ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩ ಸರ್ಗ, ೩೦.] ಯುದ್ಧಕಾಂಡವು. ದುಷ್ಟನೆಂಬುದಕ್ಕಾಗಿ ಅಲ್ಲಿದ್ದ ವಾನರಯೂಥಪತಿಗಳ ವಶಕೊಪ್ಪಿಸಿಬಿಟ್ಟ ನು. ಆಗ ಅಲ್ಲಿದ್ದ ವಾನರರೆಲ್ಲರೂ ಸೇರಿ, ಆ ಶಾರ್ದೂಲನನ್ನು ಸುತ್ತಿ ಮುತ್ತಿ ಸಾಯುವಹಾಗೆ ಕೊಲ್ಲುತ್ತಿರಲು, ಅದನ್ನು ನೋಡಿ ಪರಮದಯಾಳು ವಾದ ರಾಮನು ಮರುಕಗೊಂಡು ಅವನನ್ನು ಬಿಡಿಸಿದನು ಹಾಗೆಯೇ ವಾ ನರರು ಅಲ್ಲಲ್ಲಿ ಸಿಕ್ಕಿದ ಇತರಚಾರರನ್ನೂ ಹೊಡೆಯುತ್ತಿರಲು, ರಾಮನು ಅವರೆಲ್ಲರನ್ನೂ ಬಿಡಿಸಿಬಿಟ್ಟೆನು ಹೀಗೆ ಲಂಕೆಯಿಂದ ಬಂದ ರಾಕ್ಷಸದೂತ ರೆಲ್ಲರೂ, ವಾನರರ ಕೈಗೆ ಸಿಕ್ಕಿ ಸತ್ತು ಸುಣ್ಣವಾಗಿ, ಬದುಕಿದರೆ ಸಾಕೆಂದು ನಿಟ್ಟುಸಿರು ಬಿಡುತ್ತ ಹಿಂತಿರುಗಿ ಲಂಕೆಗೆ ಓಡಿಹೋದರು ಅವರೆಲ್ಲರೂ ಪರ ದೇಶದ ವೃತ್ತಾಂತಗಳನ್ನು ಆಗಾಗ ತಿಳಿದುಬರುವುದರಲ್ಲಿ ಬಹಳ ನಿಪುಣ ರಾಗಿದ್ದರೂ, ಈ ವಾನರಸೇನೆಯಲ್ಲಿ ತಮ್ಮ ನೈಪುಣ್ಯವು ಸಾಗದೆ ಹೋದು ದಕ್ಕಾಗಿ ಚಿಂತಾಕ್ರಾಂತರಾಗಿ, ರಾವಣನಬಳಿಗೆ ಹೋಗಿ, ರಾಮನ ಪ್ರಭಾವ ವನ್ನೂ , ಆತನಲ್ಲಿರುವ ಭಯಂಕರವಾನರಸೇನೆಯನ್ನೂ, ಅವರೆಲ್ಲರೂ ಸುವೇ ಲಪತದ ಸಮೀಪದಲ್ಲಿ ಬಂದು ಸೇರಿರುವುದನ್ನೂ ಕ್ರಮವಾಗಿ ತಿಳಿಸಿದ ರು ಇಲ್ಲಿಗೆ ಇಪ್ಪತ್ತೊಂಬತ್ತನೆಯಸರ್ಗವು ರಾಮನು ವಾನರವೀರರೆಡನೆ ಸುವೇಲಾದ್ರಿಯ ). 3 ಸಮೀಪದಲ್ಲಿ ಬಂದಿಳಿದಿರುವುದನ್ನು ಶಾರ್ದೂಲಾದಿ » ಗಳು ರಾವಣನಿಗೆ ತಿಳಿಸಿದುದು ಹೀಗೆ ಶಾರ್ದೂಲನೇ ಮೊದಲಾದ ಚಾರರೆಲ್ಲರೂ, ರಾವಣನಬಳಿಗೆ ಬಂದು,ರಾಮನು ಮಹಾಸೈನ್ಯದೊಡನೆ ಬಂದು ಸುವೇಲಪತದಲ್ಲಿ ಅಸೇ ನೆಯನ್ನಿಳಿಸಿರುವನೆಂದು ರಾವಣನಿಗೆ ತಿಳಿಸಿದರು ಇದನ್ನು ಕೇಳಿ, ರಾವಣನ ಮನಸ್ಸಿನಲ್ಲಿ ಮೊದಲಿದ್ಮಭಯವು ಇನ್ನೂ ಹೆಚ್ಚಿತು ಆಗ ಅವನು ಶಾರ್ದೂ ಲನನ್ನು ನೋಡಿ (C ಶಾರ್ದೂಲಾ ' ಇದೇನು ? ನಿನ್ನ ಮುಖದ ಕಾಂತಿಯು ಮೊದಲಿನಂತೆ ಉಲ್ಲಾಸದಿಂದಿಲ್ಲ ! ಬಹಳ ಹೀನನಂತೆಯೂ ಕಾಣುವೆಯ ಲ್ಲಾ ಕಾರಣವೇನು ? ಕೋಪಗೊಂಡ ಆಶತ್ರುಗಳ ಕೈಗೆ ನೀನು ಸಿಕ್ಕಲಿ ಲ್ಲವಷ್ಟೇ! ಅಲ್ಲಿನ ಸಂಗತಿಗಳೆಲ್ಲವನ್ನೂ ಚೆನ್ನಾಗಿ ತಿಳಿಯುವುದಕ್ಕೆ ತಕ್ಕ ಅ ವಕಾಶವೂ ಸಿಕ್ಕಿತಷ್ಟೆ ?” ಎಂದನು. ಹೀಗೆ ರಾವಣನು ತನ್ನನ್ನು ಪ್ರಶ್ನೆ ಮಾ