ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೩೦ | ಯುದ್ಧಕಾಂಡವು ೨೨೭೯ ಕಲ್ಲುಗಳಿಂದಲೂ, ಮಹಾಸಮುದ್ರವನ್ನು ತುಂಬಿ, ಸೇತುವಿನ ಮೂಲಕವಾಗಿ ಸಮುದ್ರವನ್ನು ದಾಟಿ, ಸಾಯುಧಗಳೊಡನೆ ಸಿದ್ಧನಾಗಿ ಬಂದಿರುವನು. ಇನ್ನು ತೀಘ್ರದಲ್ಲಿಯೇ ನಮ್ಮ ಲಂಕೆಯ ಬಾಗಿಲಿಗೂ ಬರುವುದರಲ್ಲಿರುವ ನು ಗರುಡವ್ಯೂಹವಾಗಿ ಏರ್ಪಟ್ಟಿರುವ ತನ್ನ ದೊಡ್ಡವಾನರಸೈನ್ಯದೊ ಡನೆ, ರಾಮನು ತಪ್ಪದೆ ಈ ನಮ್ಮಲಂಕಗೆ ದಂಡೆತ್ತಿ ಬರುವನು ಶೀಘ್ನು ದಲ್ಲಿಯೇ ಅವನು ನಮ್ಮ ಹೊರಗಿನ ಪ್ರಾಕಾರವನ್ನೂ ಮುತ್ತುವನು ನೀನು ಈಗಲೇ ರಾಮನಿಗೆ ಸೀತೆಯನ್ನೊಪ್ಪಿಸಿಬಿಡು' ಇಲ್ಲವೇ ಅವನೊಡನೆ ಸರಿ ಯಾಗಿ ಯುದ್ಧವನ್ನು ನಡೆಸುವುದಕ್ಕಾದರೂ ತಕ್ಕ ಸನ್ನಾ ಹಗಳಿಂದ ಸಿದ್ಧ ನಾಗಿರು' ತೀಘ್ರದಲ್ಲಿಯೇ ಈ ಎರಡರಲ್ಲಿ ಯಾವುದಾದರೂ ಒಂದನ್ನು ನ ಡೆಸಬೇಕು ” ಎಂದನು ಶಾರ್ದೂಲನು ಹೇಳದ ಈ ವಾಕ್ಯವನ್ನು ಕೇಳಿ ರಾವಣನು ತನ್ನಲ್ಲಿ ತನೇ ಸ್ವಲ್ಪಹೊತ್ತಿನವರೆಗೆ ಆಲೋಚಿಸಿ ತಿರುಗಿ ಶಾ ರ್ದೂಲನನ್ನು ಕುರಿತು, (ಾರ್ದೂಲಾ' ಏನು ಹೇಳಿದೆ ? ಸೀತೆಯನ್ನು ರಾ ಮನಿಗೆ ಕೊಡುವುದೆ” ಸಾಕು ಸುಮ್ಮನಿರು | ದೇವಗಂಧಶ್ವದಾನವರಲ್ಲರೂ ಸೇರಿ ಏಕಕಾಲದಲ್ಲಿ ನನ್ನ ಸ್ವಿ ದಿರಿಸಿದರೂ, ಸಮಸ್ತಲೋಕಗಳೂ ಒಂದಾಗಿ ಸೇರಿ ಬಂದು ನನ್ನ ನ್ನು ಹೆದರಿಸಿದರೂ, ನಾನು ಸೀತೆಯನ್ನು ರಾಮನಿಗೆ ಕೂ ಡುವವನಲ್ಲ ಆ ಮಾತನ್ನು ಬಿಡು' ” ಎಂದು ಹೇಳಿ, ತಿರುಗಿ ರಾವಣನು ಮುಂದೆ ನಿಂತಿದ್ದ ಆ ಶಾ ರ್ದೂಲನನ್ನು ಕುರಿತು < ಎಲೆ ಚಾರನೆ' ಅದು ಹಾಗಿರಲಿ' ಸೀನು ಆ ವಾನರಸೇನೆಯನ್ನು ಚೆನ್ನಾಗಿ ಸುತ್ತಿ ನೋಡಿಬಂಟರು ವೆಯಷ್ಟೆ” ಅವರಲ್ಲಿ ಪ್ರಧಾನಶೂರರಾರು' ಅವರ ಆಕಾರವೆಂತದು' ಅ ವರ ಶಕ್ತಿಯೇನು? ಯಾರನ್ನಿ ದಿರಿಸುವುದು ಸುಲಭವಲ್ಲ? ಅವರು ಯಾರ ಮ ಕೃಳು? ಯಾರ ಮುಮ್ಮಕ್ಕಳು ? ಈ ಸಂಗತಿಗಳೆಲ್ಲವನ್ನೂ ಯಥಾಸ್ಥಿತವಾ ಗಿ ನನಗೆ ತಿಳಿಸು' ಇದನ್ನು ನೀನು ತಿಳಿಸಿದರೆ, ನಾನು ಆ ವಾನರರ ಬಲಾಬ ಅವನ್ನು ಚೆನ್ನಾಗಿ ತಿಳಿದು, ಅವರ ವಿಷಯದಲ್ಲಿ ಹೇಗೆ ನಡೆಯಬೇಕೊ ಅದ ನ್ನು ನಿರ್ಣಯಿಸಿಟ್ಟುಕೊಳ್ಳಬಹುದು, ಯುದ್ಧವನ್ನು ನಡೆಸುವವರು ಮೊ ದಲು ತಮ್ಮ ಶತ್ರುಗಳ ಬಲಾಬಲವನ್ನು ತಿಳಿದುಕೊಳ್ಳಬೇಕಾದುದು ಅ ತ್ಯವಶ್ಯವು,” ಎಂದನು. ಆಮೇಲೆ ಆ ಶಾರ್ದೂಲನೆಂಬಚಾರನು ರಾವಣನ ಪ್ರಶ್ನೆಗೆ ತಕ್ಕಂತೆ ಕ್ರಮವಾಗಿ ಉತ್ತರವನ್ನು ಹೇಳುವುದಕ್ಕೆ ತೊಡಗಿ -'ಎಲೆ