ಪುಟ:ಶ್ರೀಮದ್ರಾಮಾಯಣವು ಯುದ್ಧಕಾಂಡವು.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೮೪ ಶ್ರೀಮದ್ರಾಮಾಯಣವು (ಸರ್ಗ, ೩೧. ರವಸ್ಥೆಯನ್ನು ಚಿಂತಿಸಿ ದುಃಖದಿಂದ ಕುಗ್ಗುವಳು. ವ್ಯಸನದಿಂದ ಬಣ್ಣಗುಂ ದುವಳು. ಆಳದಿಂದ ಸಿ ಮಿತವಾಗಿ ನಿಂತಿರುವ ಗಂಗಾನದಿಯಂತೆ ದುಃಖಾ ತಿಶಯದಿಂದ ಏನೊಂದೂ ತೋರದೆ ಸ್ತಬ್ದಳಾಗಿರುವಳು ) ಹೀಗೆ ಕುಳಿತಿದ್ದ ಸೀತೆಯ ಸಮೀಪಕ್ಕೆ ಹೋಗಿ ರಾವಣನು, ಅವಳಿಗೆ ದೊಡ್ಡ ಸಂತೋಷವಾ ರ್ತೆಯನ್ನು ಹೇಳುವವನಂತೆ ನಟಿಸುತ್ತ, ಅವಳನ್ನು ಕುರಿತು ನಿರ್ಭಯವಾಗಿ 4(ಎಲೆ ಕಲ್ಯಾಣಿ!ಇದುವರೆಗೆ ನಾನು ನಿನಗೆ ಎಷೋಸಮಾಧಾನಗಳನ್ನು ಹೇ ಳಿದರೂ ಕೇಳದೆ, ಯಾವನ ಆಶ್ರಯವನ್ನು ನಂಬಿ ನನ್ನೊಡನೆ ಅಷ್ಟು ನಿ ಷ್ಟುರವಾಕ್ಯಗಳನ್ನಾಡಿದೆಯೋ, ಆ ನಿನ್ನ ಪತಿಯಾದ ರಾಮನು ಈಗಲೇ ಯುದ್ಧದಲ್ಲಿ ಹತನಾದನು ಖರಾದಿರಾಕ್ಷಸರನ್ನು ಕೊಂದು ನನ್ನೂ ಡನೆ ಅವನು ವೈರವನ್ನು ಬೆಳೆಸಿದುದಕ್ಕೆ ತಕ್ಕ ಫಲವನ್ನು ತೋರಿಸಿಬಿ ಟೈನು ' ಎಲೆ ಸೀತೆ " ನಿನಗಿದ್ದ ಪ್ರಬಲವಾದ ಆಶ್ರಯವನ್ನು ನಿರ್ಮೂ ಲವಾಗಿ ಕಿತ್ತು ಬಿಟ್ಟೆನು ! ಇಂದಿಗೆ ನಿನ ಹೆಮ್ಮೆಯನ್ನು ಮುಂದೆನು ಇನ್ನು ನಾನು ನಿನ್ನನ್ನು ಹಿಂದಿನಂತೆ ಪ್ರಾರ್ಥಿಸಬೇಕಾದ ಅವಶ್ಯಕತೆಯೂ ಇಲ್ಲ. ನಿನ್ನ ವ್ಯಸನದಿಂದಲೇ ನೀನು, ಬೇರೆ ದಿಕ್ಕಿಲ್ಲದುದಕ್ಕಾಗಿ ನನಗೆ ಭಾರೆಯಾಗ ಬಹುದು. ಎಲೆ ಬುದ್ಧಿಯಿಲ್ಲದವಳೆ! ಇನ್ನಾದರೂ ನಿನ್ನ ಛಲವನ್ನು ಬಿಡು. ಸತ್ತವನಿಂದ ನಿನಗಾಗುವುದೇನು ? ಎಲೆ ಭದ್ರೆ' ಈಗಲೂ, ನನ್ನ ಮಾತನ್ನು ಕೇಳು' ನನ್ನ ಭಾರೈಯರೆಲ್ಲರಿಗೂ ನಿನೇ ಈಶ್ವರಿಯಾಗಿರು ' ನೀನು ಮಂದ ಭಾಗೈಯಾದುದರಿಂದಲೇ ಇದುವರೆಗೆ ಕೈಗೆ ಬಂದ ಪುರುಷಾರ್ಥವನ್ನನುಭವಿ ಸುವುದಕ್ಕೂ ಲಭ್ಯವಿಲ್ಲದೆ ಹೋಯಿತು ಎಲೆ ಮೂಢ' ಏನೂ ತಿಳಿಯದಿದ ರೂ ಎಲ್ಲವನ್ನೂ ತಿಳಿದವಳೆಂಬ ಹೆಮ್ಮೆಯು ಮಾತ್ರ ನಿನಗೆ ಪೂರ್ಣವಾಗಿರು ವುದು ಎಲೆ ಸೀತೆ ನಿನ್ನ ಪತಿಯು ವೃತ್ರಾಸುರನ ಸಾವಿನಂತೆ ಭಯಂಕರವಾ ದ ಕೊಲೆಗೆ ಸಿಕ್ಕಿಸತ್ತಿರುವನು. ನಾನು ಅವನನ್ನು ಕೊಂದ ರೀತಿಯನ್ನೂ ತಿಳಿಸುವೆನು ಕೇಳು? ನಿನ್ನ ಪತಿಯಾದ ರಾಮನು ನನ್ನನ್ನು ಕೊಲ್ಲಬೇಕೆಂಬ ಉದ್ದೇಶದಿಂದ, ಸುಗ್ರೀವನ ಕಡೆಯ ದೊಡ್ಡ ವಾನರಸೈನ್ಯದೊಡನೆ ಸಮು ದ್ರತೀರಕ್ಕೆ ಬಂದನಂತೆ ! ಹೀಗೆ ರಾಮನು ಲವಣಸಮುದ್ರದ ಉತ್ತರ ತೀರದಲ್ಲಿ ದೊಡ್ಡ ಸೇನೆಯೊಡನೆ ಬಂದಿಳಿಯುವಷ್ಟರಲ್ಲಿ ಸೂರನು ಮುಳು ಗುತ್ತ ಬಂದನು. ಆ ಸೇನೆಯೆಲ್ಲವೂ ಮಾರ್ಗಾಯಾಸದಿಂದ ಬಹಳವಾಗಿ