ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರ್ಗ ೩೧ | ಯುದ್ಧಕಾಂಡವ ೨೨೮೩ ಡೆಸುತಿದ್ದು, ಕೊನೆಗೆ ಯಾವುದು ಕಾಲೋಚಿತವೆಂದು ಚೆನ್ನಾಗಿ ನಿರ್ಧರಿಸಿ ಕೊಂಡು, ಆ ಮಂತ್ರಿಗಳನ್ನು ಹಿಂದಕ್ಕೆ ಕಳುಹಿಸಿ, ತಾನೂ ತನ್ನ ಮನೆಗೆ ಹೋದನು, ಆಮೇಲೆ ರಾವಣನು, ಮಾಯೆಯಲ್ಲಿ ನಿಪುಣನಾಗಿಯೂ, ಮ ಹಾಬಲಾಢನಾಗಿಯೂ ಇದ್ದ ವಿದ್ಯುಜ್ಜಿಹೃನೆಂಬ ರಾಕ್ಷಸನನ್ನು ಕರೆದು, ಅವನನ್ನೂ ತನ್ನ ಹಿಂದೆ ಕರೆದುಕೊಂಡು ಸೀತೆಯಿದ್ಧಸ್ಥಲಕ್ಕೆ ಹೊರಟನು. ಸೀತೆಯನ್ನು ಸಮೀಪಿಸುವಷ್ಟರಲ್ಲಿ ರಾವಣನು ಮಾಯಾವಿಯಾದ ಆ ವಿ ದ್ಯುಜ್ಜಿಹೂನನ್ನು ನೋಡಿ (ಎಲೆ ವಿದ್ಯುಜ್ಜಿಹ್ವಾ' ಈಗ ನಾವು ಏನಾದರೂ ಒಂದು ಮಾಯೆಯಿಂದ ಸೀತೆಯನ್ನು ಮೋಸಪಡಿಸಬೇಕು " ಅದಕ್ಕಾಗಿ ನೀನು ಈಗಲೇ ಹೋಗಿ, ನಿನ್ನ ಮಾಯೆಯಿಂದ ರಾಮನ ತಲೆಯ ಹಾಗೆಯ ಒಂದು ತಲೆಯನ್ನೂ , ಅವನ ಧನುಸ್ಸಿನಂತೆಯ ಬಾಣದಿಂದ ಕೂಡಿದ ಒಂದು ಮಹಾಧನುಸ್ಸನ್ನೂ ಮಾಡಿ ಸಿದ್ಧವಾಗಿಟ್ಟಿರು” ಎಂದನು ರಾ ವಣನು ಈ ಮಾತನ್ನು ಹೇಳಿದೊಡನೆ ವಿದ್ಯುಜ್ಜಿಹೂನು, ಮಹಾರಾಜನೆ ! ಅಪ್ಪಣೆ' ಹಾಗೆಯೇ ಆಗಲಿ ಎಂದನು ಇದನ್ನು ಕೇಳಿ ರಾವಣನು ಬಹಳ ಸಂತೋಷಗೊಂಡು, ಆ ಸಂತೋಷಕ್ಕೆ ಪ್ರತಿಫಲವಾಗಿ ಬೆಲೆಯುಳ್ಳ ಒಂ ದು ಭೂಷಣವನ್ನು ಅವನ ಕೈಗೆ ಕೊಟ್ಟನು. ಆಮೇಲೆ ರಾಕ್ಷಸರಾಜನಾದ ರಾವಣನು,ಸೀತೆಯನ್ನು ನೋಡಬೇಕೆಂಬ ಆತುರದಿಂದ ಅಶೋಕವನಕ್ಕೆ ಪ್ರ ವೇಶಿಸಿದನು ಎಂದಿಗೂ ದುಃಖಾರ್ಹಳಲ್ಲದ ಸೀತೆಯಾದರೋ ಅಲ್ಲಿ ಮಹಾ ವ್ಯಸನದಿಂದ ಕೊರಗುತ್ತ, ತಲೆಯನ್ನು ತಗ್ಗಿಸಿ, ಬರೀನೆಲದಮೇಲೆ ಕುಳಿತು ತನ್ನ ಪತಿಯನ್ನೇ ಧ್ಯಾನಿಸುತ್ತ ಸಂಕಟದಿಂದ ಕೊರಗುತ್ತಿದ್ದಳು. ಅನೇಕ ಹೊರರಾಕ್ಷಸಿಯರು ಅವಳಮೇಲೆ ಕಾವಲಾಗಿ ಅತ್ತಿತ್ತ ಸುತ್ತುತ್ತಿದ್ದರು. (ಪೂರ್ಣಚಂದ್ರನಿಗೆಣೆಯಾದಮುಖವುಳ್ಳ ಆ ಸೀತೆಯು ಹೀಗೆ ಫೆರರಾಕ್ಷ ಸಿಯರಿಂದ ಪರಿವೃತಳಾಗಿ,ಉತ್ಸಾತಮೇಸುಸಮೂಹಗಳಿಂದ ಆವೃತವಾದ ಚಂದ್ರರೇಖೆಯಂತೆ ಕಾಣುತಿದ್ದಳು ಅವಳ ಮೈಮೇಲೆ ಮುತ್ತೈದೆತನಕ್ಕೆ ಚಿ ಹೃಗಳಾದಕೆಲವು ಭೂಷಣಗಳುಮಾತ್ರವೇ ಕಾಣುತಿದ್ದುವು ಅವಳಾದರೋ ಅಲ್ಲಿ ಗಾಳಿಯಿಂದಾಡಿಸಲ್ಪಟ್ಟ ಹೂಬಳ್ಳಿಯಂತೆ ಸಂಕಟದಿಂದ ತೂಗಾಡುವ ಳು' ಕ್ಷಣಕಾಲದವರೆಗೆ ತನ್ನಲ್ಲಿ ತಾನೇ ರಾಮನೊಡನೆ ಸೇರಿದಂತೆ ಸಂಕಲ್ಕಿ ಸಿಕೊಂಡು ಸಂತೋಷದಿಂದ ಹಿಗ್ಗುವಳು' ಉತ್ತರಕ್ಷಣದಲ್ಲಿಯೇ ತನ್ನ ದು