರ್ಥನಾದ ರಾಜನಮುಂದೆ, ಅವನ ಆಶ್ರಯಂದ ಬದುಕುತ್ತಿರುವ ಮಂತ್ರಿಗಳು, ಅವರ ಮನಸ್ಸಿಗೆ ಹಿತವಾದ ಮಾತನ್ನು ಹೇಳುವುದ.: ಎ ಷ್ಟು ಮಾತ್ರವೂ ಯುಕ್ತವ ಹೀರುವಾಗ ನಮ್ಮ ಶತ್ರುಗಳು ನಮ್ಮ ಮೇಲೆ ದಂಡೆತ್ತಿ ಬಂಎರವಾಗೆ, ಈ ಯದ್ವಾರಂಭ ಕಾಲದಲ್ಲಿ, ಸೀಎಬ್ಬ ರೂ ಹೀಗೆ ಆ ನನ್ನ ಶತ್ರುಗಳನ್ನೆ ನನ್ನ ಮುಂದೆ ಸೋತ್ರಮಾಡುತ್ತಿರು ವಿರಲ್ಲಾ' ನಿಮಗೆ ರಾಜನೀತಿಶಾಸ್ತ್ರದಲ್ಲಿ ಸಾರಭೂತವಾದ ನೃತ್ಯರ ನಡತೆ ಯ ತಿಳಿಲ್ಲವೆಂದು ತೋರುತ್ತಿದ ಜ್ಞಾನವೃದ್ಧರಾಗಿಯೂ, ವಯೋವೃ ದೃರಾಗಿಯೂ, ತಿಲಸಂಪನ್ನರಾಗಿಯ ಇದು ನೀತಿಶಾಸ್ತ್ರಗಳನ್ನು ಪದೇತಿ ಸವ ಗುರುಗಳಲ್ಲಿ, ಇದುವರೆಗೆ ನೀವು ಸೇವೆಮಾಡಿದುದೆಲ್ಲವೂ ವ್ಯರ್ಥವು ನೀವು ಎಷ್ಟು ರಾಜನೀತಿಶಾಸ್ತ್ರವನ್ನೂ ಬದರೇನು? ಅದರ ಸೂಕ್ಷಾರ್ಘಗಳ ನ್ನು ಸಿವೂ ಚೆನ್ಯಾಗಿ ತಿ- ಎಲ್ಲ ಒಂದುವೇಳ ಆ ಅರ್ಥವನ್ನು ತಿಳದಿದ್ದರೂ ನಿಮ್ಮಲ್ಲಿ ಅದಕ್ಕೆ ತಕ್ಕ $ಸುಷ್ಮಾನತ್ತು ಇದರಿಂದ, ನೀವು ಕೇವಲಜ್ಞಾನಭಾ ರವನ್ನು ಹೊತ್ತು ತಿರುಗುವಂತಾಯಿತೇ ಹೊರತು, ಆ ಜ್ಞಾನದಿಂದ ಉಪ ಯೋಗವನ್ನು ಪಡೆದವರಲ್ಲಿ ಹೀಗೆ ನಿಮ್ಮಂತಹ ಮರ್ಖರಾದ ಮಂತ್ರಿಗ ಳಿಂದ ಕೂಡಿದ ನಾನು, ಯಾವಾಗಲೂ ಶತ್ರುಗಳಿಂದ ಹತನಾಗಿ ಸಾಯ ಬೇಕಾಗಿಯೇ ಇತ್ತು' ಹಾಗಿದ್ದರೂ ದೈವಯೋಗದಿಂದ ನಾನು ಇನ್ನೂ