ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೭೮ ಶ್ರೀಮದ್ರಾಮಾಯಣವು [ಸರ್ಗ, ೩೦. ಡುತ್ತಿರಲು, ಶಾರ್ದೂಲನು, ತಾನು ವಾನರಸೇನೆಯಲ್ಲಿ ಪಟ್ಟ ಕಷ್ಟವನ್ನು ನೆನೆಸಿಕೊಂಡು, ಭಯದಿಂದ ನಡುಗುತ್ತ, ಕುಗ್ಗಿದ ಧ್ವನಿಯಿಂದ ರಾವಣನ ನ್ನು ಕುರಿತು, 'ಎಲೆ ರಾಜನೆ' ನಾನೇನು ಹೇಳಲಿ? ಆ ವಾನರೋತ್ತಮರ ರ ಹಸ್ಯವನ್ನು ತಿಳಿಯಬೇಕೆಂದರೆ, ಎಷ್ಟೆ” ನಿಪುಣರಾದ ಗೂಢಚಾರರಿಗೂ ಸಾ ಧ್ಯವಿಲ್ಲ ಆ ವಾನರರೆಲ್ಲರೂ ಬಹಳ ಪರಾಕ್ರಮಿಗಳು ' ಬಹಳ ಬಲಾಡ್ಯರು' ಇದರಮೇಲೆ ಶ್ರೀರಾಮಸಂದ ಗಕಿತರಾಗಿರುವುದರಿಂದ, ನನಗೆ ಅವರಡನೆ ಮಾತಾಡುವುದೇ ಶಕ್ಯವಲ್ಲ' ಇು ಅವರನ್ನು ಪರೀಕ್ಷಿಸುವುದೆಂದರೇನು ? ದಾರಿಯಲ್ಲಿ ಯಾವಕಡೆಯನ್ನು ನೋಡಿದರೂ ಪತಾಕಾರವುಳ್ಳ ವಾನ ರರು ತುಂಬಿರುವರು ಹಾಗಿದ್ದರೂ ನಾನು ಎಷ್ಟೇ ಪ್ರಯತ್ನ ಎಂದ ಆ ಸೇನೆಯೊಳಗೆ ಪ್ರವೇಶಿಸಿಬಿಟ್ಟೆನು ನಾನು ಅಲ್ಲಿಗೆ ಪ್ರವೇಶಿಸಿದುದುಮಾ। ತ್ರವೇಹೊರತು ಬೇರೆ ಯಾವ ಕಾರವೂ ಸಾಗಲಿಲ್ಲ ಒಂದುಕಡೆಯಾದ ರೂ ಸುತ್ತಿ ನೋಡಲಿಲ್ಲ ಇಷ್ಟರಲ್ಲಿ ಯೇ ಅವರು ನನ್ನ ನ್ನು ಕಂಡುಹಿಡಿದು ಬಿಟ್ಟರು ನಮ್ಮ ಜಾತಿಯ ಕೆಲವು ರಾಕ್ಷಸರೇ' ನನ್ನನ್ನು ಬಲಾತ್ಕಾರದಿಂದ ಹಿಡಿದುಕೊಂಡು ಜೋಗಿ ವಾನರರ ಕೈಗೊಪ್ಪಿಸಿಬಿಟ್ಟರು ಆಗಲೆ ವಾನರ ರೆಲ್ಲರೂ ಸೇರಿ, ಮುಷ್ಟಿಗಳಿಂದಲೂ, ಮೊಳಕಾಲುಗಳಿಂದಲೂ, ಅಂಗೈಗ ಳಿಂದಲೂ, ಹೊಡೆದು, ಬಡಿದು, ಹಲ್ಲುಗಳಿಂದ ಕಡಿದು, ನನ್ನನ್ನು ಸಾಯುವ ಸ್ಥಿತಿಗೆ ತಂದುಬಿಟ್ಟರು ಬಲಾಡ್ಯರಾದ ಆವಾನರರೆಲ್ಲರೂ ನನ್ನ ಕೈಕಾಲುಗ ಛನ್ನು ಕಟ್ಟಿ,ತಮ್ಮ ಸೇನೆಯಸುತ್ತಲೂ ಮೆರವಣಿಗೆತಂದರು ನನ್ನ ಅಂಗಾಂ ಗಗಳೆಲ್ಲವೂ ರಕ್ತಮಯವಾದುವು ನನಗೆ ಮೈಮೇಲೆ ಪ್ರಜ್ಞೆ ತಪ್ಪಿದಂತಾ ಯಿತು ನನ್ನ ಇಂದ್ರಿಯಗಳೆಲ್ಲವೂ ಕದಲಿಹೋದುವು ಹೀಗೆ ವಾನರರೆಲ್ಲರೂ ನನ್ನ ನ್ನು ಸಾಯಬಡಿಯುತ್ತಿರಲು, ಅವರಿಗೆ ನಾನು ಎಷ್ಟೋ ವಿಧದಿಂದ ಕೈಮುಗಿದು ಬೇಡಿಕೊಳ್ಳುತಿದ್ದನು ಹಾಗೆಯೇ ಅವರು ನನ್ನ ನ್ನು ತಮ್ಮ ಸೈನ್ಯದಲ್ಲೆಲ್ಲಾ ಇದೊ ಇವನು ಚಾರನು 1 ರಾಕ್ಷಸದೂತನು ” ಎಂದು ಸಾರುತ್ತ, ಸುತ್ತಿಸಿಕೊಂಡು ಬಂದು ರಾಮನಿದ್ದ ಸ್ಥಲಕ್ಕೆ ಕರೆತಂದರು 'ಅಲ್ಲಿ ಯೂ ನಾನು, ನನ್ನನ್ನು ಪ್ರಾಣದಿಂದ ಬಿಟ್ಟರೆ ಸಾಕೆಂದು ಕೈಮುಗಿದು ಬೇ ಡುತಿದ್ದೆನು ಆಗ ರಾಮನೇ ನನ್ನನ್ನು ದಯೆಯಿಂದ ರಕ್ಷಿಸಿದನು.ಹೇಗೋ ಅದೃ ವ್ಯವಶದಿಂದ ಬದುಕಿ ಬಂದೆನು.ಅದೋ ಅಲ್ಲಿ ರಾಮನು, ಬೆಟ್ಟಗಳಿಂದಲೂ,